ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಗರು' ಇದೇ ಫೆ.23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 


COMMERCIAL BREAK
SCROLL TO CONTINUE READING

ಸೂರಿ ನಿರ್ದೇಶನದ 'ಟಗರು' ಕಾಳಗಕ್ಕೆ ಎಲ್ಲಾ ಚಿತ್ರಮಂದಿರಗಳೂ ಸಿದ್ಧವಾಗಿದ್ದು, ರಫ್ ಅಂಡ್ ಟಫ್ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಸ್ಪೆಷಲ್ ಲುಕ್'ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಫೋಟೋಗಳು ಅಭಿಮಾನಿಗಳಲ್ಲಿ ಚಿತ್ರದ ಕುರಿತಾಗಿ ಮತ್ತಷ್ಟು ಕಾತುರ ಹುಟ್ಟಿಸಿದೆ. 


'ಮಫ್ತಿ' ಸಿನಿಮಾದ ನಂತರ ಶಿವಣ್ಣನ 'ಟಗರು' ಚಿತ್ರ ಬಿಡುಗಡೆಯಾಗುತ್ತಿದ್ದು, ಈಗಾಗಲೆ ಚಿತ್ರದ ಟೈಟಲ್ ಸಾಂಗ್ ವೈರಲ್ ಆಗಿದೆ. 'ಕಡ್ಡಿಪುಡಿ' ನಂತರ ಸೂರಿ ಮತ್ತು ಶಿವಣ್ಣ ಕಾಂಬಿನೇಶನ್ ಅದ್ಭುತವಾಗಿ ವರ್ಕೌಟ್ ಆಗಲಿದೆಯೇ ಎಂಬುದನ್ನು ಕಾಡು ನೋಡಬೇಕಿದೆ. 


ನಟ ಧನಂಜಯ್, ವಸಿಷ್ಠ ಸಿಂಹ, ಭಾವನಾ ಮತ್ತು ಮಾನ್ವಿತಾ ಹರೀಶ್ ಸೇರಿದಂತೆ ದೊಡ್ಡ ಇತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೆ.ಪಿ.ಶಶಾಂಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅತ್ಯುತ್ತಮ ಆಕ್ಷನ್ ದೃಶ್ಯಗಳು, ನೈಜ ಪರಿಸರದಲ್ಲಿ ಚಿತ್ರೀಕರಣ ಮಾಡಿರುವುದು ಚಿತ್ರ ವೀಕ್ಷಣೆಗೆ ಮತ್ತಷ್ಟು ಕುತೂಹಲ ಮೂಡಿಸಿದೆ.