ಶಿವಾಜಿ ಸುರತ್ಕಲ್ 2 ಚಿತ್ರದ ಟ್ವಿಂಕಲ್ ಸಾಂಗ್ ರಿಲೀಸ್
Shivaji Suratkal 2 Song Released: `ಶಿವಾಜಿ ಸುರತ್ಕಲ್ 2` ಚಿತ್ರದಲ್ಲಿ ಶಿವಾಜಿ ಯಾವ ಕೇಸ್? ತೆಗದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ ಎಂದರು ನಟ ರಮೇಶ್ ಅರವಿಂದ್.
Shivaji Suratkal 2 Song Released: ಗಾಂಧಿನಗರದಲ್ಲಿ ಸಖತ್ ಸದ್ದು ಮಾಡುತ್ತಿರುವ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿಬಂದಿರುವ "ಶಿವಾಜಿ ಸುರತ್ಕಲ್ 2" ಚಿತ್ರದ "ಟ್ವಿಂಕಲ್" ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಈ ಸುಂದರ ಗೀತೆಯನ್ನು ಹಾಡಿದ್ದಾರೆ.
"ಶಿವಾಜಿ ಸುರತ್ಕಲ್ 1" ಚಿತ್ರವನ್ನು ನಮ್ಮ ಹಾಗೂ ರಾಹುಲ್ ದ್ರಾವಿಡ್ ಕುಟುಂಬದವರು ಇದೇ ಜಾಗದಲ್ಲಿ ಒಟ್ಟಿಗೆ ನೋಡಿದ್ದೆವು. ಈಗ "ಶಿವಾಜಿ ಸುರತ್ಕಲ್ 2" ತೆರೆಗೆ ಬರಲು ಸಿದ್ದವಾಗಿದೆ. ಶಿವಾಜಿ ಯಾವುದಾದರೂ ಕೇಸ್ ತೆಗೆದುಕೊಂಡರೆ, "ಒಂದಾ ಜೈಲಿಗೆ , ಇಲ್ಲವಾ ಸ್ಮಶಾನಕ್ಕೆ" ಎಂದು ಪ್ರಸಿದ್ದಿ. "ಶಿವಾಜಿ ಸುರತ್ಕಲ್ 2" ಚಿತ್ರದಲ್ಲಿ ಶಿವಾಜಿ ಯಾವ ಕೇಸ್? ತೆಗದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ. ಇಂದು ಬಿಡುಗಡೆಯಾಗಿರುವ "ಟ್ವಿಂಕಲ್" ಹಾಡು ತುಂಬಾ ಸುಮಧುರವಾಗಿದ್ದು ಎಲ್ಲರ ಮನಸ್ಸನ್ನು ಗೆಲ್ಲಲಿದೆ ಎಂದು ನಟ ರಮೇಶ್ ಅರವಿಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Kabzaa Movie : ವಿಶ್ವದಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆ ʻಕಬ್ಜʼ
ಇನ್ನು ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಆಕಾಶ್ ಶ್ರೀವತ್ಸ, ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನಟಿ ಸಂಗೀತ ಶೃಂಗೇರಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೂಡ ಸ್ಯಾಂಡಿ ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ರಮೇಶ್ ಅವರು, ಜೀಪ್ ನಲ್ಲೂ ಸಹ ಕಾಣಿಸಿಕೊಳ್ಳುತ್ತಾರೆ. ಈ ಕುತೂಹಲ ಸದ್ಯಕ್ಕೆ ಹಾಗೆ ಇರಲಿ. ಏಪ್ರಿಲ್ 14 ಚಿತ್ರ ಬಿಡುಗಡೆಯಾಗುತ್ತಿದೆ ಅಂದು ಆ ಕುತೂಹಲಕ್ಕೆ ಉತ್ತರ ಸಿಗಲಿದೆ. ಚಿತ್ರ ಸುಂದರವಾಗಿ ಮೂಡಿಬರಲು ಸಹಕಾರ ನೀಡಿದ ಇಡೀ ನನ್ನ ತಂಡಕ್ಕೆ ಧನ್ಯವಾದ ಎಂದರು.
ಈ ಚಿತ್ರದಲ್ಲಿ ರಮೇಶ್ ಅವರ ಪಾತ್ರ ನೋಡಿದರೆ, ನನಗೆ "ಅಮೃತ ವರ್ಷಿಣಿ" ಚಿತ್ರದ ಪಾತ್ರ ನೆನಪಾಗುತ್ತದೆ. ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ಜನ ಮೆಚ್ಚಿಕೊಳ್ಳುವ ಭರವಸೆಯಿದೆ ಎಂದು ಚಿತ್ರದ ನಿರ್ಮಾಪಕರಾದ ಅನೂಪ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- Actor Ponnambalam : ನಾನು ಬದುಕಿದ್ದೇ ಚಿರಂಜೀವಿ ಅಣ್ಣನಿಂದ..! ನಟನ ಕಷ್ಟಕ್ಕೆ ಮೆಗಾಸ್ಟಾರ್ ನೆರವು
"ಶಿವಾಜಿ ಸುರತ್ಕಲ್ 2" ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ ಎಂದ ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಡುಗಳನ್ನು ಬರೆದಿರುವವರ ಹಾಗೂ ಹಾಡಿರುವವರ ಹೆಸರುಗಳನ್ನು ಪರಿಚಯಿಸಿದರು. ಚಿತ್ರದಲ್ಲಿ ಅಭಿನಯಿಸಿರುವ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಹಾಡಿನಲ್ಲಿ ನಟಿಸಿರುವ ಸಂಗೀತ ಶೃಂಗೇರಿ, ನಟರಾದ ರಘು ರಮಣಕೊಪ್ಪ, ವಿನಾಯಕ್ ಜೋಶಿ ಮುಂತಾದವರು ತಮ್ಮ ಪಾತ್ರ ಹಾಗೂ ಹಾಡಿನ ಬಗ್ಗೆಯೂ ಸಹ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.