ಜಗ್ಗೇಶ್, ಪುನೀತ್ ಗೆ ಜನ್ಮದಿನದ ಶುಭಕೋರಿದ ಶಿವಣ್ಣ,...ರಾಜಣ್ಣನೇ ಹರಿಸಿದಂತೆ ಎಂದ ನವರಸನಾಯಕ...!
ಇಂದು ಕನ್ನಡದ ಇಬ್ಬರು ಮೇರು ನಟರ ಹುಟ್ಟುಹಬ್ಬ, ಒಂದು ಕಡೆ ಹಿರಿಯ ನಟ ಜಗ್ಗೇಶ್ ಅವರ ಜನ್ಮದಿನವಾದರೆ ಇನ್ನೊಂದೆಡೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಇಂದು ಕನ್ನಡದ ಇಬ್ಬರು ಮೇರು ನಟರ ಹುಟ್ಟುಹಬ್ಬ, ಒಂದು ಕಡೆ ಹಿರಿಯ ನಟ ಜಗ್ಗೇಶ್ ಅವರ ಜನ್ಮದಿನವಾದರೆ ಇನ್ನೊಂದೆಡೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಇಬ್ಬರು ಈ ನಟರ ಜನ್ಮದಿನದ ಹಿನ್ನಲೆಯಲ್ಲಿ ಕನ್ನಡ ಸಹ ಚಿತ್ರ ನಟರು ಹಾಗೂ ಅಭಿಮಾನಿಗಳ ಶುಭಾಶಯಗಳ ಸುರಿಮಳೆಗಳು ಬಂದಿವೆ. ಇಂತಹ ಸುದಿನದಂದು ಶಿವಣ್ಣ ತಮ್ಮ ಪುನೀತ್ ಹಾಗೂ ಜಗ್ಗೇಶ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.ತಮ್ಮ ಅಧಿಕೃತ ಟ್ವೀಟ್ ಮೂಲಕ ಇಬ್ಬರ ಜೊತೆಗಿರುವ ಪೋಟೋ ಹಂಚಿಕೊಂಡು ' ಇಂದು ಇಬ್ಬರಿಗೂ ಶುಭದಿನ ಎಂದು ಹಾರೈಸಿದ್ದಾರೆ. ತಕ್ಷಣ ಪ್ರತಿಕ್ರಿಯೆ ಮಾಡಿರುವ ನವರಸನಾಯಕ ನಾಯಕ ತಮಗೆ 'ರಾಜಣ್ಣನೆ ಹರಸಿದಂತೆ ಆಯಿತು...ಧನ್ಯವಾದಗಳು ಸಹೋದರ...love you.' ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.
ಇನ್ನೊಂದೆಡೆಗೆ ಪುನೀತ್ ರಾಜ್ ಕುಮಾರ್ ಅವರು ಕೂಡ ಟ್ವೀಟ್ ಮೂಲಕ ಶುಭಕೋರಿ' ಹ್ಯಾಪಿ ಬರ್ತಡೆ ಜಗ್ಗೇಶ್ ಸರ್ ನಗ್ತಾ ಇರಿ ನಗಸ್ತಾ ಇರಿ' ಎಂದು ಶುಭಾಶಯಗಳನ್ನು ಕೋರಿದ್ದಾರೆ.ಜಗ್ಗೇಶ್ ಅವರು ರಾಯರ ಭಕ್ತರಾಗಿರುವುದರಿಂದಾಗಿ 'ನನ್ನ ಹುಟ್ಟುಹಬ್ಬದ ದಿನ ರಾಯರು ನಿದ್ರಿಸುತ್ತಿದ್ದ ಜಾಗದಲ್ಲಿ ಅವರ ಆದಿನ ನೆನೆದು ಕೂತಕ್ಷಣ ರೋಮಾಂಚನ.ಹರಿಓಂ ಗುರುಭ್ಯೋನಮಃ...ಶುಭದಿನ ಶುಭೋದಯ...' ಎಂದು ಭಕ್ತಿಗೆ ಜಾರಿದ್ದಾರೆ.