ದರ್ಶನ್ ಮೇಲೆ ಚಪ್ಪಲಿ ಎಸೆತ: ನಿಮ್ಮ ಮೇಲೆ ಆರೋಪಿಸಿದವರಿಗೆ ಉತ್ತರ ಕೊಡಿ ಶಿವಣ್ಣ ಎಂದ ಫ್ಯಾನ್ಸ್!
Darshan : ಕ್ರಾಂತಿ ಚಿತ್ರದ ಎರಡನೇ ಸಾಂಗ್ ಬೊಂಬೆ ಬೊಂಬೆ ಹಾಡು ರಿಲೀಸ್ ಕಾರ್ಯಕ್ರಮ ಸರಾಗವಾಗಿ ಆರಂಭವಾಯಿತು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವ ಬೆನ್ನಲ್ಲೇ ಕಿಡಿಗೇಡಿಯೊಬ್ಬ ವೇದಿಕೆ ಮೇಲಿದ್ದ ನಟ ದರ್ಶನ್ ಅವರ ಮೇಲೆ ಚಪ್ಪಲಿ ಬಿಸಾಡಿದ್ದಾನೆ. ಈ ಘಟನೆ ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
Slipper hurled at Darshan : ನಿನ್ನೆ ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಡಿ ಬಾಸ್ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಈ ಕಾರ್ಯಕ್ರಮದ ಆಯೋಜನೆ ಆದಾಗಲೇ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಕಿಡಿ ಹೊತ್ತಿಕೊಂಡಿತ್ತು. ಸಾಂಗ್ ರಿಲೀಸ್ ಆಗಲಿದ್ದ ವಾಲ್ಮೀಕಿ ವೃತ್ತದಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್ ಕಟ್ಟಿದ್ದರು. ಪುನೀತ್ ಕಟ್ ಔಟ್ ಹಾಗೂ ಬ್ಯಾನರ್ ಹಿಡಿದು ಸ್ಟೇಜ್ ಏರಿ ಕುಣಿದಿದ್ದರು. ಈ ಫ್ಯಾನ್ ವಾರ್ ಸಾಂಗ್ ರಿಲೀಸ್‌ಗೆ ಅಡಚಣೆಯಾಗುತ್ತಾ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿತ್ತು.
ʼDBoss ಕುಗ್ಗಿಸಲು ಯಾರಿದಂಲೂ ಸಾಧ್ಯವಿಲ್ಲʼ : ʼಚಪ್ಪಲಿʼ ಎಸೆದವರಿಗೆ ನಿಶ್ವಿಕಾ ಮಾತಿನ ಏಟು..!
ಹೊಸಪೇಟೆಗೆ ಬಂದ ನಟ ದರ್ಶನ್ ಅವರು ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಪರಿಸ್ಥಿತಿ ಕೊಂಚ ತಣ್ಣಗಾಗಿತ್ತು. ಕ್ರಾಂತಿ ಚಿತ್ರದ ಎರಡನೇ ಸಾಂಗ್ ಬೊಂಬೆ ಬೊಂಬೆ ಹಾಡು ರಿಲೀಸ್ ಕಾರ್ಯಕ್ರಮ ಸರಾಗವಾಗಿ ಆರಂಭವಾಯಿತು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವ ಬೆನ್ನಲ್ಲೇ ಕಿಡಿಗೇಡಿಯೊಬ್ಬ ವೇದಿಕೆ ಮೇಲಿದ್ದ ನಟ ದರ್ಶನ್ ಅವರ ಮೇಲೆ ಚಪ್ಪಲಿ ಬಿಸಾಡಿದ್ದಾನೆ. ಈ ಘಟನೆ ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ʼಕರುಣೆ ಬೇಡ, ನೌಟಂಕಿ ಆಟʼ : ʼDBossʼ ವಿರುದ್ಧ ತರುಣ್ ಸುಧೀರ್ ಹೆಸರಲ್ಲಿ ಟ್ಟೀಟ್..!
ಇನ್ನೊಂದೆಡೆ ರಾಜ್ ಕುಟುಂಬದ ಅಭಿಮಾನಿಗಳು ಈ ರೀತಿ ಮಾಡಲ್ಲ, ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದು ರಾಜ್ ಕುಟುಂಬ ಫ್ಯಾನ್ಸ್ ವಾದಿಸುತ್ತಿದ್ದಾರೆ. ಈ ಕುರಿತಾಗಿ ಶಿವರಾಜ್‌ಕುಮಾರ್ ಅವರ ಬಳಿ ಕೆಲ ಅಭಿಮಾನಿಗಳು ದಯವಿಟ್ಟು ಇದರ ಕುರಿತು ಮಾತನಾಡಿ ಎಂದು ಮನವಿ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.