Shine tom chacko Tanuja : ನ್ಯಾಚುರಲ್ ಸ್ಟಾರ್ ನಾನಿ ʼದಸರಾʼ ಚಿತ್ರದ ಮೂಲಕ ಟಾಲಿವುಡ್‌ಗೆ ವಿಲನ್ ಆಗಿ ನಟ ಶೈನ್‌ ಟಾಮ್‌ ಚಾಕೊ ಪ್ರವೇಶ ಮಾಡಿದರು. ದಸರಾ ಸಿನಿಮಾ ಕನ್ನಡದಲ್ಲಿಯೂ ಭಾಷಾಂತರಗೊಂಡು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿತ್ತು. ಈ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ ಶೈನ್‌ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಿಪಡಿಸಿದ್ದರು.. 


COMMERCIAL BREAK
SCROLL TO CONTINUE READING

ಪ್ರಸ್ತುತ ನಟ ಎನ್‌ಟಿಆರ್ ಪ್ಯಾನ್ ಇಂಡಿಯಾ ಸಿನಿಮಾ 'ದೇವರ'ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾಗಳ ಹೊರತಾಗಿ, ಶೈನ್ ಟಾಮ್ ಚಾಕೊ ಕಳೆದ ಕೆಲವು ವರ್ಷಗಳಿಂದ ವ್ಯಯಕ್ತಿಕ ಸಮಸ್ಯೆಗಳಿಂದ ಸುದ್ದಿಯಲ್ಲಿದ್ದಾರೆ. ನಟ ತನುಜಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಈ ವರ್ಷದ ಜನವರಿಯಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು. ನಿಶ್ಚಿತಾರ್ಥವೂ ಆಯಿತು. 


ಇದನ್ನೂ ಓದಿ:ಈ ಬಾಹುಬಲಿ ನಟನನ್ನ ಪ್ರೀತಿಸುತ್ತಿದ್ದ ಕಾಜಲ್‌ ಆತ ರಿಜೆಕ್ಟ್‌ ಮಾಡಿದಕ್ಕೆ ಬೇರೆ ಮದುವೆಯಾದ್ರಾ..!?


ಈ ಜೋಡಿ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸದ್ಯದಲ್ಲೇ ಮದುವೆ ದಿನಾಂಕ ಘೋಷಣೆಯಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಟಾಮ್ ಚಾಕೋ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಹೊಸ ಸಂಬಂಧ ಪ್ರಾರಂಭದಲ್ಲೇ ಕೊನೆಗೊಳ್ಳುವ ಎಲ್ಲಾ ಲಕ್ಷಣ ಕಾಣುತ್ತಿದೆ..


ಇದಕ್ಕೆ ಸಾಕ್ಷಿ ಎಂಬಂತೆ.. ನಟ ತನುಜಾ ಜೊತೆಗಿನ ಚಿತ್ರಗಳನ್ನು ತಮ್ಮ ಎಲ್ಲಾ ಸೋಷಿಯಲ್‌ ಮೀಡಿಯಾ ಖಾತೆಗಳಿಂದ ಡೀಲಿಟ್‌ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇವರಿಬ್ಬರು ಬ್ರೇಕ್ ಅಪ್ ಆಗಿರಬಹುದು ಅಂತ ಮಾತನಾಡಿಕೊಳ್ಳುತ್ತಿದ್ದಾರೆ.. ಈ ಸುದ್ದಿ ಭಾರೀ ಚರ್ಚೆ ಹುಟ್ಟು ಹಾಕುತ್ತಿದೆ..


ಇದನ್ನೂ ಓದಿ:ʼಕೇಳಿದ್ದು ಸುಳ್ಳಾಗಬಹುದು..ʼ ಅಂತ ಕನ್ನಡಿಗರಿಗೆ ಹತ್ತಿರವಾಗಿದ್ದ ʼಬೇಬಿ ಇಂದಿರಾʼ ಈಗ ಹೇಗಿದ್ದಾರೆ.? ಶಾಕ್‌ ಆಗ್ತೀರಾ ನೋಡಿದ್ರೆ..


ಶೈನ್ ಟಾಮ್ ಚಾಕೊ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನುಜಾ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೆ 'ಸಿಂಗಲ್' ಎಂದು ಹೇಳುವ ಮೂಲಕ ತಮ್ಮ ಬ್ರೇಕಪ್ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಇದೀಗ ನಾನು ಡೇಟಿಂಗ್ ಅಪ್ಲಿಕೇಶನ್‌ಗೆ ಮರಳಿದ್ದೇನೆ. ನನ್ನ ಆಯ್ಕೆಯ ಯುವತಿಯನ್ನು ಹುಡುಕುತ್ತಿದ್ದೇನೆ ಅಂತ ನಟ ಹೇಳಿಕೊಂಡಿದ್ದಾರೆ..


ಇನ್ನು ನಟ ಶೈನ್ ಟಾಮ್ ಚಾಕೋ ಅವರಿಗೆ ತಬಿತಾ ಮ್ಯಾಥ್ಯೂಸ್ ಎಂಬ ಪತ್ನಿ ಇದ್ದಾರೆ. ಅವರಿಗೆ ಒಬ್ಬ ಮಗಳೂ ಇದ್ದಾಳೆ. ಆದರೆ ಈ ಹಿಂದೆಯೇ ಇಬ್ಬರೂ ವಿಚ್ಛೇದನ ಪಡೆದಿದ್ದಾರಂತೆ. ಇದರ ನಡುವೆ ಎರಡನೇ ಮದುವೆಯಾಗಲು ರೆಡಿಯಾಗಿದ್ದ ನಟ ಸಪ್ತಪದಿ ತುಳಿಯುವ ಮೊದಲೇ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.