ಹುಬ್ಬಳ್ಳಿ : ಶಿವಣ್ಣ ಯಾವತ್ತೂ ಸ್ಕ್ರಿಪ್ಟ್‌ ಕೇಳೋದೇ ಇಲ್ಲ. ಆದರೆ, ಪೇಮೆಂಟ್‌ ತುಂಬಾನೇ ಮುಖ್ಯ ಎಂಬ ಪ್ರಶಾಂತ ಸಂಬರ್ಗಿ ಹೇಳಿಕೆಗೆ ನಟ ಡಾ. ಶಿವರಾಜಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ಹಾಗೇ ಮಾತಾಡೋದು ಸರಿಯಲ್ಲ. ಅವರು ತಮ್ಮ ಮಾತನ್ನು ವಾಪಾಸ್‌ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಅವರ ಪರ ಚುನಾವಣಾ ಪ್ರಚಾರ ಕೈಗೊಂಡ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಶಾಂತ ಸಂಬರಗಿ ಹಾಗೆ ಮಾತಾಡೋದು ಸರಿ ಅಲ್ಲ. ಅದನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ರ ಹಣನೇ ಇಲ್ವಾ ಎಂದ ಶಿವಣ್ಣ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನಾನು ಹಣ ಪಡೆದು ಇಲ್ಲಿ ಬಂದಿಲ್ಲ, ವ್ಯಾಪರಕ್ಕೆ ಬಂದವನಲ್ಲ. ಹೃದಯದಿಂದ ನಾನು ಬಂದಿರೋದು, ಮನುಷ್ಯನಿಗಾಗಿ ಬಂದಿದ್ದೇನೆ. ಯಾರನ್ನೂ ಟೀಕೆ ಮಾಡೋಕು ನಾನು ಬಂದಿಲ್ಲ. ನೀವೇ ಆನ್ಸರ್ ಮಾಡಿ ನೋಡೋಣ. ನಾನು ಎಲ್ಲ ಪ್ರಶ್ನೆಗೂ‌ ಉತ್ತರ ಕೊಡಲ್ಲ ಎಂದು ಶಿವರಾಜ್ ಕುಮಾರ್ ಹೇಳಿದರು.


ಇದನ್ನೂ ಓದಿ:  ಸಧೃಡ ಕೂದಲಿಗೆ ಕಾಡಲ್ಲಿರುವ ಸೊಪ್ಪು ಬೇಡ.. ಈ ವ್ಯಾಯಾಮ ಮಾಡಿ ಸಾಕು..!


ಇನ್ನು ಪ್ರಚಾರದ ವಿಚಾರಕ್ಕೆ ಶಿವರಾಜ್ ಕುಮಾರ್ ಟ್ರೋಲ್ ಕುರಿತು ಮಾತನಾಡಿ, ಟ್ರೋಲ್ ಮಾಡೋದು ಸರಿನಾ..? ಯಾತಕ್ಕೆ ಟ್ರೋಲ್..? ನಾನೇನು ಮಾಡಬೇಕು ಇದಕ್ಕೆ.. ? ನೀವೆ ಮನಸ್ಸಿಂದ ನೋಡಿ ಟ್ರೋಲ್ ಮಾಡೋದು ಸರಿನಾ ಅಂತ ಇಲ್ಲಿರೋರ ಎಲ್ಲ ಟ್ರೋಲ್ ಮಾಡೋಕೆ ಬಂದೀದಾರಾ. ಇಲ್ಲಿ ಬಂದಿರೋರು ಎಲ್ಲ ಕಾಂಗ್ರೆಸ್‌ನವರಾ. ಎಲ್ಲ ಪಕ್ಷದವರು ಇರ್ತಾರೆ.. ಟ್ರೋಲ್ ಯಾಕೆ, ಮನುಷ್ಯನನ್ನ ಅರ್ಥ ಮಾಡಕೊಬೇಕು. ಎಷ್ಟು ದಿನ ಟ್ರೋಲ್‌ ಮಾಡ್ತಾರೆ, ಹೃದಯದಿಂದ ಥಿಂಕ್ ಮಾಡಿ ನೋಡಬೇಕಿದೆ ಎಂದು ಶಿವಣ್ಣ ಬೇಸರ ವ್ಯಕ್ತಪಡಿಸಿದರು.


ಅಲ್ಲದೆ, ಮೈಂಡ್ ಇಂದ ಯೋಚನೆ ಮಾಡಬಾರದು, ಹೃದಯದಿಂದ ಮಾಡಬೇಕು. ಸಾವಿರ ಜನ ಹೇಳ್ತಾರೆ ಅಂತಾ ಫಾಲೋ ಮಾಡಬಾರದು ಎಂದರು. ಅಲ್ಲದೆ, ಅಣ್ಣವ್ರ ಯಾವ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ ಅನ್ನೋ ಹೇಳಿಕೆಗೆ ಶಿವಣ್ಣ ಗರಂ ಆದರು. ಪದೇ ಪದೇ ಅದೇ ಪ್ರಶ್ನೆ ಯಾಕೆ ಎಂದು ಮಾಧ್ಯಮದವರ ಮೇಲೆ ಗರಂ ಆದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.