Shilpa Shetty Breaks Silence To Trolls: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ತನ್ನ ನಟನೆಯಿಂದ ಮಾತ್ರವಲ್ಲದೆ ತನ್ನ ಫಿಟ್‌ನೆಸ್ ಮತ್ತು ಫ್ಯಾಶನ್ ಸೆನ್ಸ್‌ನಿಂದಲೂ  ಹೆಸರುವಾಸಿಯಾಗಿದ್ದಾರೆ. ವೃತ್ತಿಜೀವನವನ್ನು ಚಿಕ್ಕ ಜಾಹೀರಾತಿನೊಂದಿಗೆ ಪ್ರಾರಂಭಿಸಿ, ಬಳಿಕ ಹಿಂದಿ ಚಿತ್ರರಂಗಕ್ಕೆ ನಾಯಕಿಯಾಗಿ ಪ್ರವೇಶಿಸಿ, ಬಾಲಿವುಡ್‌ನ ಅತ್ಯಂತ ಶಕ್ತಿಶಾಲಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಈ ನಟಿ ತಮ್ಮ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ಜೀವನದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಈಕೆ ಉದ್ಯಮಿ ರಾಜ್ ಕುಂದ್ರಾ ಜೊತೆ ಮದುವೆಯಾದ ಕಾರಣದ ಬಗ್ಗೆ ಸೋಶಿಯಲ್‌ ಮಿಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿಯ ಮೇಲೆ ಹಣದ ಆಸೆಯಿಂದ ರಾಜ್ ಕುಂದ್ರಾನನ್ನು ಮದುವೆಯಾಗಿದ್ದಾಳೆ ಎಂಬ ಆರೋಪ ಬಂದಿದೆ. ಇದೀಗ ಈ ನಟಿ ಅಸಂಬದ್ಧ ವಿಷಯಗಳ ಬಗ್ಗೆ ಮೌನ ಮುರಿದಿದ್ದಾರೆ. ನಟಿ ಶಿಲ್ಪಾ ಶೆಟ್ಟಿ "ರಾಜ್ ಕುಂದ್ರಾ ಅವರನ್ನ ಮದುವೆಯಾದಾಗ, ಗೂಗಲ್‌ನಲ್ಲಿ ಕುಂದ್ರಾ 108 ನೇ ಶ್ರೀಮಂತ ಬ್ರಿಟಿಷ್ ಭಾರತೀಯ ಎಂಬ ಪಟ್ಟಿಯಲ್ಲಿ ಇದ್ದಿದ್ದು ನಿಜಾ. ಆದರೆ ರಾಜ್ ಕುಂದ್ರಾ ಅವರ ಹೆಸರನ್ನ ಹುಡುಕಾಡಿದಂತೆ ತನ್ನ ಹೆಸರನ್ನೂ ಕೂಡ ಗೂಗಲ್ ಮಾಡಿ ನೋಡಿ" ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿ: Chandan Shetty: ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಮೂಲಕ ರಾಪರ್‌ ಚಂದನ್‌ ಶೆಟ್ಟಿ ಹೀರೋ..!!


ಶಿಲ್ಪಾ ಶೆಟ್ಟಿ "ಕೆಲವರು ನನ್ನ ಬಗ್ಗೆ ಗೂಗಲ್ ಮಾಡುವುದನ್ನೇ ಮರೆತು ಬಿಡುತ್ತಾರೆ. ರಾಜ್ ಕುಂದ್ರಾ ಅವರನ್ನ ಮದುವೆಯಾಗುವ ಮುಂಚೆಯೇ ನಾನು ಶ್ರೀಮಂತಳಾಗಿದ್ದೆ, ಈಗಲೂ ಶ್ರೀಮಂತಳಾಗಿದ್ದೇನೆ, ಮುಂದೆಯೂ ಶ್ರೀಮಂತಳಾಗಿಯೇ ಇರುತ್ತೇನೆ. ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ನನಗೆ ಸಂಬಂಧಿಸಿದ ಎಲ್ಲಾ ಆದಾಯ ತೆರಿಗೆ ಬಿಲ್‌ಗಳನ್ನ, ಜಿಎಸ್‌ಟಿ ಎಲ್ಲವನ್ನೂ ನಾನೇ ಖುದ್ದು ಪಾವತಿಸುತ್ತೇನೆ. ಇನ್ನೂ ಯಶಸ್ವೀ ಮಹಿಳೆಯರು ತಮ್ಮ ಪತಿಯಿಂದ ಹಣವನ್ನು ನಿರೀಕ್ಷೆ ಮಾಡುವುದಿಲ್ಲ" ಎಂದಿದ್ದಾರೆ. 


ಶಿಲ್ಪಾ ತಮ್ಮ ಮೇಲಿರುವ ಆರೋಪದ ಬಗ್ಗೆ ಮಾತನಾಡುತ್ತಾ "ರಾಜ್ ಆಗ ಶ್ರೀಮಂತ ವ್ಯಕ್ತಿಯಾಗಿದ್ದರೂ ಕೂಡ ಅವರನ್ನ ನಾನು ಒಪ್ಪಿಕೊಳ್ಳಲು ದುಡ್ಡು ಯಾವತ್ತೂ ಕಾರಣವಾಗಿರಲಿಲ್ಲ, ಹಾಗೊಂದು ವೇಳೆ ದುಡ್ಡು ನನಗೆ ಮುಖ್ಯವಾಗಿದ್ದೇ ಆದಲ್ಲಿ ನಾನು ಬೇರೆಯವರನ್ನೂ ಮದುವೆಯಾಗಬಹುದಿತ್ತು. ಯಾಕೆಂದರೆ ರಾಜ್ ಕುಂದ್ರಾ ಅವರಿಗಿಂತ ಶ್ರೀಮಂತರಾದವರು ಮದುವೆಯಾಗುವಂತೆ ನನ್ನ ಹಿಂದೆ ಬಿದ್ದಿದ್ದರು. ಹೀಗಾಗಿಯೇ ನನಗೆ ಅವತ್ತು, ಇವತ್ತು, ಯಾವತ್ತು ಹಣ ಮುಖ್ಯವಾಗಿಯೇ ಇರಲಿಲ್ಲ. ಸಶಕ್ತ ಹೆಣ್ಣು ಮಕ್ಕಳೇ ಸಮ ಸಮಾಜಕ್ಕೆ ಬುನಾದಿ. ಮಹಿಳೆಯರನ್ನ ನೋಡುವ ದೃಷ್ಟಿಕೋನ ಬದಲಾಗಲಿ" ಎಂದು ಪುನರುಚ್ಚಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.