ಬೆಂಗಳೂರು : ಅಣ್ಣಾವ್ರು,ಮೂವರು ರಾಜಕುಮಾರರು ಬೆಳ್ಳಿ ತೆರೆಯ ಮೇಲೆ ಮಿಂಚು ಹರಿಸಿದ್ದನ್ನ ನೋಡಾಯ್ತು. ಇದೀಗ ಅಣ್ಣಾವ್ರ ಕುಟುಂಬದ ಮೂರನೇ ತಲೆಮಾರಿನ ಹವಾ ಚಂದನವನದಲ್ಲಿ ಹಬ್ಬಿದೆ. ಹೌದು ಸ್ಯಾಂಡಲ್ ವುಡ್ ಗೆ ಖಡಕ್ ನಟನ ಎಂಟ್ರಿಯಾಗಿದೆ. ಭರವಸೆಯ ನಾಯಕ ನಟ ಧೂಳೆಬ್ಬಿಸಲು ಸಜ್ಜಾಗಿ ನಿಂತಿದ್ದಾರೆ. ಅವರೇ 'ಧೀರನ್ ರಾಮ್ ಕುಮರ್'..!


COMMERCIAL BREAK
SCROLL TO CONTINUE READING

ಯಸ್ ಶಿವನಾಗಿ ತಾಂಡವ ಆಡಲು ಸಜ್ಜಾಗಿದ್ದಾರೆ ಧೀರನ್. ' ಶಿವ 143' ಸಿನಿಮಾದಲ್ಲಿ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ವರನಟ ರಾಜ್ ಕುಮಾರ್ ಅವರ ಪ್ರೀತಿಯ ಮತ್ತು ಮುದ್ದಿನ ಮಗಳು ಪೂರ್ಣಿಮಾ ಮಗ ಧೀರನ್ ರಾಮ್ ಕುಮಾರ್.


ಇದನ್ನೂ ಓದಿ : ಆಕ್ಷನ್ ಪ್ಯಾಕ್ಡ್ GodFather Teaser.. ಚಿರಂಜೀವಿ, ಸಲ್ಲು ಭಾಯ್‌ ಮೋಡಿಗೆ ಫ್ಯಾನ್ಸ್‌ ಫಿದಾ


ಧೀರನ್ ಅವರ  ಕಣ್ಣುಗಳೇ ಹೇಳುತ್ತಿವೆ. ಸಿನಿಮಾ ರಂಗದಲ್ಲಿ ಇತಿಹಾಸ ಸೃಷ್ಟಿಸೋದು ಪಕ್ಕಾ ಅಂತ, ಇದೇ ಕಣ್ಣುಗಳನ್ನ ನೋಡಿ ನಮ್ಮ ಪ್ರೀತಿಯ ಅಪ್ಪು ಬಾಸ್ ಕೂಡ ಹೊಗಳಿದ್ದರಂತೆ.  ನಮ್ಮ ಕುಟುಂಬಕ್ಕೆ ಬೆಂಕಿಯಂತ ಹೀರೋ ಸಿಕ್ಕಾಯ್ತು ಅನ್ನೋದನ್ನ ಸ್ವತಃ ಭೂಮಿ ಮೇಲೆ  46 ವರ್ಷ ನಡೆದಾಡಿದ ದೇವರು ಪುನೀತ್ ರಾಜ್ ಕುಮಾರ್ ಹೇಳಿದ್ದರಂತೆ. 


ಯಸ್... "ಶಿವ 143" ಸಿನಿಮಾ ಇದೇ ಆಗಸ್ಟ್ 26ರಂದು ತೆರೆಯಮೇಲೆ ಅಬ್ಬರಿಸಲಿದೆ. ಸಿಲ್ವರ್ ಸ್ಕ್ರೀನ್ ಮೇಲೆ ಧೀರನ್ ರಾಮ್ ಕುಮಾರ್ ಕೂಡ ಸಖತ್ ಆಗೇ ಅಬ್ಬರಿಸೋದು ಫಿಕ್ಸ್ ಆಗಿದೆ. ಯಾಕಂದ್ರೆ ಸಿನಿಮಾದ ಟೀಸರ್ ಮತ್ತು ಟ್ರೇಲರ್ ನೋಡಿದ್ಮೇಲೆ  ಧೀರನ್ ರಾಮ್ ಕುಮಾರ್ ಇತಿಹಾಸ ಸೃಷ್ಟಿಸೋದು ಗ್ಯಾರಂಟಿ ಅನ್ನೋ ಮಾತು ಚಂದನವನದಲ್ಲಿ ಕೇಳಿ ಬರುತ್ತಿದೆ. ಮೊದಲ ಸಿನಿಮಾಗೆ ತುಂಬಾನೇ ಪ್ರಾಕ್ಟೀಸ್ ಮಾಡಿ ಸೆಟ್ ನಲ್ಲಿ ಎಲ್ಲರೊಂದಿಗೆ ಬೆರೆತು ಎಲ್ಲವನ್ನೂ ಅದ್ಬುತವಾಗಿ ಕಲಿತು ಸಿನಿಮಾದಲ್ಲಿ ನಟನೆ ಮಾಡಿ ಸರಳ ವ್ಯಕ್ತಿತ್ವ ಅನ್ನೋದನ್ನ ಅಣ್ಣಾವ್ರ ಮೊಮ್ಮಗ ಈಗಾಗಲೇ ಪ್ರೂವ್ ಮಾಡಿದ್ದಾರೆ.
 
ಇದನ್ನೂ ಓದಿ : ಸಸ್ಪೆನ್ಸ್ ಥ್ರಿಲ್ಲರ್ ಕಥೆವುಳ್ಳ 'ಮರ್ದಿನಿ' ಸೆಪ್ಟೆಂಬರ್ 16 ಕ್ಕೆ ತೆರೆ ಮೇಲೆ
 
 'ಶಿವ 143' ಸಿನಿಮಾದಲ್ಲಿ ಓಂ ಸಿನಿಮಾದ ಫ್ಲೆವರ್ ಕೂಡ ಇರೋದು ಕಾಣಿಸುತ್ತಿದೆ. ಚಿತ್ರದ ಪ್ರಚಾರವನ್ನ ರಾಜ್ಯದ ಮೂಲೆ ಮೂಲೆಗೆ ತಾವೇ ಹೋಗಿ ಪ್ರಮೋಷನ್ ಮಾಡಿದ್ದಾರೆ ಧೀರನ್. ಇನ್ನೇನು ಸಿನಿಮಾ ರಿಲೀಸ್ ಗೆ ಕೆಲವೇ ಗಂಟೆಗಳು ಬಾಕಿಯಿದೆ. ಇದು ಪಕ್ಕಾ ಲವ್ ಸ್ಟೋರಿ ಇರೋ ಸಿನಿಮಾ. ಎಲ್ಲರಿಗೂ 100% ಇಷ್ಟ ಆಗೋದು ಕನ್ಫರ್ಮ್. ಸೋ ಇನ್ಯಾಕೆ ತಡ ಅಣ್ಣಾವ್ರ ಪ್ರೀತಿಯ ಮತ್ತು ನಟೋರಿಯಸ್ ಮೊಮ್ಮಗ ಧೀರನ್ ರಾಮ್ ಕುಮಾರ್ ಅವರಿಗೆ ನಾವೆಲ್ಲರೂ ಭರ್ಜರಿಯಾಗಿ ವೆಲ್ಕಮ್ ಮಾಡಲು ರೆಡಿಯಾಗೋಣ. ಫರ್ಸ್ಟ್ ಡೇ ಫಸ್ಟ್ ಶೋ ನೋಡಿ ಥ್ರಿಲ್ ಆಗೋಣ ಅಲ್ವೇ..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.