Bollywood Love Story : ಶಿಲ್ಪಾಶೆಟ್ಟಿಗೆ ಮೋಸ ಮಾಡಿದ್ರಾ ಅಕ್ಷಯ್ ಕುಮಾರ್! ಪ್ರೀತಿಯಲ್ಲಿರುವಾಗಲೇ..?
Shilpa Shetty Akshay Kumar Love Breakup : ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಒಮ್ಮೆ ಸ್ಟಾರ್ ಹೀರೋ ಒಬ್ಬರನ್ನು ಲವ್ ಮಾಡ್ತಿದ್ದರು ಅನ್ನೋದು ಕೆಲವೇ ಕೆಲವರಿಗೆ ಗೊತ್ತು. ಆ ಸ್ಟಾರ್ ಹೀರೋ ಬೇರೆ ಯಾರೂ ಅಲ್ಲ ಅಕ್ಷಯ್ ಕುಮಾರ್. ಶಿಲ್ಪಾ ಶೆಟ್ಟಿ ಅವರು ಅಕ್ಷಯ್ ಕುಮಾರ್ ವಿರುದ್ಧ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದರು.
Shilpa Shetty Akshay Kumar Love Breakup : ಸೌತ್ ಬಿಟ್ಟು ಬಾಲಿವುಡ್ ನಲ್ಲಿ ನೆಲೆಯೂರಿರುವ ನಾಯಕಿಯರಲ್ಲಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಕರ್ನಾಟಕದ ಮಂಗಳೂರು ಬೆಲ್ಟ್ನಿಂದ ಬಂದ ಅವರು ಮೊದಲು ದಕ್ಷಿಣದ ಚಲನಚಿತ್ರಗಳಲ್ಲಿ ಮಿಂಚಿದರು ಮತ್ತು ನಂತರ ಬಾಲಿವುಡ್ ಉದ್ಯಮದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಆದರೆ ಇವರು ಒಮ್ಮೆ ಸ್ಟಾರ್ ಹೀರೋ ಒಬ್ಬರನ್ನು ಲವ್ ಮಾಡ್ತಿದ್ದರು ಅನ್ನೋದು ಕೆಲವೇ ಕೆಲವರಿಗೆ ಗೊತ್ತು. ಆ ಸ್ಟಾರ್ ಹೀರೋ ಬೇರೆ ಯಾರೂ ಅಲ್ಲ ಅಕ್ಷಯ್ ಕುಮಾರ್. 90 ರ ದಶಕದಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಕುಮಾರ್ ಅವರ ಪ್ರೀತಿಯಲ್ಲಿ ಬಿದ್ದಿದ್ದರು.
ಸಿನಿಮಾ ಶೂಟಿಂಗ್ ವೇಳೆ ಈ ಪ್ರೇಮ ಕುಡಿಯೊಡೆದಿತ್ತು. ಪರದೆಯ ಮೇಲೆ ಮತ್ತು ಆಫ್ ಸ್ಕ್ರೀನ್ನಲ್ಲೂ ಉತ್ತಮ ಕೆಮೆಸ್ಟ್ರಿ ಹೊಂದಿದ್ದರು ಈ ಜೋಡಿ. ಆದರೆ ಈ ಪ್ರೀತಿ ಅರ್ಧಕ್ಕೆ ಮುರಿದುಬಿದ್ದು, 2000 ರಲ್ಲಿ ಬೇರ್ಪಟ್ಟರು. ಆ ಪ್ರತ್ಯೇಕತೆಯ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರು ಅಕ್ಷಯ್ ಕುಮಾರ್ ವಿರುದ್ಧ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದರು. ಅವರ ಆರೋಪಗಳ ಪ್ರಕಾರ ಅಕ್ಷಯ್ ಕುಮಾರ್ ಮೋಸ ಮಾಡಿದ್ದಾರೆ.
"ನಾನು ಅಕ್ಷಯ್ ಕುಮಾರ್ನನ್ನು ತುಂಬಾ ಪ್ರೀತಿಸುತ್ತಿದ್ದೆ. ಆದರೆ ಅಕ್ಷಯ್ ಕುಮಾರ್ ನನಗೆ ಮೋಸ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ" ಎಂದು ಹೇಳಿದ್ದರಂತೆ. ನನ್ನ ಜೊತೆ ಸಂಬಂಧದಲ್ಲಿದ್ದಾಗಲೇ ಅಕ್ಷಯ್ ಕುಮಾರ್ ಅವರು ಟ್ವಿಂಕಲ್ ಖನ್ನ ಅವರನ್ನು ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರ ತಿಳಿದಾಗ ಶಿಲ್ಪಾಶೆಟ್ಟಿ ಆಘಾತಕ್ಕೊಳಗಾದರು. ಈ ಬ್ರೇಕಪ್ ಸುದ್ದಿಗೆ ಪ್ರತಿಕ್ರಿಯಿಸಿರುವ ಶಿಲ್ಪಾಶೆಟ್ಟಿ, ತನ್ನ ಜೀವನದಲ್ಲಿ ಒಂದು ಕೆಟ್ಟ ಹಂತ ಇದಾಗಿತ್ತು. ಏಕೆಂದರೆ ನಾನು ನನ್ನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ, ಆದರೆ ಕಾಲಾನಂತರದಲ್ಲಿ, ನಾನು ಎಲ್ಲವನ್ನು ಗೆದ್ದು ಈ ಹಂತಕ್ಕೆ ತಲುಪಿದ್ದೇನೆ" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತನ್ನ ವೈಯಕ್ತಿಕ ಜೀವನದಲ್ಲಿ ಹಲವು ಏರಿಳಿತಗಳು ಇದ್ದವು ಎಂದು ಹೇಳಿದ ಶಿಲ್ಪಾ ಶೆಟ್ಟಿ, ಅಕ್ಷಯ್ ತನ್ನ ಭರವಸೆಯನ್ನು ಮುರಿದು ಟ್ವಿಂಕಲ್ ಜೊತೆ ಸಂಬಂಧವನ್ನು ಪ್ರಾರಂಭಿಸಿದರು ಎಂದು ಹೇಳಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ಒಂದೆಡೆ ಶಿಲ್ಪಾ ಶೆಟ್ಟಿ ಮತ್ತೊಂದೆಡೆ ಅಕ್ಷಯ್ ಇಬ್ಬರು ಬೇರೆ ಬೇರೆ ವ್ಯಕ್ತಿಗಳನ್ನು ಮದುವೆಯಾಗಿ ದಾಂಪತ್ಯ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ. ಅಕ್ಷಯ್ 2001 ರಲ್ಲಿ ಟ್ವಿಂಕಲ್ ಕನ್ನಾ ಅವರನ್ನು ವಿವಾಹವಾದರು ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಶಿಲ್ಪಾ ಶೆಟ್ಟಿ ಬಹಳ ದಿನಗಳ ನಂತರ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು. ಅವರಿಗೂ ಇಬಗಬರು ಮಕ್ಕಳಿದ್ದಾರೆ.
ಇದನ್ನೂ ಓದಿ: Malaika Arora: ಮದುವೆ ವಿಚಾರದಲ್ಲಿ ಮೌನ ಮುರಿದ ಮಲೈಕಾ.. ಹನಿಮೂನ್ ಮೂಡ್ನಲ್ಲಿದಿವಿ ಎಂದ ನಟಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.