ಮುಂಬೈ: 'ಬಿಗ್ ಬಾಸ್ 13' ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 40 ನೇ ವಯಸ್ಸಿನಲ್ಲಿ ಸಿದ್ಧಾರ್ಥ್ ಶುಕ್ಲಾ (Siddharth Shukla) ಜಗತ್ತಿಗೆ ವಿದಾಯ ಹೇಳಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಸಾವಿನಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಈ ಮಧ್ಯೆ ಸಿದ್ಧಾರ್ಥ್ ಶುಕ್ಲಾ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಅವರು ತಮ್ಮ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಕರೋನಾ ಯುಗದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ ಗೆ ಧನ್ಯವಾದ ಅರ್ಪಿಸಿದರು. 


COMMERCIAL BREAK
SCROLL TO CONTINUE READING

ಸಿದ್ಧಾರ್ಥ್ ಶುಕ್ಲಾ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್:
ಆಗಸ್ಟ್ 24 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡ ಸಿದ್ಧಾರ್ಥ್ ಶುಕ್ಲಾ, 'ಎಲ್ಲಾ ಕರೋನಾ (Corona)  ವಾರಿಯರ್ಸ್ ಗೆ ಹೃದಯಪೂರ್ವಕ ಧನ್ಯವಾದಗಳು! ನೀವು ನಿಮ್ಮ ಜೀವವನ್ನು ಪಣಕ್ಕಿಟ್ಟು ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ ಮತ್ತು ತಮ್ಮ ಕುಟುಂಬದೊಂದಿಗೆ ಇರಲು ಸಾಧ್ಯವಾಗದ ರೋಗಿಗಳಿಗೆ ಸಾಂತ್ವನ ನೀಡುತ್ತೀರಿ. ನೀವು ನಿಜವಾಗಿಯೂ ಧೈರ್ಯಶಾಲಿ! ಮುಂಚೂಣಿಯಲ್ಲಿರುವುದು ಸುಲಭವಲ್ಲ, ಆದರೆ ನಿಮ್ಮ ಪ್ರಯತ್ನಗಳನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ. #MumbaiDiariesOnPrime ಈ ಸೂಪರ್ ಹೀರೋಗಳಿಗೆ ಬಿಳಿ ಟೋಪಿಗಳು, ಶುಶ್ರೂಷಾ ಸಿಬ್ಬಂದಿ ಮತ್ತು ಅವರ ಅಸಂಖ್ಯಾತ ತ್ಯಾಗಗಳಿಗೆ ಗೌರವವಾಗಿದೆ ಎಂದು ಬರೆದಿದ್ದರು. ಆಗಸ್ಟ್ 25 ರಂದು #TheHeroesWeOwe ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಇದರಲ್ಲಿ ಬರೆದಿದ್ದರು.


Drugs Case: Arman Kohliಗೆ 14 ನ್ಯಾಯಾಂಗ ಬಂಧನ, ನಿವಾಸದಲ್ಲಿ ಕೊಕೇನ್ ಪತ್ತೆಯಾಗಿತ್ತು


ಸಿದ್ಧಾರ್ಥ್ ಶುಕ್ಲಾ ಕ್ರಿಕೆಟ್ ನ ದೊಡ್ಡ ಅಭಿಮಾನಿ:
ತನ್ನ ನಟನೆಯಿಂದ ಜನರ ಹೃದಯದಲ್ಲಿ ಮನೆ ಮಾಡಿದ್ದ ಸಿದ್ಧಾರ್ಥ್ ಕ್ರಿಕೆಟ್ ನ ದೊಡ್ಡ ಅಭಿಮಾನಿಯಾಗಿದ್ದರು ಎಂದು ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಸಿದ್ಧಾರ್ಥ್ ಶುಕ್ಲಾ ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲ ಅವರು ಆಗಾಗ್ಗೆ ಈ ಆಟವನ್ನು ಆಡುತ್ತಿದ್ದರು. ಇದಲ್ಲದೇ, ಅನೇಕ ಸಂದರ್ಶನಗಳಲ್ಲಿ ಸಿದ್ಧಾರ್ಥ್ ಶುಕ್ಲಾ ತನಗೆ  ಕ್ರಿಕೆಟ್ ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದರು. 


ಈ ಕಾರ್ಯಕ್ರಮದಿಂದ ಮನೆ ಮಾತಾಗಿದ್ದ ಸಿದ್ಧಾರ್ಥ್ ಶುಕ್ಲಾ:
12 ಡಿಸೆಂಬರ್ 1980 ರಂದು ಮುಂಬೈನಲ್ಲಿ ಜನಿಸಿದ ಸಿದ್ಧಾರ್ಥ್ ಶುಕ್ಲಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮಾಡೆಲಿಂಗ್ ಮಾಡಿದರು. ಅವರು 2004 ರಲ್ಲಿ ನಟನಾ ಜಗತ್ತಿಗೆ ಪದಾರ್ಪಣೆ ಮಾಡಿದರು. 2008 ರಲ್ಲಿ, ಅವರು 'ಬಾಬುಲ್ ಕಾ ಆಂಗನ್ ಛೋಟೆ ನಾ' ಎಂಬ ಟಿವಿ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಬಾಲಿಕಾ ವಧುವಿನ ಶಿವನ ಪಾತ್ರದಿಂದ ಸಿದ್ಧಾರ್ಥ್ ಅವರ ನಟನೆಗೆ ನಿಜವಾದ ಮನ್ನಣೆ ಸಿಕ್ಕಿತು. ಈ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಸಿದ್ಧಾರ್ಥ್ ಶುಕ್ಲಾ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರು. ಅವರು ಬಿಗ್ ಬಾಸ್ 13,  'ಖತ್ರೋನ್ ಕೆ ಖಿಲಾಡಿ' ಮತ್ತು 'ಜಲಕ್ ದಿಖ್ಲಾಜಾ' ಕಾರ್ಯಕ್ರಮಗಳ ವಿಜೇತರಾಗಿ ಹೊರಹೊಮ್ಮಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ