Shyamala Devi on Prabhas Marriage : ಪ್ರಭಾಸ್ ಬಾರತೀಯ ಸಿನಿ ಇಂಡಸ್ಟ್ರಿಯಲ್ಲಿನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಲ್ಲಿ ಒಬ್ಬರು. ಡಾರ್ಲಿಂಗ್‌ ಮದುವೆಗಾಗಿ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಟ ಎಲ್ಲೇ ಹೋದರೂ.. ಅಥವಾ ಯಾವುದೇ ಸಿನಿಮಾ ಪ್ರಮೋಷನ್ ನಡೆದರೂ ಡಾರ್ಲಿಂಗ್ ಮದುವೆ ಬಗ್ಗೆ ಖಂಡಿತಾ ಪ್ರಶ್ನೆ ಮೂಡುತ್ತದೆ. ಪ್ರಭಾಸ್ ಮದುವೆಯಾದಾಗ ಮಾತ್ರ ನಾವು ಮದುವೆಯಾಗುತ್ತೇವೆ ಎಂದು ಈಗಾಗಲೇ ಹಲವು ಹೀರೋಗಳು ಫನ್ನಿ ಕಾಮೆಂಟ್ಸ್ ಮಾಡಿರುವುದು ಗೊತ್ತೇ ಇದೆ. 


COMMERCIAL BREAK
SCROLL TO CONTINUE READING

ಡಾರ್ಲಿಂಗ್ ಮದುವೆ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹಬ್ಬಿವೆ. ಟಾಲಿವುಡ್ ಮತ್ತು ಬಾಲಿವುಡ್‌ನ ನಾಯಕಿಯೊಂದಿಗೆ ಡಾರ್ಲಿಂಗ್ ಏಳು ಹೆಜ್ಜೆ ಹಾಕುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಭಾಸ್ ಮದುವೆ ಬಗ್ಗೆ ಹಲವು ಜ್ಯೋತಿಷಿಗಳು ಕುತೂಹಲಕಾರಿ ಸಂಗತಿಗಳನ್ನೂ ಹೇಳಿದ್ದಾರೆ. ಇತ್ತೀಚೆಗೆ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ಸಂದರ್ಶನವೊಂದರಲ್ಲಿ ಡಾರ್ಲಿಂಗ್ ಮದುವೆ ಬಗ್ಗೆ ಮಾತನಾಡಿದ್ದಾರೆ.


ಇದನ್ನೂ ಓದಿ:ಧೋನಿ ಹುಟ್ಟುಹಬ್ಬದ ಆಚರಣೆಯಲ್ಲಿ ಸ್ಟಾರ್‌ ನಟ ಹಾಜರ್‌..!


ʼಒಳ್ಳೆಯತನವು ಒಬ್ಬ ವ್ಯಕ್ತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಪ್ರಭಾಸ್ ಅವರ ಯಶಸ್ಸು ಸಾಬೀತುಪಡಿಸಿದೆ. ಬಾಹುಬಲಿ ನಂತರ ಪ್ರಭಾಸ್‌ಗೆ ಯಶಸ್ಸು ಸಿಗುವುದಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ ಅವರ ನಿರೀಕ್ಷೆಗಳೆಲ್ಲ ತಲೆಕೆಳಗಾಗಿವೆ. ಪ್ರಭಾಸ್ ಮದುವೆ ವಿಚಾರದಲ್ಲೂ ಅದೇ ಆಗುತ್ತೆ. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಂತೆ ತಮ್ಮ ಸಿನಿಮಾಗಳು ಯಶಸ್ವಿಯಾಗಲು ಪ್ರಭಾಸ್ ಶ್ರಮಿಸುತ್ತಿದ್ದಾರೆ ಎಂದು ಶ್ಯಾಮಲಾ ಅವರು ಹೇಳಿದ್ದಾರೆ..


ಅಲ್ಲದೆ, ನಾವೂ ಸಹ ಪ್ರಭಾಸ್ ಮದುವೆಯಾಗಬೇಕು ಅಂತ ಬಯಸುತ್ತೇವೆ. ಅದಕ್ಕೂ ಸರಿಯಾದ ಸಮಯ ಬರುತ್ತದೆ. ಆ ನಂಬಿಕೆಯೊಂದಿಗೆ ನಾವಿದ್ದೇವೆ. ಕೃಷ್ಣಂ ರಾಜು ಮೇಲಿನಿಂದ ಎಲ್ಲವನ್ನೂ ನೋಡುತ್ತಿದ್ದಾರೆ. ಇಲ್ಲಿಯವರೆಗೆ ಅವರು ನಿರೀಕ್ಷಿಸಿದ್ದೆಲ್ಲವೂ ನಡೆದಿದೆ. ಮದುವೆಯೂ ನಡೆಯಲಿದೆ ಎಂದರು ಶ್ಯಾಮಲಾ ಅವರು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.