ನವದೆಹಲಿ: ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕುಟುಂಬದವರೊಂದಿಗೆ ಕುಣಿದು ಕುಪ್ಪಳಿಸಿರುವ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಮೊನ್ನೆಯಷ್ಟೇ ಅದ್ಧೂರಿಯಾಗಿ ಗಣೇಶನನ್ನು ಬರಮಾಡಿಕೊಂಡಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಮಂಗಳವಾರ ಗಣೇಶನನ್ನು ವಿಸರ್ಜನೆ ಮಾಡಿದರು. ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರೊಂದಿಗೆ ಅವರ ಇಡೀ ಕುಟುಂಬವು ಕಾಣಿಸಿಕೊಂಡಿತು. ಶಿಲ್ಪಾ ಪ್ರತಿವರ್ಷದಂತೆ ಪರಿಸರ ಸ್ನೇಹಿ ಗಣೇಶನನ್ನು ಸ್ಥಾಪಿಸಿದರು ಮತ್ತು ಮಂಗಳವಾರ ಮಧ್ಯಾಹ್ನ ಗಣಪತಿ ವಿಸರ್ಜನೆ ಮಾಡಿದರು. ಈ ಸಂದರ್ಭದಲ್ಲಿ ಶಿಲ್ಪಾ ಪತಿ ರಾಜ್ ಕುಂದ್ರಾ ಅವರೊಂದಿಗೆ ಅನಿಲ್ ಕಪೂರ್ ಶೈಲಿಯಲ್ಲಿ ನೃತ್ಯ ಮಾಡಿದರು.


ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಣಪತಿ ವಿಸರ್ಜನೆ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಶಿಲ್ಪಾ ಅವರ ಸಹೋದರಿ ಶಮಿತಾ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಶಿಲ್ಪಾ ಗುಲಾಬಿ ಬಣ್ಣದ ಡಿಸೈನರ್ ಸೂಟ್ ಧರಿಸಿದ್ದರು. ಈ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ತನ್ನ ಪತಿ ಮತ್ತು ಮಗನೊಂದಿಗೆ ನೃತ್ಯ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಭಿಮಾನಿಗಳು, ಅದನ್ನು ಶೇರ್ ಮಾಡಿದ್ದಾರೆ. 



ಫೋಟೊ ಕೃಪೆ: ಯೋಗನ್ ಶಾ


ಶಿಲ್ಪಾ ಅವರ ಮೋಜಿನ ನೃತ್ಯವನ್ನೂ ನೀವೂ ನೋಡಿ: