Bollywood News: ಬಾಲಿವುಡ್‌ ನಟಿ ಶಿಲ್ಪ ಶೆಟ್ಟಿ ಹಾಗು ಅವರ ಪತಿ ಉದ್ಯಮಿ ರಾಜ್‌ಕುಂದ್ರಾ ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಶಿಲ್ಪ ಮಾತ್ರ ತಮ್ಮ ಮುಖವನ್ನು ಸಾರ್ವಜನಿಕರಿಗೆ ತೋರಿಸುತ್ತಾರೆ. ಅವರ ಪತಿ ಎಲ್ಲರಿಗೂ ಮುಖ ತೋರಿಸಿ ಸುಮಾರು ದಿನಗಳೇ ಆಗಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಶಿಲ್ಪ ಪತಿ, ತಮ್ಮ ಹುಟ್ಟು ಹಬ್ಬದ ದಿನ, ಫಾರೇನ್‌ ಟ್ರಿಪ್‌ನಲ್ಲಿದ್ದರು. ಅಲ್ಲಿ ರಾಜ್‌ಕೊಂದ್ರಾ ಮುಖಕ್ಕೆ ಮಾಸ್ಕ್‌ ಧರಿಸಿರಲಿಲ್ಲ. ಆ ವಿಡಿಯೋವನ್ನು ನಟಿ ಶಿಲ್ಪ ತಮ್ಮ ಇನ್‌ಸ್ಟಾಗ್ರಾಮ್‌ನ್ಲಿ ಪೋಸ್ಟ್‌ ಮಾಡಿದ್ದರು. ಆ ವಿಡಿಯೋದಲ್ಲಿ ಶಿಲ್ಪ ಖುಷಿಯಾಗಿದ್ದುದು, ಪತಿಗೆ ಬರ್ತ್‌ಡೇ ವಿಶ್‌ ಮಾಡಿದ್ದರು.


ಇದನ್ನೂ ಓದಿ-'ಚಿಕ್ಕಿಯ ಮೂಗುತಿ' ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್


ಇದಾದ ನಂತರ ಶಿಲ್ಪ ಪತಿ ತಮ್ಮ ಮುಖವನ್ನು ಎಲ್ಲಿಯೂ ತೋರಿಸಲ್ಲ. ರಾಜ್‌ಕುಂದ್ರಾ 2021ರಲ್ಲಿ ಪೋರ್ನ್‌ ಹಗರಣದಲ್ಲಿ ಸಿಲುಕಿಕೊಂಡಿದ್ದರು. ಅಶ್ಲೀಲ ವಿಷಯದ ಹಗರಣದಲ್ಲಿ ರಾಜ್ ಕುಂದ್ರಾ ಅವರು ಆರ್ಥರ್ ರೋಡ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು. 


ಅಂದಿನಿಂದ ರಾಜ್‌ ಕುಂದ್ರ ಮುಖಕ್ಕೆ ಮಾಸ್ಕ ಧರಿಸಿಯೇ ಮನೆಯಿಂದ ಹೊರ ಬರುತ್ತಿದ್ದಾರೆ. ಈ ಪೋರ್ನ್‌ ಹಗರಣ ʼUT 69ʼ ಸಿನಿಮಾವಾಗಿ ಮೂಡಿಬರುತಿದ್ದು, ಸದ್ಯ ಈ ಚಿತ್ರದಿಂದ ರಾಜ್‌ ಕುಂದ್ರ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತಿದ್ದಾರೆ.ರಾಜ್ ಕುಂದ್ರಾ ಪೋರ್ನ್ ಹಗರಣವು 2021 ರ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದು. ಇದು ದೇಶದಲ್ಲಿ ಅನೇಕ ಆಪ್‌ಗಳ ಮೇಲೆ ಕಣ್ಣೀಡುವಂತೆ ಮಾಡಿತು.


ಅಕ್ಟೋಬರ್‌ 14 ಶನಿವಾರ ರಾತ್ರಿಯಂದು ಶಿಲ್ಪ ಹಾಗು ರಾಜ್‌ಕುಂದ್ರಾ ಇಬ್ಬರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಫುಲ್ ಫೇಸ್ ಮಾಸ್ಕ್‌ಗಳನ್ನು ಹಾಕಿಕೊಂಡು ಮುಖ ಮುಚ್ಚಿಕೊಳ್ಳುವ ರಾಜ್ ಕುಂದ್ರಾ ಅವರಂತೆಯೇ ಕಪ್ಪು ಬಣ್ಣದ ಫುಲ್ ಎಲ್ಇಡಿ ಫೇಸ್ ಮಾಸ್ಕ್ ಹಾಕಿಕೊಂಡು ಮುಂಬೈನಲ್ಲಿ ಪಾಪರಾಜಿಗಳಿಗೆ ಫೋಸ್ ನೀಡಿದ್ದಾರೆ. 


ಈ ವೇಳೆ ರಾಜ್ ಕುಂದ್ರಾ ಕೂಡ ಅವರ ಜೊತೆಗೆ ಇದ್ದಾರೆ. ಇಬ್ಬರು ಒಂದೇ ರೀತಿಯ ಕಪ್ಪು ಬಟ್ಟೆಗಳಲ್ಲಿ ಮಿಂಚಿದ್ದಾರೆ. ಶಿಲ್ಪಾ ಶೆಟ್ಟಿ ಕುಂದ್ರಾ ಕಪ್ಪು ಬಟ್ಟೆಯಲ್ಲಿ ಪತಿ ರಾಜ್ ಕುಂದ್ರಾ ಜೊತೆ ಮ್ಯಾಚಿಂಗ್ ಮಾಡಿದ್ದಾರೆ. ದಂಪತಿ ಮಾಸ್ಕ್ ಹಾಕಿಕೊಂಡು ಫೋಸ್ ನೀಡಿದ್ದು, ಬಳಿಕ ನಟಿ ಶಿಲ್ಪಾ ಶೆಟ್ಟಿ ಒಬ್ಬರೇ ಮಾಸ್ಕ್ ತೆಗೆದು ಕ್ಯಾಮರಾಗಳಿಗೆ ಮುಖ ತೋರಿಸಿದ್ದಾರೆ.


ಈ ವಿಡಿಯೋವನ್ನು ಹಂಚಿಕೊಂಡಿರುವ ಹಲವು ಪಾಪರಾಜಿಗಳು ಇದು 'ಪವರ್ ರೇಂಜರ್ ಜೋಡಿ' ಎಂದೂ ಕರೆದಿದ್ದಾರೆ. ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ  ಅವತಾರಾಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಅದೇ ಘಟನೆಯ ವೀಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ, "ಇವರು ತನ್ನ ಗಂಡನಂತೆ ಆಗಿದ್ದಾರೆ" ಎಂದು ಬೇಸರದಲ್ಲಿ ಬರೆದಿದ್ದಾರೆ. ಗಂಡ ತಪ್ಪು ಮಾಡಿ ಮುಖ ಮುಚ್ಚಿಕೊಂಡಿದ್ದಾರೆ. ಹಾಗೇಯೇ ಇವರು ಮುಖ ಮುಚ್ಚಿಕೊಳ್ಳುವಂತೆ ಆಗುವುದು ಬೇಡ. ನೀವು ನಿಮ್ಮ ಹಾಗೆಯೇ ಇರಿ ಎಂದು ಸೋಷಿಯಲ್‌ ಮಿಡಿಯಾ ಬಳಕೆದಾರರು ಶಿಲ್ಪಾ ಶೆಟ್ಟಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.


ಇದನ್ನೂ ಓದಿ-Rajinikanth: ಇದು ರಜನಿ ಅವರ ಕೊನೆಯ ಚಿತ್ರವೇ? ರಹಸ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ..!


ʼUT 69ʼ ಸಿನಿಮಾದಲ್ಲಿ ರಾಜ್ ಕುಂದ್ರಾ  ಅರ್ಥರ್ ರೋಡ್ ಜೈಲಿನಲ್ಲಿ ತಾವು ಕಳೆದ ದಿನಗಳು ಮತ್ತು ಅನುಭವಿಸಿದ ಎಲ್ಲದರ ಬಗ್ಗೆ ತಿಳಿಸಲಿದೆ.  ಆದರೆ ರಾಜ್ ಕುಂದ್ರಾ ನಿರ್ಮಾಣದಿಂದ ಸ್ಕ್ರಿಪ್ಟ್‌ವರೆಗೆ ಎಲ್ಲಾ ಅಂಶಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.ಈ ಸಿನಿಮಾದಲ್ಲಿ ರಾಜ್ ಕುಂದ್ರಾ ಮೇಲೆ ಬಂದ ಆರೋಪಗಳ ಮೊದಲ ವರದಿಗಳಿಂದ ಹಿಡಿದು ಮಾಧ್ಯಮ ವರದಿಗಳವರೆಗೆ, ಜೈಲಿನಲ್ಲಿ ಕಳೆದ ದಿನಗಳಿಂದ ಜಾಮೀನಿನವರೆಗಿನ ಸಂಪೂರ್ಣ ಪ್ರಯಾಣವನ್ನು ತಿಳಿಸಲಿದೆ. ಇದು ರಾಜ್ ಕುಂದ್ರಾ ಮತ್ತು ಕುಟುಂಬದ ದೃಷ್ಟಿಕೋನದಿಂದ ಬರೆಯಲಾಗಿರುವ ಕಥೆಯಾಗಿದೆ.


ಈ ಸಿನಿಮಾ ಆದಷ್ಟು ಬೇಗ ತೆರೆಕಾಣಲಿ. ಸತ್ಯಗಳು ಹೊರ ಬಂದು, ವಿವಾದಗಳಿಗೆ ಫುಲ್‌ ಸ್ಟಾಪ್‌ ಸಿಗಲಿ. ಮತ್ತೆ ರಾಜ್‌ಕುಂದ್ರಾ ಎಲ್ಲಂತೆ ಮುಖಕ್ಕೆ ಮಾಸ್ಕ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿ. ನಟಿ ಶಿಲ್ಪ ಶೆಟ್ಟಿ ಮುಖದಲ್ಲಿ ಇನ್ನಷ್ಟು ನಗು ಹೆಚ್ಚಿಸಲಿ ಎಂದು ಆಶಿಸೋಣ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.