Shobha Shetty Post About Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್‌ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಕಿರುತೆರೆ ನಟಿ ಶೋಭಾ ಶೆಟ್ಟಿ ಶೋ ಕ್ವಿಟ್‌ ಮಾಡಿ ಮನೆಯಿಂದ ಆಚೆ ಬರಲು ನಿರ್ಧರಿಸಿದ್ದಾರೆ. ಶೋಭಾ ಶೆಟ್ಟಿ ಅನಾರೋಗ್ಯದ ಕಾರಣ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಗ ಶೋಭಾ ಶೆಟ್ಟಿ ಪೋಸ್ಟ್‌ ಭಾರೀ ಸದ್ದು ಮಾಡುತ್ತಿದೆ. 


COMMERCIAL BREAK
SCROLL TO CONTINUE READING

ಬಿಗ್ ಬಾಸ್ ಕನ್ನಡ ಸೀಸನ್‌ 11 ರಲ್ಲಿ ಎರಡೇ ವಾರಕ್ಕೆ ಆಟ ಸಾಕು ಎಂದು ಹೊರಬಂದ ಶೋಭಾ ಸುದೀರ್ಘ ಪತ್ರವೊಂದನ್ನು ಬರೆದು ಸುದೀಪ್‌ ಅವರನ್ನು ಇದಕ್ಕೆ ಟ್ಯಾಗ್‌ ಮಾಡಿದ್ದಾರೆ. ಸಖತ್‌ ಸೌಂಡ್‌ ಮಾಡುತ್ತ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಎರಡೇ ವಾರಕ್ಕೆ ಕುಗ್ಗಿ ಹೋಗಿದ್ದಾರೆ. ಕಳೆದ ವಾರದ ವೀಕೆಂಡ್‌ ಎಪಿಸೋಡ್‌ ನಲ್ಲಿ ಕಿಚ್ಚ ಸುದೀಪ್‌ ಬಳಿ ಮನೆಯಿಂದ ಹೊರ ಕಳಿಸುವಂತೆ ಮನವಿ ಮಾಡಿಕೊಂಡರು. ಸೋಮವಾರದ  ಸಂಚಿಕೆಯಲ್ಲಿ ಶೋಭಾ ಬಿಗ್‌ಬಾಸ್‌ ಶೋ ನಿಂದ ಆಚೆ ಬಂದಿದ್ದಾರೆ. 


ಇದನ್ನೂ ಓದಿ: 'ರೇಖಾ ಎಂದರೆ ಬರೀ ಟೈಂಪಾಸ್ ಮಾತ್ರ...' ಖ್ಯಾತ ಹಿರಿಯ ನಟನ ಸೆನ್ಸೇಷನಲ್‌ ಕಾಮೆಂಟ್!!


ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಬಳಿಕ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘ ಪತ್ರವೊಂದನ್ನು ಬರೆದು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ಸುದೀಪ್‌ ಮತ್ತು ಕಲರ್ಸ್‌ ಕನ್ನಡ ಚಾನೆಲ್‌ನ್ನು ಟ್ಯಾಗ್‌ ಮಾಡಿದ್ದಾರೆ. "ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ.. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ! ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯಾ ಶೋಭಾ ಶೆಟ್ಟಿ" ಎಂದು ಸುದೀರ್ಘ ಪತ್ರ ಬರೆದು ಪೋಸ್ಟ್‌ ಮಾಡಿದ್ದಾರೆ.


ತೆಲುಗು ಬಿಗ್‌ಬಾಸ್‌ ನಲ್ಲಿ 14 ವಾರಗಳ ಇದ್ದು ಜನರ ಅಭಿಮಾನಗಳಿಸಿದ್ದ ಶೋಭಾ ಶೆಟ್ಟಿ ಬಿಗ್‌ ಬಾಸ್‌ ಕನ್ನಡದಲ್ಲಿಯೂ ಫಿನಾಲೆ ತಲುಪುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಕನ್ನಡದಲ್ಲಿ ಶೋಭಾ ಅನಾರೋಗ್ಯದ ಕಾರಣಕ್ಕೆ ಆಟವನ್ನು ಕ್ವಿಟ್‌ ಮಾಡಿದರು. ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.


ಇದನ್ನೂ ಓದಿ: ಕಿಚ್ಚ ಸುದೀಪ್ ಅವರ "ಮ್ಯಾಕ್ಸ್" ಚಿತ್ರದ ರಿಲೀಸ್ ಡೇಟ್‌ ಫಿಕ್ಸ್!‌ ʼಈʼ ದಿನದಂದು ಐದು ಭಾಷೆಗಳಲ್ಲಿ ಅಬ್ಬರಿಸಲಿದ್ದಾರೆ ಅಭಿನಯ ಚಕ್ರವರ್ತಿ!


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.