Dhanush Captain Miller : ತಮಿಳು ಖ್ಯಾತ ನಟ ಧನುಷ್ ಬಾಲಿವುಡ್, ಟಾಲಿವುಡ್, ಹಾಲಿವುಡ್ ಹೀಗೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡಿಗರಿಗೂ ಅವರು ತುಂಬಾ ಚಿರಪರಿಚಿತರು. ಇದೀಗ ಅವರ  ಮುಂಬರುವ ಬಹು ನಿರೀಕ್ಷಿತ ಸಿನಿಮಾ ʼಕ್ಯಾಪ್ಟನ್‌ ಮಿಲ್ಲರ್‌ʼಗೆ ಸಂಬಂಧಪಟ್ಟಂತೆ ಬಿಗ್‌ ಅಪ್‌ಡೇಟ್‌ ಒಂದು ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಹೌದು.. ಸೌತ್‌ ಸಿನಿ ರಂಗದ ಬಿಗ್‌ ಸ್ಟಾರ್‌ ಬಳಗ ಹೊಂದಿರುವ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ನಟ ಶಿವರಾಜಕುಮಾರ್‌ ಅವರು ನಟಿಸಿದ್ದಾರೆ. ಇತೀಚಿಗೆ ಈ ಚಿತ್ರದ ಕುರಿತು ಚಿತ್ರತಂಡ ಬಿಗ್‌ ಅಪ್‌ಡೇಟ್‌ ಒಂದು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.


ಇದನ್ನೂ ಓದಿ: Parvati Nair : ಹೇಗಿದೆ ನೋಡಿ ಸೌತ್‌ ಬೆಡಗಿಯ ಡಿಫ್ರೆಂಟ್‌ ಲುಕ್‌..!


'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ಸಂಬಂಧಿಸಿದ ದೃಶ್ಯಗಳ ಚಿತ್ರೀಕರಣ ಮುಗಿದಿದ್ದು, ಈ ನಿಟ್ಟಿನಲ್ಲಿ ಚಿತ್ರತಂಡ ಫೋಟೋ ಬಿಡುಗಡೆ ಮಾಡಿದೆ. ಈ ತಿಂಗಳ ಅಂತ್ಯದ ವೇಳೆಗೆ ಚಿತ್ರದ ಸಂಪೂರ್ಣ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸದ್ಯ ತೆಂಕಶಿ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರ 3 ಭಾಗಗಳಲ್ಲಿ ತಯಾರಾಗಲಿದೆ ಎನ್ನಲಾಗಿದೆ.


ಬೋಲ್ಡ್‌ ಲುಕ್‌ನಿಂದಲೇ ಮತ್ತೇರಿಸುವ ಹಾಟ್‌ ಬ್ಯೂಟಿ.. ಪೋಟೋಸ್‌ ನೋಡಿ


ಕ್ಯಾಪ್ಟನ್ ಮಿಲ್ಲರ್ 1930-40 ರ ದಶಕದ ಅವಧಿಯಲ್ಲಿ ನಡೆಯುವ ಘಟನೆ ಆಧಾರಿತ ಚಿತ್ರವಾಗಿದೆ. ಈ ಚಿತ್ರಕ್ಕಾಗಿ ಧನುಷ್ ಉದ್ದ ಕೂದಲು ಮತ್ತು ಗಡ್ಡದೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜುಲೈನಲ್ಲಿ 'ಕ್ಯಾಪ್ಟನ್ ಮಿಲ್ಲರ್' ಟೀಸರ್ ಕೂಡ ಬಿಡುಗಡೆಯಾಗಿದೆ. ಅಲ್ಲದೆ, ಧನುಷ್ ಹುಟ್ಟುಹಬ್ಬದ ದಿನವಾದ ಜೂನ್ 28 ರಂದು ಚಿತ್ರದ ಪ್ರಮುಖ ಅಪ್ಡೇಟ್ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.