Shivaraj Kumar: ಕನ್ನಡದ ಖ್ಯಾತ ನಟ ಶಿವರಾಜ್‌ ಕುಮಾರ್‌ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಣ್ಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಅದೇ ವೇಳೆ ಮಳೆಯಲ್ಲಿ ನೆನೆದಿದ್ದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ನಟ ಶಿವರಾಜ್‌ ಕುಮಾರ್‌ ಅವರಿಗೆ ಹೆಚ್ಚು ಸುಸ್ತಾಗುತ್ತಿದ್ದಂತೆಯೇ ಕೂಡಲೇ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ವೈದ್ಯರು ನಿನ್ನೆಯೇ ಸೂಕ್ತ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಿದ್ದಾರೆ. 


ಇದನ್ನೂ ಓದಿ-Varuntej-Lavanya: ವರುಣ್-ಲಾವಣ್ಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?


ಸದ್ಯ ಶಿವಣ್ಣ ಮನೆಯಲ್ಲಿ ವಿಶ್ರಾಂತಿಸುತ್ತಿದ್ದು, ವೈದ್ಯರ ತಪಾಸಣೆ ಮುಗಿದ ನಂತರ ಆತಂಕ ಪಡುವಂಥದ್ದು ಏನೂ ಆಗಿಲ್ಲ ಎಂದು ವೈದ್ಯರೇ ಸ್ಪಷ್ಟನೆ ನೀಡಿದ್ದಾರೆ. 


ಇನ್ನು ಈ ಹಿಂದೆಯೂ ಶಿವಣ್ಣ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆಘಾತವಾಗಿತ್ತು.. ಸದ್ಯ ಶಿವಣ್ಣ ಆರಾಮಾಗಿರುವ ವಿಚಾರ ಕೇಳಿದ ಫ್ಯಾಮ್ಸ್‌ ನಿರಾಳವಾಗಿದ್ದಾರೆ. ಇದಲ್ಲದೇ ಹ್ಯಾಟ್ರಿಕ್‌ ಹಿರೋ ಕೆಲವೇ ದಿನಗಳಲ್ಲಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.


ಇದನ್ನೂ ಓದಿ-ಸಂಕಷ್ಟದಲ್ಲಿ ಉರ್ಫಿ ಜಾವೇದ್.. ಕ್ರಿಮಿನಲ್ ಕೇಸ್ ದಾಖಲು.. ಮಾಡಿದ್ದೇನು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾ