ಇದುವರೆಗೂ ಸಖತ್ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೊಗ್ಗಿನ ಮನಸ್ಸಿನ ಬೆಡಗಿ ಶುಭಾ ಪೂಂಜ ಇದೀಗ ನೈಜ ಕಥೆ ಆಧಾರಿತ ಹಾಗೇ ಹಾರರ್ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ತೆರೆಕಂಡ ವಿ.ನಾಗೇಂದ್ರ ಪ್ರಸಾದ್ ನಿರ್ದೇಶನದ 'ಗೂಗಲ್' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶುಭಾ ಇದೀಗ ಮತ್ತಷ್ಟು ವಿಭಿನ್ನವಾದ ಹಾರರ್ ಚಿತ್ರದಲ್ಲಿ ನಟಿಸಿದ್ದಾರೆ. ಅದೇ 'ಜಯಮಹಲ್' ಚಿತ್ರ. 


COMMERCIAL BREAK
SCROLL TO CONTINUE READING

ಕನ್ನಡದಲ್ಲಿ ನೂರಾರು ಹಾಡುಗಳಿಗೆ ಜೀವ ತುಂಬಿ, ಕನ್ನಡದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹೃದಯ ಶಿವ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನೀನಾಸಂ ಅಶ್ವತ್ ಮತ್ತು ಶುಭಾ ಪುಂಜಾ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದುವರೆಗೂ ಪೋಷಕ, ಖಳ ಪಾತ್ರಗಳಲ್ಲೇ ನಟಿಸುತ್ತಿದ್ದ ನೀನಾಸಂ ಅಶ್ವಥ್ ಅವರು ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. 



ಸುಮಾರು 40ರ ದಶಕದ ಆರಂಭದ ಕಥೆ ಆಧಾರಿತ ಚಿತ್ರ ಇದ್ದಾಗಿದ್ದು, ಬ್ರಿಟಿಷ್ ಸಾಮ್ರಾಜ್ಯದಲ್ಲಿ ರಾಜಕುಟುಂಬವೊಂದರ ಸದಸ್ಯರ ನಡುವಿನ ಭಿನಾಭಿಪ್ರಾಯ, ದ್ವೇಷ, ಅಸೂಯೆ, ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ಚಿತ್ರದಲ್ಲಿನ ವಿಶಿಷ್ಟ ಪಾತ್ರಗಳು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತವೆ. 


ಕನ್ನಡ ತಮಿಳು ಎರಡೂ ಭಾಷೆಗಳಲ್ಲಿ ಚಿತ್ರಿಸಿರುವ ಈ ಸಿನಿಮಾ ಕನ್ನಡದಲ್ಲಿ 'ಜಯಮಹಲ್' ಎಂದೂ, ತಮಿಳಿನಲ್ಲಿ 'ಮಾತಂಗಿ' ಎಂದೂ ಹೆಸರಾಗಿದೆ.  ಕಥೆ, ಚಿತ್ರಕಥೆ, ನಿರ್ದೇಶನದೊಂದಿಗೆ ಸಾಹಿತ್ಯ ಹಾಗೂ ಸಂಭಾಷಣೆಯನ್ನೂ ಹೃದಯಶಿವ ಅವರೇ ಬರೆದಿದ್ದು, ಜ್ಯೂರಿ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರಕ್ಕೆ ನಾಗಾರ್ಜುನ ಅವರ ಛಾಯಾಗ್ರಹಣ ವಿದ್ದು, ರೇಣುಕಾ ಸ್ವರೂಪ್ ಬಂಡವಾಳ ಹೂಡಿದ್ದಾರೆ. 


ಈಗಾಗಲೇ ಸೆನ್ಸಾರ್‌ ಮಂಡಳಿಯಿಂದ 'ಜಯಮಹಲ್‌' ಚಿತ್ರಕ್ಕೆ 'ಎ' ಸರ್ಟಿಫಿಕೇ ದೊರೆತಿದ್ದು, ಮುಂದಿನ ತಿಂಗಳು ರಾಜ್ಯಾದ್ಯಂತ ತೆರೆ ಕಾಣಲಿದೆ.