Karataka Damanaka Review: ʻಕರಟಕ ದಮನಕʼ ಇದು ಶಿವಣ್ಣ ಮತ್ತು ಭಾರತದ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ ಕಾಂಬೋದ ಸಿನಿಮಾ. ಶಿವರಾತ್ರಿ ದಿನವೇ ಶಿವಣ್ಣ ಎಲ್ಲರ ಮನೆ ಮತ್ತು ಮನಸ್ಸುಗಳಿಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಟೈಟಲ್ ಮೂಲಕ ಸದ್ದು ಮಾಡಿದ ಕರಟಕ ದಮನಕ ಸಿನಿಮಾ ಹೇಗಿದೆ ಗೊತ್ತಾ?


COMMERCIAL BREAK
SCROLL TO CONTINUE READING

ನರಿ ಬುದ್ದಿ ಅಂತಾರಲ್ಲ ಹಾಗೇ ಶಿವಣ್ಣ ಹಾಗೂ ಪ್ರಭುದೇವ ಇಬ್ಬರೂ ಆ ಕುತಂತ್ರಿ ನರಿಗಳು.  ಇವ್ರ ಕೆಲಸ ಬರೀ ಮೋಸ ಮಾಡೋದು  ಮತ್ತು ಕಳ್ಳತನ ಮಾಡುಡೋದು. ಹೀಗೇ ಬದುಕು ಸಾಗಿಸುವ ಕುತಂತ್ರಿಗಳ ಪಾತ್ರ ಇವರದ್ದು. ಇನ್ನೊಂದು ಕಡೆ ನೀರಿಗಾಗಿ ಪರದಾಡುತ್ತಿರುವ ಉತ್ತರ ಕರ್ನಾಟಕದ ಒಂದೂರಿನ ಜನರು. ನೀರಿಗಾಗಿ ನಡೆಯುವ ರಾಜಕೀಯ ಬಗ್ಗೆ ಅದ್ಬುತ ಸಂದೇಶದ ಮೂಲಕ ಸಿನಿಮಾ ಕಟ್ಟಿಕೊಡೋ ಪ್ರಯತ್ನ ಭಟ್ರು ಮಾಡಿದ್ದಾರೆ. 


ಇದನ್ನೂ ಓದಿ: ಕನ್ನಡದ ಖ್ಯಾತ ಕಿರುತೆರೆ ನಟಿ ವಿರುದ್ಧ ಕೇಸ್.!‌ ಆಕ್ಸಿಡೆಂಡ್ ಮಾಡಿ ಯುವತಿ ಮೇಲೆ ಹಲ್ಲೆ? 


ಏನೇ ಕಷ್ಟ ಬಂದರೂ ಅದೇ ನನ್ನೂರು ಅನ್ನೋ ಮತ್ತೊಂದಿಷ್ಟು ಮಂದಿ. ಇಂತಹ ಊರಿಗೆ ಕರಟಕ ದಮನಕದಂತಹ ಕುತಂತ್ರಿ ನರಿಗಳು ಎಂಟ್ರಿ ಕೊಟ್ಟಾಗ, ಆ ಊರಲ್ಲಿ ಏನಾಗುತ್ತೆ? ಅನ್ನೋದೇ ಈ ಸಿನಿಮಾದ ಕಥೆ. ಸಿನಿಮಾದ ಹಾಡುಗಳು ಥ್ರಿಲ್ ಕೊಡುತ್ತೆ. 


ಪ್ರಭುದೇವ ಮತ್ತು ಶಿವಣ್ಣ ಜೋಡಿ ಸೂಪರ್ ವರ್ಕೌಟ್ ಆಗಿದೆ.  ಶಿವಣ್ಣನ ಆಕ್ಷನ್, ಡಾನ್ಸ್, ತುಂಟಾಟ ಮಜಾ ಕೊಡುತ್ತೆ.  ಪ್ರಭುದೇವರ ಕಾಮಿಡಿ ಖುಷಿ ಕೊಡುತ್ತೆ. ಕ್ಯಾಮೆರಾ ವರ್ಕ್ ಮಸ್ತ್ ಐತಿ. ಫ್ರೀ ನಾ ತಡ ಯಾಕೆ ಕರಟಕ ದಮನಕ ಸಿನಿಮಾನ ನೋಡ್ಕೊಂಡು ಬನ್ನಿ ಹಂಗಾದ್ರೆ. 


ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಇಬ್ಬರು ನಾಯಕಿಯರು. ಇವರ ಪಾತ್ರವನ್ನು ಯೋಗರಾಜ್ ಭಟ್ಟರು ಅಚ್ಚು ಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಉಳಿದಂತೆ ಮುಖ್ಯಮಂತ್ರಿ ಚಂದ್ರು ಕೇವಲ ಎರಡು ಸೀನ್‌ಗಳಿಗೆ ಸೀಮಿತ. 


ರಂಗಾಯಣ ರಘುಗೆ ಪಾತ್ರವೂ ಕಮ್ಮಿಯಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ರವಿಶಂಕರ್ ಖಳನಾಯಕನಾಗಿ ಮಿಂಚಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಟ ತನಿಕೆಲ್ಲ ಭರಣಿ ಕನ್ನಡಿಗರಿಗೆ ಇಷ್ಟ ಆಗುತ್ತಾರೆ.


ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ'ಗೆ ಎಂಟ್ರಿ ಕೊಟ್ಟ ನಟ ಮಿತ್ರ.. ವಿಭಿನ್ನ ಪಾತ್ರದಲ್ಲಿ ಎಂಟ್ರಿ.! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.