ಬೆಂಗಳೂರು: ಮೀಟೂ ಆರೋಪದ ಮುಂದುವರೆದ ಭಾಗವಾಗಿ ಈಗ ನಟಿ ಶೃತಿ ಹರಿಹರನ್  ನಟ ಅರ್ಜುನ್ ಸರ್ಜಾ ತಮ್ಮ ಮೇಲೆ ಲೈಂಗಿಕ ದೌರ್ಜ್ಯನ್ಯವೆಸಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಬ್ಬನ್ ಪಾರ್ಕ್ ನಲ್ಲಿರುವ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಅರ್ಜುನ್ ಸರ್ಜಾ ತಮ್ಮನ್ನು ಶೂಟಿಂಗ್ ಬಳಿಕ ಯುಬಿ ಸಿಟಿಗೆ ಊಟಕ್ಕೆ ಕರೆದುಕೊಂಡು ಹೋಗಿ ತಮ್ಮ ತೊಡೆ ಮತ್ತು ಹಿಪ್ ನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದರು ಎಂದು ನಟಿ ಶ್ರುತಿ ಹರಿಹರನ್ ಉಲ್ಲೇಖಿಸಿದ್ದಾರೆ. ಈಗ ಆ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರತಿದೆ.


ಈ ಹಿಂದೆ ಮೀಟೂ ಅಭಿಯಾನದ ಭಾಗವಾಗಿ ನಟಿ ಶೃತಿ ಹರಿಹರನ್ ಅವರು ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪ ಮಾಡಿದ್ದರು.ಇದಕ್ಕೆ ಪ್ರತಿಯಾಗಿ ಅರ್ಜುನ್ ಸರ್ಜಾ ಅವರು ಮಾನನಷ್ಟ ಮೊಕದ್ದಮೆ  ದಾಖಲಿಸಿದ್ದರು.


ಈ ಎಲ್ಲ ಘಟನಾವಳಿಗಳ ನಂತರ  ಫಿಲಂ ಚೇಂಬರ್ ಕೂಡ ಹಿರಿಯ ನಟ ಅಂಬರೀಶ್ ನೇತೃತ್ವದಲ್ಲಿ ಸಭೆ ನಡೆಸಿ ಸಂಧಾನದ ಮೂಲಕ  ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದರು ಆದರೆ ಈ ಯತ್ನ ವಿಫಲವಾಗಿತ್ತು.ಈಗ ನಟಿ  ಶ್ರುತಿ  ಅರ್ಜುನ್ ಸರ್ಜಾ ಅವರು ತಮ್ಮ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದರು ಎಂದು ದೂರು ದಾಖಲಿಸುವ ಮೂಲಕ ಈಗ ಪ್ರಕರಣ ಹೊಸ ತಿರುವು ಪಡೆದಂತಾಗಿದೆ.