ಬೆಂಗಳೂರು : ಗುರುಶಿಷ್ಯರು ಸಿನಿಮಾ ರಿಲೀಸ್ಗೂ ಮುನ್ನ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಇದೀಗ ಈ ಸಿನಿಮಾ ತೆರೆಯ ಮೇಲೆ ಭರ್ಜರಿ ಓಪನಿಂಗ್ ಪಡ್ಕೊಂಡಿದೆ. ಗುರುಶಿಷ್ಯರ ನಡುವೆ ನಡೆಯೋ ತುಂಟಾಟ, ಶಿಸ್ತು, ಬಾಂಧವ್ಯ ಇವೆಲ್ಲವೂ ಮರೆಯಾದ ಈ ಕಾಲದಲ್ಲಿ ಅದನ್ನ ಬೆಳ್ಳಿತೆರೆ ಮೇಲೆ ತೋರಿಸೋ ಅದ್ಭುತ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜಡೇಶ್ ಹಂಪಿ.


COMMERCIAL BREAK
SCROLL TO CONTINUE READING

ಆನ್ಲೈನ್ ಪಾಠ, ಓಟದ ಈ ಸಮಯದಲ್ಲಿ ಹಿಂದಿನ ಶಾಲಾ ಜೀವನ ಹೇಗಿತ್ತು ಅನ್ನೋದನ್ನ ತೆರೆಮೇಲೆ ನೋಡಿ ಕಣ್ತುಂಬಿ ಬರೋದ್ರಲ್ಲಿ ಅನುಮಾನವೇ ಇಲ್ಲ ಬಿಡಿ. ಒಂದು ಕಾಲದಲ್ಲಿ ಮಿಂಚಿ ಈಗ ಮರೆಯಾಗಿರೋ ದೇಸಿ ಕ್ರೀಡೆ ಖೋಖೊ ಆಟದ ಪ್ರಾಮುಖ್ಯತೆಯನ್ನ ಸಾರೋ ಕೆಲಸ ಈ ಸಿನಿಮಾ ಮೂಲಕ ಆಗಿದೆ ಅನ್ನೋ ಖುಷಿ ಇದೀಗ ಅಭಿಮಾನಿಗಳಿಗೆ ಸಿಕ್ಕಿದೆ.


ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಈ 2 ಬದಲಾವಣೆ ಖಚಿತ : ಈ 11 ಆಟಗಾರರೊಂದಿಗೆ ನಾಗ್ಪುರಕ್ಕೆ!


ಕಡ್ಲೆಕಾಯಿ ತಿನ್ನೋ ಮೂಲಕ ಪರದೆ ಮೇಲೆ ಎಂಟ್ರಿ ಕೊಡೊ ಮನೋಹರ್ (ಶರಣ್) ಪಂಚಿಂಗ್ ಡೈಲಾಗ್ ಮೂಲಕ ನಗಿಸುತ್ತಾರೆ.ಎಮೋಷನಲ್ ಮೂಲಕ ಅಳಿಸುತ್ತಾರೆ. ನ್ಯಾಷನಲ್ ಲೆವೆಲ್ಲಿನಲ್ಲಿ ಖೋಖೊ ಆಟ ಆಡಿ ಗೆದ್ದ ಮನೋಹರ್ ಗೆ ಕೆಲಸ ಸಿಕ್ಕದೆ ಸೋಮಾರಿಯಾಗಿರುತ್ತಾರೆ.ಹಿರಿಯ ನಟ ದತ್ತಣ್ಣ ಮನೋಹರ್ ಗೆ ಒಳ್ಳೆಯ ಗುರುವಾಗಿ ದಾರಿದೀಪವಾಗಿರುತ್ತಾರೆ. ದತ್ತಣ್ಣ ಮನೋಹರ್‌ಗೆ ಪೀಟಿ ಮಾಸ್ಟರ್ ಆಗಿ ಬೆಟ್ಟದಪುರ ಗ್ರಾಮಕ್ಕೆ ಎಂಟ್ರಿ ಕೊಟ್ಟ ಬಳಿಕ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್‌ಗಳಿಗೆ ಕಾರಣವಾಗುತ್ತೆ. ನಾಯಕಿ ನಿಶ್ವಿಕಾ ನಾಯ್ಡು ಹಾಲು ವ್ಯಾಪಾರ ಮಾಡೋ ಹಳ್ಳಿಹುಡುಗಿಯ ಪಾತ್ರದಲ್ಲಿ ಸಖತ್ ಆಗೇ ಮಿಂಚಿದ್ದಾರೆ. ಆಣೆ ಮಾಡಿ ಹೇಳುತ್ತೀನಿ ಹಾಡನ್ನು ಬಿಗ್ ಸ್ಕ್ರೀನ್ ಮೇಲೆ ನೋಡೋದೇ ಥ್ರಿಲ್ ಕೊಡುತ್ತೆ.


ಶರಣ್ ನಟನೆಯ ಗುರುಶಿಷ್ಯರು ನಿಜವಾಗ್ಲೂ ತೆರೆಮೇಲೆ ಮಿಂಚು ಹರಿಸಿದೆ. ಗುರುಶಿಷ್ಯರು ಸಿನಿಮಾ ಹಲವು ಸೆಂಟಿಮೆಂಟ್ಗೆ ಕಾರಣವಾದ ಸಿನಿಮಾ ಆಂದ್ರೆ ತಪ್ಪಾಗಲ್ಲ. ಈ ಚಿತ್ರವನ್ನ ಸಿನಿಮಾ ಅನ್ನೋಗಿಂತ ಒಂದು ಮ್ಯಾಚ್ ಅಂತಾನೆ ಹೇಳ್ಬೋದು. ಖೋಖೊ ಕ್ರೀಡೆಯ ಮೇಲೆ ಬೆಟ್ಟದಪುರ ಗ್ರಾಮ ನಿಂತಿರುತ್ತೆ. ಹೇಗೆ ಅಂದ್ರೆ ಬೆಟ್ಟದಪುರ ಗ್ರಾಮಸ್ಥರು ಇಂದಿರಾಗಾಂಧಿ ಕಲಘಟ್ಟದಲ್ಲಿ ಉಳುವವನೆ ಭೂಮಿಯ ಒಡೆಯ ಅನ್ನೋ ನೀತಿ ತಂದಾಗ ಆ ಗ್ರಾಮದ ಗ್ರಾಮಸ್ಥರು ಅಲ್ಲೇ ಮನೆಗಳನ್ನ ಕಟ್ಟಿಕೊಂಡು ಜೀವನ ನಡೆಸುತ್ತಿರುತ್ತಾರೆ.


ಇದನ್ನೂ ಓದಿ: ಸಾರ್ವಜನಿಕರೆ ಎಚ್ಚರ! ದೇಶದಲ್ಲಿ ಪ್ರತಿದಿನ 73 ವೆಬ್‌ಸೈಟ್‌ಗಳು ಹ್ಯಾಕ್! 


ಆ ಜಮೀನು ನನ್ನದು ಅಂತ  ಎಂಟ್ರಿ ಕೊಡೋ ರುದ್ರಪ್ಪ ಬೆಟ್ಟದಪುರ ಗ್ರಾಮಸ್ಥರಿಗೆ ನರಕ ದರ್ಶನ ಕೊಡುತ್ತಿರುತ್ತಾನೆ. 13 ವರ್ಷಗಳಿಂದ ಸೂರಿಗಾಗಿ ರುದ್ರಪ್ಪನ ಹಿಂಸೆಗೆ ಬಲಿಯಾದ ಜನ ಕೋರ್ಟ್ ಕಚೇರಿ ಅಂತ ಅಲೆದು ಸುಸ್ತಾಗಿರುತ್ತಾರೆ. ಆ ಸಂದರ್ಭದಲ್ಲಿ ರುದ್ರಪ್ಪ ಒಂದು ಒಪ್ಪಂದಕ್ಕೆ ನಾನು ಸಿದ್ಧ ಎನ್ನುತ್ತಾನೆ. ಅದುವೇ ಖೋಖೊ ಮ್ಯಾಚ್. ಒಪ್ಪಂದದ ಮೇರೆಗೆ ಖೋಖೊ ಮ್ಯಾಚ್ ಗ್ರಾಮದ ಯುವಕರು ಗೆದ್ದರಷ್ಟೇ ಬಿಡುತ್ತೀನಿ ಅನ್ನೋ ಸವಾಲನ್ನ ಊರಿನ ಜನ ಸ್ವೀಕರಿಸುತ್ತಾರೆ.


ಖೋಖೊ ಮ್ಯಾಚ್ ಊರಿನ ಹುಡುಗರು ಗೆಲ್ಲುತ್ತಾರಾ..? ಆ ಬೆಟ್ಟದಪುರ ಗ್ರಾಮ ಯಾರ ಪಾಲಾಗುತ್ತೆ ಅನ್ನೋದನ್ನ ಥೀಯೇಟರ್ಗೆ ಬಂದು ನೋಡಿ. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ಶರಣ್ ಪುತ್ರ ಹೃದಯ್, MLA ರಾಜುಗೌಡ ಪುತ್ರ ಮಣಿಕಂಠ ಮತ್ತು ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೊದಲ ಬಾರಿ ನಟನೆ ಮಾಡಿದ್ರೂ ಅದ್ಬುತವಾಗಿ ಆಕ್ಟ್ ಮಾಡಿ ಭರವಸೆ ಮೂಡಿಸಿದ್ದಾರೆ. ಸೋ ದಯವಿಟ್ಟು ಇಂತಹ ಒಳ್ಳೆ ಸಿನಿಮಾಗಳಿಗೆ ನಿಮ್ಮ ಬೆಂಬಲ ಅಗತ್ಯವಿದೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.