Shruti Haasan with Santanu Hazarika : ನಟಿ ಶೃತಿ ಹಾಸನ್ ಹಾಗೂ ಶಾಂತನು ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಅವರ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಇನ್ನೂ ಸಂಬಂಧದಲ್ಲಿದ್ದಾರೆ. ಈ ಇಬ್ಬರು ಮುಂಬೈನ ಐಷಾರಾಮಿ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಅವರು ಕೊರೊನಾ ಸಮಯದಲ್ಲಿ ಭೇಟಿಯಾದರು. ಆದರೆ ಶೃತಿ ಹಾಸನ್ ಹಾಗೂ ಶಾಂತನು ಜೊತೆ ಮದುವೆ ಬಗ್ಗೆ ಮಾತನಾಡುತ್ತಿಲ್ಲ. ಇತ್ತೀಚಿಗೆ ಶೃತಿ ಹಾಸನ್ ಮತ್ತು ಶಾಂತನು ಅವರ ಮದುವೆಯ ಬಗ್ಗೆ ಕಾಲಿವುಡ್‌ನಲ್ಲಿ ರೂಮರ್ ಕ್ರಿಯೇಟ್ ಆಗಿದೆ. ಅದಕ್ಕೆ ಶೃತಿ ಹಾಸನ್ ಪ್ರತಿವಾದ ಮಾಡಿದ್ದಾರೆ. ಈಗಲೇ ಮದುವೆ ಆಗಬೇಕೇ? ಇನ್ನೂ ಬಹಳ ಸಮಯವಿದೆ, ಅಲ್ಲಿಯವರೆಗೂ ಈ ವದಂತಿಗಳು ನಿಲ್ಲಬಾರದು ಎಂದು ವ್ಯಂಗ್ಯವಾಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Upendra Daughter: ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಎಷ್ಟು ಕ್ಯೂಟ್‌ ಆಗಿ ಇದ್ದಾಳೆ ಗೊತ್ತಾ?


ಇದೀಗ ಶ್ರುತಿ ಹಾಸನ್ ಸಲಾರ್ ಚಿತ್ರದ ಶೂಟಿಂಗ್ ಮುಗಿಸಿ ಮುಂಬೈಗೆ ಹೋಗಿದ್ದಾರೆ. ಶಾಂತನು ಮತ್ತೆ ತನ್ನೊಂದಿಗೆ ಸೇರಿಕೊಂಡಿದ್ದರಿಂದ ಶ್ರುತಿ ಹಾಸನ್ ತುಂಬಾ ಸಂತೋಷಪಟ್ಟಿದ್ದಾರೆ. ನಿನ್ನೆ ಅವರು ವೀಕೆಂಡ್ ಸ್ಪೆಷಲ್ ಆಗಿ ಊಟಕ್ಕೆ ಹೋಗಿದ್ದರು. ಶ್ರುತಿ ಹಾಸನ್ ತಮ್ಮ ಅಭ್ಯಾಸ ಮತ್ತು ಇಷ್ಟಗಳ ಬಗ್ಗೆ ಮಾತನಾಡಿದ್ದಾರೆ. ನಾನು ಹೊರಗೆ ಹೋಗಿ ತಿಂಡಿ ತಿನ್ನಲು ಇಷ್ಟಪಡುತ್ತೇನೆ.. ಶಾಂತನು ಮತ್ತು ನಾನು ತಿನ್ನುವುದಕ್ಕಾಗಿ ಬದುಕುತ್ತೇವೆ.. ಊಟ ಮಾಡುವಾಗ ಹಲವು ವಿಷಯಗಳನ್ನು ಚರ್ಚಿಸುತ್ತೇವೆ.. ನಿನ್ನಂತಹ ಆಹಾರಪ್ರಿಯರನ್ನು ಪಡೆದು ನನ್ನ ಜೀವನದಲ್ಲಿ ನೀನು ಬಂದಿರುವುದು ನನ್ನ ಅದೃಷ್ಟ ಎಂದು ಶಾಂತನು ಬಗ್ಗೆ ಶ್ರುತಿ ಹಾಸನ್ ಹೇಳಿದ್ದಾರೆ.


ಶ್ರುತಿ ಹಾಸನ್ ಗೆ ಈ ರ್ಷದ ಆರಂಭದಲ್ಲಿ, ಆಕೆಯ ಖಾತೆಯಲ್ಲಿ ಎರಡು ಹಿಟ್‌ಗಳು ದೊರೆತವು. ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರೆ, ಬಾಲಯ್ಯ ವೀರಸಿಂಹ ರೆಡ್ಡಿ ಸಿನಿಮಾ ಕೂಡ ಸೂಪರ್‌ ಹಿಟ್ ಆಯಿತು. ಈ ವರ್ಷ ಸಲಾರ್ ಸಹ ಸದ್ದು ಮಾಡುವ ನಿರೀಕ್ಷೆಯಿದೆ.


ಇದನ್ನೂ ಓದಿ : Upendra Daughter: ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಎಷ್ಟು ಕ್ಯೂಟ್‌ ಆಗಿ ಇದ್ದಾಳೆ ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.