Shine Shetty And Ankitha Amar Marriage Photo: ಸ್ಯಾಂಡಲ್‌ವುಡ್‌ ನಟ ಶೈನ್‌ ಶೆಟ್ಟಿ ಹಾಗೂ ಕಿರುತೆರೆಯ ನಟಿ ಅಂಕಿತಾ ಅಮರ್‌ ಮದುವೆಯ ಫೋಟೋ ವೈರಲ್‌ ಆಗಿದೆ. ನಟ ಶೈನ್‌ ಶೆಟ್ಟಿ ಈ ಫೋಟೊದಲ್ಲಿ ಶೇರ್ವಾನಿ ಧರಿಸಿ ವರನಾಗಿ ರೆಡಿಯಾಗಿದ್ದರೆ ಇತ್ತ ನಟಿ ಅಂಕಿತಾ ಕೂಡ ಕೆಂಬಣ್ಣದ ಬ್ರೈಡಲ್ ಸೀರೆಯನ್ನು ಉಟ್ಟಿಕೊಂಡು ಮುದ್ದಾದ ವಧುವಾಗಿ ಕಂಗೊಳಿಸಿದ್ದಾರೆ. ಈ ಫೋಟೋ ನೋಡಿದ ಮೇಲಂತೂ ನೆಟ್ಟಿಗರಿಗೆ ಬಿಗ್‌ ಶಾಕ್‌ ಆಗಿದೆ.


COMMERCIAL BREAK
SCROLL TO CONTINUE READING

ಹೌದು.. ಶೈನ್‌ ಮತ್ತು ಅಂಕಿತಾ ಆಗಿರುವುದು ರಿಯಲ್‌ ಮದುವೆ ಅಲ್ಲ. ಇದು ಇವರಿಬ್ಬರು ಅಭಿನಯಿಸಿರುವ ʻಜಸ್ಟ್ ಮ್ಯಾರೀಡ್ʼ ಸಿನಿಮಾದ ಒಂದು ಫೋಟೋ ಅಷ್ಟೇ. ಇದಕ್ಕೂ ಮುಂಚೆ ಅಂಕಿತಾ ಅಮರ್ ಹಾಗೂ ಶೈನ್ ಶೆಟ್ಟಿ ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಮಾಡಲಾಗಿತ್ತು. ಅದರಂತೆ ಇದೀಗ ಚಿತ್ರೀಕರಣದ ಒಂದು ಫೋಟೋ ಸೋಶಿಯಲ್‌ ಮಿಡಿಯಾದಲ್ಲಿ ಸಿಕ್ಕಿದೆ. ಈ ಸಿನಿಮಾವನ್ನು ಡೈರೆಕ್ಟರ್‌ ಸಿ ಆರ್​ ಬಾಬಿ ನಿರ್ದೇಶನ ಮಾಡುತ್ತಿದ್ದಾರೆ.


ಇದನ್ನೂ ಓದಿ: ಅಭಿಷೇಕ್‌ ಬಚ್ಚನ್ ಕಟ್ಟಿದ್ದ ತಾಳಿ ಬಿಚ್ಚಿಟ್ಟ ಐಶ್ವರ್ಯ ರೈ? ಸಂಬಂಧ ಮುರಿದು ಬಿದ್ದಿದ್ದೇ ನಿಜ! ಡಿವೋರ್ಸ್‌ʼಗೆ ಅಡ್ಡಿ ಆಗಿದ್ದು ಪುತ್ರಿ?


ʻಜಸ್ಟ್ ಮ್ಯಾರೀಡ್ʼ ಚಿತ್ರದಲ್ಲಿ ಶೈನ್‌ ಶೆಟ್ಟಿ ಮತ್ತು ಅಂಕಿತಾ ಅಮರ್‌ ಜೊತೆಗೆ ಬಹುದೊಡ್ಡ ತಾರಾಬಳಗವೇ ಇದ್ದು, ಅಚ್ಯುತ್​ ಕುಮಾರ್, ಅನೂಪ್ ಭಂಡಾರಿ, ದೇವರಾಜ್, ಶ್ರುತಿ ಹರಿಹರನ್, ಮಾಳವಿಕಾ ಅವಿನಾಶ್ ಹೀಗೆ ಅನೇಕ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಮ್ಯೂಸಿಕ್‌ ಡೈರೆಕ್ಟರ್‌ ಅಜನೀಶ್‌ ಲೋಕನಾಥ್‌ ಹಾಗೂ ಸಿ ಆರ್‌ ಬಾಬಿ ಎಬಿಬಿಎಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಈ ಚಿತ್ರದ ದೃಶ್ಯಗಳನ್ನು ಅಜನೀಶ್‌ ಲೋಕನಾಥ್‌  ಅವರೇ ಸೆರೆಹಿಡಿದಿದ್ದಾರೆ.


ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್‌ ಮಾಡಲಾಗಿದೆ. ಸದ್ಯ ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ಸಿನಿಮಾದಲ್ಲಿ ಆರು ಸುಮಧುರ ಹಾಡುಗಳಿದ್ದು, ಇದಕ್ಕೆ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಸದ್ಯ ವೈರಲ್‌ ಆಗಿರುವ ಮದುವೆ ಫೋಟೊ ಮೂಲಕ ಈ ಸಿನಿಮಾದ ಮೇಲೆ ಇನ್ನಷ್ಟು ಕುತೂಹಲ ಹೆಚ್ಚಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.