Shankar Rao: ‘ಪಾಪ ಪಾಂಡು’ ಖ್ಯಾತಿಯ ಹಿರಿಯ ನಟ ಶಂಕರ್‌ರಾವ್ ನಿಧನ
‘ಪಾಪ ಪಾಂಡು’ ಧಾರವಾಹಿ(Papa Pandu Serial)ಯಲ್ಲಿ ಬಾಸ್ ಬಾಲರಾಜು ಪಾತ್ರ ಶಂಕರ್‌ರಾವ್ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು.
ಬೆಂಗಳೂರು: ‘ಪಾಪ ಪಾಂಡು’ ಧಾರಾವಾಹಿಯ ಕಲಾವಿದ, ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್‌ರಾವ್(Shankar Rao) ಇಂದು(ಅ.18)ನಿಧನರಾಗಿದ್ದಾರೆ. ‘ಸಿಲ್ಲಿ ಲಲ್ಲಿ’, ‘ಮಾಯಾಮೃಗ, ‘ಪರ್ವ’ ಧಾರಾವಾಹಿಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಶಂಕರ್‌ರಾವ್(Papa Pandu Shankar Rao) ನಟರಂಗ ತಂಡದ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಂಕರ್‌ರಾವ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಇದನ್ನೂ ಓದಿ: ನಟಿ ಕತ್ರಿಕಾ ಕೈಫ್ ಜೊತೆಗಿನ ನಿಶ್ಚಿತಾರ್ಥದ ಬಗ್ಗೆ ಕೊನೆಗೂ ಮೌನ ಮುರಿದ ವಿಕ್ಕಿ ಕೌಶಾಲ್..!
ತುಮಕೂರು ಮೂಲದ ಶಂಕರ್‌ರಾವ್ ಅವರು ಪ್ರಸಿದ್ಧ ಧಾರವಾಹಿಗಳು(Kannada Serials) ಮತ್ತು ಅನೇಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು. ಅಪಾರ ಅನುಭವ ಉಳ್ಳ ಅವರು ಹಾಸ್ಯ ಪಾತ್ರಗಳಲ್ಲಿ ಮಿಂಚಿ ಕನ್ನಡಿಗರನ್ನು ಮನರಂಜಿಸಿದ್ದರು. ಶಾಲಾ ದಿನಗಳಿಂದಲೇ ಅವರು ನಟನೆಯಲ್ಲಿ ಅಭಿರುಚಿ ಹೊಂದಿದ್ದರು. ‘ನಟರಂಗ’ ತಂಡದ ಜೊತೆ ಗುರುತಿಸಿಕೊಂಡಿದ್ದ ಅವರು ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದರು.
‘ಪಾಪ ಪಾಂಡು’ ಧಾರವಾಹಿ(Papa Pandu Serial)ಯಲ್ಲಿ ಬಾಸ್ ಬಾಲರಾಜು ಪಾತ್ರ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ತಮ್ಮ ವಿಭಿನ್ನ ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಹಿರಿಯ ನಟನ ನಿಧನಕ್ಕೆ ಗಣ್ಯರ ಸಂತಾಪ
ಹಿರಿಯ ನಟ ಶಂಕರ್‌ರಾವ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ‘ಪಾಪ ಪಾಂಡು’ ಧಾರವಾಹಿಯಲ್ಲಿ ಶಂಕರ್‌ರಾವ್ ಜೊತೆ ನಟಿಸಿದ್ದ ನಟಿ ಶಾಲಿನಿ ಸತ್ಯನಾರಾಯಣ್(Shalini Satyanarayan) ಕೂಡ ಹಿರಿಯ ನಟ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್(TN Seetharam) ಕೂಡ ತಮ್ಮ ಫೇಸ್‌ಬುಕ್ ನಲ್ಲಿ ಹಿರಿಯ ನಟ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾನು ಇನ್ಮುಂದೆ ಅಡ್ಡದಾರಿ ಹಿಡಿಯಲ್ಲ, ಬಡವರಿಗಾಗಿ ಕೆಲಸ ಮಾಡುತ್ತೇನೆ: ಆರ್ಯನ್ ಖಾನ್
‘ಬಹುಕಾಲದ ಗೆಳೆಯ, ಕನ್ನಡ ರಂಗಭೂಮಿಯ ಮಹಾನ್ ಕಲಾವಿದ ಶಂಕರ್‌ರಾವ್(Shankar Rao) ಇಂದು ನಿಧನರಾಗಿದ್ದಾರೆ. ಶಂಕರ್‌ರಾವ್ ನಟರಂಗ ತಂಡದ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು. ಅವರಿಲ್ಲದೆ ಯಾವ ನಾಟಕವನ್ನೂ ಆಡುತ್ತಿರಲಿಲ್ಲ. ನಮ್ಮ ತಂಡದ ಮಾಯಾಮೃಗ ಧಾರಾವಾಹಿಯಲ್ಲಿ ಸಂತಾನಂ ಪಾತ್ರ ಮಾಡಿ ಬಹಳ ಜನಪ್ರಿಯರಾಗಿದ್ದರು. ಪಾಪ ಪಾಂಡು ಧಾರಾವಾಹಿಯಲ್ಲಿ ಎಲ್ಲರೂ ಇಷ್ಟ ಪಡುವ ಪಾತ್ರ ಮಾಡಿ ಜನಾನುರಾಗಿಯಾಗಿದ್ದರು. ಅವರಿದ್ದ ಕಡೆ ಪ್ರತಿಕ್ಷಣವೂ ನಗೆಬುಗ್ಗೆಗಳಿಗೆ ಬರವಿರಲಿಲ್ಲ. ಸದಾ ಹಸನ್ಮುಖಿ, ಎಲ್ಲರ ಕಷ್ಟಕ್ಕೆ ಹೃದಯದ ಮೂಲಕ ಸ್ಪಂದಿಸುತ್ತಿದ್ದ ವ್ಯಕ್ತಿ. ಅವರ ಮನೆಯವರ ಶೋಕ ದಟ್ಟವಾಗಿ ಕುಳಿತಿದೆ. ನಟರಂಗದವರ ತಬ್ಬಲಿತನ ದಿನೇ ದಿನೇ ಹೆಚ್ಚು ಹೆಚ್ಚು ಕಾಡುತ್ತಿದೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಮನೆಯವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಪೋಸ್ಟ್ ಹಂಚಿಕಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ