Ghost Film : ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಸದ್ಯ ಸಖತ್‌ ಟ್ರೆಂಡ್‌ ಕ್ರಿಯೆಟ್‌ ಮಾಡಿದ್ದಾರೆ. ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಶಿವಣ್ಣನದ್ದೇ ಹವಾ. ಜೈಲರ್‌ ಸಿನಿಮಾದಲ್ಲಿ ಶಿವಣ್ಣ ಅವರದು ಚಿಕ್ಕ ಪಾತ್ರ. 


COMMERCIAL BREAK
SCROLL TO CONTINUE READING

ತೆರೆ ಮೇಲೆ ಸ್ವಲ್ಪ ಹೊತ್ತು ಬಂದು ಹೋಗುವ ಶಿವಣ್ಣನ ಆ ಪಾತ್ರ ಇದೀಗ ಅವರನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಹೌದು ತಮಿಳು ಮಂದಿಯ ಮನಗೆದ್ದ ಆ ಪಾತ್ರದ ಮೂಲಕ ಶ್ರೀನಿ ಹಾಗೂ ಶಿವರಾಜ್‌ ಕುಮಾರ್‌ ಅವರ ಕಾಂಬಿನೇಷನ್‌ ಸಿನಿಮಾ ಘೋಸ್ಟ್‌ಗೂ ತಮಿಳುನಾಡಿನಲ್ಲಿ ರೆಡ್‌ ಕಾರ್ಪೆಟ್‌ ಸ್ವಾಗತ ಸಿಕ್ಕಂತಾಗಿದೆ.


ಇದನ್ನೂ ಓದಿ-Adipurush OTT: ಸದ್ದಿಲ್ಲದೇ ಓಟಿಟಿಗೆ ಬಂದ ಆದಿಪುರುಷ್‌..ತಡರಾತ್ರಿಯಿಂದಲೇ ಶುರುವಾಯ್ತು ಸ್ಟ್ರೀಮಿಂಗ್‌!


ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಘೋಸ್ಟ್‌ ಸಿನಿಮಾದಲ್ಲಿ 60ಪ್ಲಸ್ ವಯಸ್ಸಿನ ಶಿವಣ್ಣ 30ರ ವಯಸ್ಸಿನ ಪಾತ್ರವನ್ನು ಮಾಡಿದ್ದಾರೆ. ಮೇಕಿಂಗ್‌ ಹಂತದಲ್ಲೇ ಸಾಕಷ್ಟು ಸದ್ದು ಮಾಡುತ್ತಿರುವ ಸಿನಿಮಾದ ಶೂಟಿಂಗ್‌ ಈಗಷ್ಟೇ ಮುಗಿದಿದೆ. ಚಿತ್ರತಂಡ ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳತ್ತ ಗಮನಹರಿಸಿದೆ.


ಜೈಲರ್‌ ಸಿನಿಮಾ ಭರ್ಜರಿ ಯಶಸ್ಸು ಗಳಿಸುತ್ತಿದ್ದಂತೆಯೇ ಕರ್ನಾಟಕವನ್ನು ಹೊರತುಪಡಿಸಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲೂ ಶಿವಣ್ಣ ಸುದ್ದಿಯಲ್ಲಿದ್ದಾರೆ.  ತಮಿಳು ಮಂದಿಯಂತೂ ಶಿವಣ್ಣನ ಅಭಿನಯಕ್ಕೆ ಬೆರಗಾಗಿದ್ದಾರೆ. ಇನ್ನುಮುಂದೆ ಶಿವಣ್ಣನ ಸಿನಿಮಾಗಳನ್ನು ಮಿಸ್‌ ಮಾಡದೇ ನೋಡುತ್ತೀವೆ ಎಂದು ಹೇಳುತ್ತಿದ್ದಾರೆ. ಹೀಗಿರುವಾಗಲೇ ಶಿವಣ್ಣನ ಘೋಸ್ಟ್‌ ಚಿತ್ರದ ಚಿತ್ರದ ಶೂಟಿಂಗ್‌ ಸಹ ಮುಕ್ತಾಯವಾಗಿದ್ದು, ಇನ್ನೇನು ದಸರಾ ಹಬ್ಬದ ಪ್ರಯುಕ್ತ ಸಿನಿಮಾ ತೆರೆಗಪ್ಪಳಿಸಲಿದೆ. 


ಜೈಲರ್‌ ಯಶಸ್ಸಿನಿಂದ ಕರ್ನಾಟಕದ ಜತೆಗೆ ತಮಿಳುನಾಡಿನಲ್ಲೂ ಘೋಸ್ಟ್‌ ಸಿನಿಮಾಕ್ಕೆ ಭರ್ಜರಿ ಓಪನಿಂಗ್‌ ಸಿಗುವ ಸಾಧ್ಯತೆ ಇದೆ. ಈಗಾಗಲೇ ಘೋಸ್ಟ್ ಫಸ್ಟ್ ಲುಕ್, ಬಿಗ್‌ ಡ್ಯಾಡಿ ಟೀಸರ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು, ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಎಲ್ಲರಲ್ಲೂ ಹೆಚ್ಚುತ್ತಿದೆ. 


ಇದನ್ನೂ ಓದಿ-ಮತ್ತೆ ಒಂದಾದ ಕವಿರಾಜ್ - ದುನಿಯಾ ವಿಜಯ್ : 'ಊರಿಗೊಬ್ಳೆ ಪದ್ಮಾವತಿ' ಬಳಿಕ ಬರ್ತಿದೆ ಮತ್ತೊಂದು ಸ್ಪೆಷಲ್ ಸಾಂಗ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ