ಬೆಂಗಳೂರು: ಈ ಶೀರ್ಷಿಕೆ ಯಾವುದೋ ಚಂದನವನದ ಸಿನಿಮಾದ ಹೆಸರು ಅಲ್ಲ! ಬದಲಾಗಿ ಮೀಟೂ ಅಭಿಯಾನದ ಮೂಲಕ ಭಾರಿ ಸಂಚಲನವನ್ನೇ ಸೃಷ್ಟಿಸಿರುವ ಶ್ರುತಿ ಹರಿಹರನ್ ಅವರು ತಮ್ಮ ಮದುವೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ್ದು ಹೀಗೆ.


COMMERCIAL BREAK
SCROLL TO CONTINUE READING

ನಟ ಅರ್ಜುನ್ ಸರ್ಜಾ ವಿರುದ್ದ ಲೈಂಗಿಕ ಕಿರುಕುಳದ ಆರೋಪದ ವಿಚಾರವಾಗಿ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವ ಪತ್ರದಲ್ಲಿ ತಮ್ಮನ್ನು ಶ್ರುತಿ ಹರಿಹರನ್ ವೈಫ್ ಆಫ್ ರಾಮ್ ಕುಮಾರ್ ಎಂದು ಅವರು ಪರಿಚಯಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲರಿಗೂ  ಆಚ್ಚರಿಯನ್ನುಂಟುಮಾಡಿದ್ದಾರೆ.


ಈ ಹಿಂದೆ  ಶ್ರುತಿ ಮದುವೆಯಾಗುವ ವಿಚಾರವಾಗಿ ಹತ್ತು ಹಲವು ಗಾಸಿಪ್ ಸುದ್ದಿಗಳು ಆಗಾಗ ಗಾಂಧಿನಗರದಲ್ಲಿ  ಸದ್ದು ಮಾಡುತ್ತಲೇ ಇದ್ದವು ಆದರೆ ಆದ್ಯಾವುದು ಕೂಡ ಸತ್ಯವಾಗಿರಲಿಲ್ಲ.ಆದರೆ ಇಂದು ನಟಿ ನಟ ಅರ್ಜುನ್ ಸರ್ಜಾ ವಿರುದ್ದ ಲೈಂಗಿಕ ದೌರ್ಜ್ಯನ್ಯದ ಕೇಸ್ ದಾಖಲಿಸಲು ಹೋದಾಗ ಪೊಲೀಸರು ಮದುವೆಯಾಗಿರುವ ಪ್ರಶ್ನೆ ಕೇಳಿದ್ದಾರೆ, ಇದರಿಂದ ಸ್ವಲ್ಪಗೊಂದಲಕ್ಕೆ ಒಳಗಾದಂತೆ ಕಂಡು ಬಂದ ಶೃತಿ ನಂತರ  ಮದುವೆಯಾಗಿರುವ ಬಗ್ಗೆ ಒಪ್ಪಿಕೊಂಡು ದೂರಿನಲ್ಲಿ ವೈಫ್ ಆಪ್ ರಾಮ್ ಕುಮಾರ್ ಎಂದು ಬರೆದಿದ್ದಾರೆ.ಆ ಮೂಲಕ ಶ್ರುತಿ ಹರಿಹರನ್ ಮದುವೆ ವಿಷಯ ಬೆಳಕಿಗೆ ಬಂದಿದೆ.


ಶ್ರುತಿ ಹರಿಹರನ್ ಅವರ ಪತಿ ಮೂಲತಃ ಕೇರಳದವರಾಗಿದ್ದು  ಕಲಾರಿಯಪಟ್ಟುದಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ.ಇವರಿಬ್ಬರು ಕೂಡ ಈ ಹಿಂದೆ  ಪ್ರೇಮ ಎಂಬ ಮ್ಯೂಸಿಕ್ ಅಲ್ಬಮ್ ವೊಂದರಲ್ಲಿ ನಟಿಸಿದ್ದರು ಎಂದು ತಿಳಿದುಬಂದಿದೆ.