Shraddha Das: ಶ್ರದ್ಧಾ ದಾಸ್ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿ ಹೀರೋಯಿನ್ ಆಗಿ 15 ವರ್ಷಗಳಾಗಿವೆ. 'ಸಿದ್ದು ಫ್ರಂ ಸ್ರಿಕಾಕುಲಂ' ಚಿತ್ರದಿಂದ ಆರಂಭಿಸಿ, ಸತತವಾಗಿ ಸಿನಿಮಾ ಮಾಡುವುದನ್ನು ಮುಂದುವರೆಸಿದರು. ಇತ್ತೀಚೆಗಷ್ಟೇ ಈ ನಟಿ ಉದ್ಯಮಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿವೆ.. ಶೀಘ್ರದಲ್ಲೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ..ಇದೀಗ ಈ ಬಗ್ಗೆ ಶ್ರದ್ಧಾ ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಎಲ್ಲಾ ಇಂಡಸ್ಟ್ರಿಗಳ ಅನೇಕ ಸೆಲೆಬ್ರಿಟಿಗಳು ಮದುವೆಯಾಗುತ್ತಿದ್ದಾರೆ.. ಆ ಹಾದಿಯಲ್ಲಿ ಶ್ರದ್ಧಾ ದಾಸ್ ಕೂಡ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಶ್ರದ್ಧಾ 2008 ರಲ್ಲಿ ತೆಲುಗು ಇಂಡಸ್ಟ್ರಿಗೆ ಪ್ರವೇಶಿಸಿ... ಮಲಯಾಳಂ, ಹಿಂದಿ, ಬೆಂಗಾಲಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದರು. ನಾಯಕಿ ಮಾತ್ರ ಪಾತ್ರ ಎಂಬ ನಿಯಮ ಮಾಡದೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾಡುತ್ತಿದ್ದಾರೆ. ಶ್ರದ್ಧಾ ದಾಸ್ ಕೂಡ ಟಿವಿ ಶೋಗಳಲ್ಲಿ ತೀರ್ಪುಗಾರರಾಗಿ ಬ್ಯುಸಿಯಾಗಿದ್ದಾರೆ.


ಇದನ್ನೂ ಓದಿ-Manoj Bajpayee: ಆಸ್ಕರ್ ಲೈಬ್ರರಿ ಫಿಲ್ಮ್‌ನಲ್ಲಿ 'ಜೋರಾಮ್'ಚಿತ್ರ ಸೇರ್ಪಡೆ


ಇತ್ತೀಚೆಗಷ್ಟೇ ಶ್ರದ್ಧಾ ದಾಸ್ ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇವೆಲ್ಲವೂ ವದಂತಿ ಎಂದು ಶ್ರದ್ಧಾ ತಿಳಿಸಿದ್ದಾರೆ.. ಈ ಕುರಿತು "ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ" ಎಂದು ನಟಿ ಸ್ಪಷ್ಟಪಡಿಸಿದ್ದಾರೆ. 


ಡಾರ್ಲಿಂಗ್ ಮತ್ತು ಆರ್ಯ 2 ಚಿತ್ರಗಳಲ್ಲಿ ಶ್ರದ್ಧಾ ನಟಿಸಿ ಒಳ್ಳೆಯ ಹೆಸರು ಪಡೆದುಕೊಂಡಿದ್ದರು.. ಅಲ್ಲದೇ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್‌ ಜೊತೆಯಲ್ಲಿ ʼಕೋಟಿಗೊಬ್ಬ 3ʼ ಚಿತ್ರದಲ್ಲಿಯೂ ಈಕೆ ನಟಿಸಿ ಕನ್ನಡಿಗರ ಅಭಿಮಾನ ಗಳಿಸಿದ್ದಾರೆ.. ಈಕೆ ನಟಿ ಮಾತ್ರವಲ್ಲದೇ ಆರ್ಟಿಸ್ಟ್ ಕೂಡ ಆಗಿದ್ದಾರೆ. ಸದ್ಯ ಶ್ರದ್ಧಾ ದಾಸ್ ಅವರು ಚಲನಚಿತ್ರಗಳು ಮತ್ತು ರಿಯಾಲಿಟಿ ಶೋಗಳು ಮತ್ತು ಈವೆಂಟ್‌ಗಳಲ್ಲಿ ಭಾಗವಹಿಸುವುದರಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.


ಇದನ್ನೂ ಓದಿ-BBK10: ʼನನ್ನ ಬಗ್ಗೆ ಮಾತಾಡೋ ಯೋಗ್ಯತೆ ನಿನ್ಗಿಲ್ಲʼ.. ಸಂಗೀತಾ–ಕಾರ್ತಿಕ್ ಮಧ್ಯೆ ಮತ್ತೆ ಜಗಳದ ಕಿಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.