Shruti Haasan Tattoo: ನಟಿ ಮತ್ತು ಸಂಗೀತಗಾರ್ತಿ ಶ್ರುತಿ ಹಾಸನ್ ಮತ್ತೊಂದು ಹಚ್ಚೆ ಹಾಕಿಸಿದ್ದಾರೆ. ಈ ಬಾರಿ ತಮಿಳಿನಲ್ಲಿ ಭಗವಾನ್ ಮುರುಗನ್ ವೇಲ್ ದೇವರ ಹೆಸರನ್ನು ಹಾಕಿಸಿದ್ದಾರೆ. ಶ್ರುತಿ ಹಾಸನ್ ಈ ಹಿಂದೆ ಅನೇಕ ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಹೊಸ ಟ್ಯಾಟೂ ಅವಳ ಧಾರ್ಮಿಕ ನಂಬಿಕೆಗಳು ಮತ್ತು ಸೆಲ್ಫ್‌ ಲವ್‌ನ್ನು ಪ್ರತಿಬಿಂಬಿಸುವುದರಿಂದ ತುಂಬಾ ವಿಶೇಷವಾಗಿದೆ.


COMMERCIAL BREAK
SCROLL TO CONTINUE READING

ಹೊಸ ಟ್ಯಾಟೂ ಬಗ್ಗೆ ಮಾತನಾಡಿದ ಶ್ರುತಿ ಹಾಸನ್‌, "ನಾನು ಯಾವಾಗಲೂ ಆಧ್ಯಾತ್ಮಿಕ ಒಲವು ಹೊಂದಿದ್ದೇನೆ. ಮುರುಗನ್ ವೇಲ್ ದೇವರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಈ ಹಚ್ಚೆ ಮೂಲಕ ನನ್ನ ಭಕ್ತಿಯನ್ನು ಪ್ರದರ್ಶಿಸಲು ನಾನು ಬಯಸುತ್ತೇನೆ" ಎಂದಿದ್ದಾರೆ. 


ಇದನ್ನೂ ಓದಿ: ಮಂಗಳೂರಿನಲ್ಲಿ ಈ ಹಣ್ಣಿಗಾಗಿ ಪರದಾಡಿದ ಕುಡ್ಲ ಬೆಡಗಿ ಪೂಜಾ ಹೆಗ್ಡೆ..!


[[{"fid":"302054","view_mode":"default","fields":{"format":"default","field_file_image_alt_text[und][0][value]":"Shruti Haasan Tattoo","field_file_image_title_text[und][0][value]":"ಶ್ರುತಿ ಹಾಸನ್ "},"type":"media","field_deltas":{"1":{"format":"default","field_file_image_alt_text[und][0][value]":"Shruti Haasan Tattoo","field_file_image_title_text[und][0][value]":"ಶ್ರುತಿ ಹಾಸನ್ "}},"link_text":false,"attributes":{"alt":"Shruti Haasan Tattoo","title":"ಶ್ರುತಿ ಹಾಸನ್ ","class":"media-element file-default","data-delta":"1"}}]]


ನಟಿ ತನ್ನ ಹೊಸ ಟ್ಯಾಟೂವನ್ನು Instagram ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಶ್ರುತಿ ಹಾಸನ್ ಈ ಹಿಂದೆ ತನ್ನ ಮಣಿಕಟ್ಟಿನ ಮೇಲೆ ಗುಲಾಬಿ ಮತ್ತು ಕಿವಿಯ ಹಿಂದೆ ಸಂಗೀತದ ಜಿ ಕ್ಲೆಫ್ ಚಿಹ್ನೆಯ ಟ್ಯಾಟೂ ಹಾಕಿಸಿಕೊಂಡಿದ್ದರು. ಶ್ರುತಿ ಹಾಸನ್‌ ಪ್ರತಿಯೊಂದು ಟ್ಯಾಟೂಗಳು ವಿಶೇಷ ಅರ್ಥವನ್ನು ಹೊಂದಿವೆ.  


ಶ್ರುತಿ ಹಾಸನ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು, ಅಲ್ಲಿ ಅಭಿಮಾನಿಗಳು ಅವರ ಮೇಲೆ ಅಭಿಮಾನವನ್ನು ಅತ್ಯಂತ ಸೃಜನಶೀಲ ಮತ್ತು ಹೃದಯಸ್ಪರ್ಶಿ ರೀತಿಯಲ್ಲಿ ತೋರಿಸಿದರು. ಈವೆಂಟ್‌ನಲ್ಲಿ ಅವರು ತಮ್ಮ ನೆಚ್ಚಿನ ಕಪ್ಪು ಬಣ್ಣದ ಡ್ರೆಸ್‌ ಧರಿಸಿದ್ದರು. ಶ್ರುತಿ ಹಾಸನ್ ಸಲಾರ್ ಚಿತ್ರದಲ್ಲಿ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ, ಬಹುನಿರೀಕ್ಷಿತ ಅಂತರಾಷ್ಟ್ರೀಯ ಚಲನಚಿತ್ರ, 'ದಿ ಐ' ಸಿನಿಮಾದಲ್ಲಿಯೂ ನಟಿಸಿದ್ದಾರೆ.


ಇದನ್ನೂ ಓದಿ: ಶೂಟಿಂಗ್‌ ಸೆಟ್‌ನಲ್ಲಿ ಸಿಗರೇಟ್‌ ಹೊಡೆದ ಸಲ್ಮಾನ್‌ ಖಾನ್‌, ವೈರಲ್‌ ಆಯ್ತು ವಿಡಿಯೋ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.