Sidharth Kiara : ಹಸೆಮಣೆ ಏರಿದ ಕಿಯಾರಾ ಹಾಗೂ ಸಿದ್ದಾರ್ಥ ಮಲ್ಹೋತ್ರಾ ...!
Sidharth malhotra wedding: ಶೇರ್ ಷಾ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದ ಬಾಲಿವುಡ್ ಟಾಪ್ ಜೋಡಿ ಇಂದು ಹಸೆಮಣೆ ಎರೋಕೆ ಸಜ್ಜಾಗಿದೆ. ಹೌದು ಬಾಲಿವುಡ್ ನಲ್ಲಿ ಲವ್ ಬ್ರೇಕಪ್ ಕಾಮನ್ ಅಂತಾ ಹೇಳಲಾಗ್ತಿತ್ತು.
Sidharth malhotra wedding: ಶೇರ್ ಷಾ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದ ಬಾಲಿವುಡ್ ಟಾಪ್ ಜೋಡಿ ಇಂದು ಹಸೆಮಣೆ ಎರೋಕೆ ಸಜ್ಜಾಗಿದ್ದಾರೆ . ಹೌದು ಬಾಲಿವುಡ್‌ನಲ್ಲಿ ಲವ್ ಬ್ರೇಕಪ್ ಕಾಮನ್ ಅಂತಾ ಹೇಳಲಾಗ್ತಿತ್ತು. ಆದರೆ ಈ ಜೋಡಿ ಮಾತ್ರ ಆ ಕ್ಯಾಟಗರಿಯಲ್ಲಿ ಬರೋದಿಲ್ಲ. ಏಕೆಂದರೆ ಈಜೋಡಿ ಯಾವುದೇ ಊಹಾಪೋಹಗಳಿಗೂ ತುತ್ತಾಗದೇ ಲವ್ ಮಾಡಿ ಮದುವೆ ಆಗ್ತಿದ್ದಾರೆ.
ಇದನ್ನೂ ಓದಿ: 'ಸೌತ್ ಇಂಡಿಯನ್ ಹೀರೋ'ಗೆ ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಭರ್ಜರಿ ಸಾಥ್...!
ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್ ಕೊನೆಯ ಸೀಸನ್ ನಲ್ಲಿ, ವಿಭಿನ್ನ ಸಂಚಿಕೆಯಲ್ಲಿ ಕಾಣಿಸಿಕೊಂಡ ಕಿಯಾರಾ ಅಡ್ವಾನಿ ಮತ್ತು ಸಿದ್ದಾರ್ಥ ಅವರ ಸಂಬಂಧದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಇವರ ಬಗ್ಗೆ ಗಾಸಿಪ್ ಸುದ್ದಿಗಳು ಹರಿದಾಡುತ್ತಿದ್ದವು. ಎಲ್ಲ ಪ್ರಶ್ನೆಗಳೀಗೂ ಮಿಷನ್ ಮಜ್ನು ಸಿನಿಮಾದ ನಂತರ ತೆರೆ ಎಳೆಯಲಾಯಿತು. ಕಿಯಾರಾ ಹಾಗೂ ಸಿದ್ದಾರ್ಥ ಅಧಿಕೃತವಾಗಿ ತಾವು ಮದುವೆಯಾಗುವುದನ್ನು ತಿಳಿಸಿದರು.
ಇದನ್ನೂ ಓದಿ: Kantara : ʻಕಾಂತಾರʼ ಬಿಗ್ ಸಕ್ಸಸ್ ಸೆಲೆಬ್ರೇಶನ್.. ಭಾನುವಾರ ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಫಿಕ್ಸ್.!
ಶೇರ್ ಷಾ ಸಿನಿಮಾದ ಮೂಲಕ ಎಲ್ಲರಿಗೂ ಇಷ್ಟವಾದ ಈ ಜೋಡಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ . ಎಷ್ಟೋ ಅಭಿಮಾನಿಗಳ ಆಸೆ ಇಂದು ನೆರವೇರುತ್ತಿದೆ. ಕಿಯಾರಾ ಸಾಕಷ್ಟು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಹಾಗೆಯೇ ಬಾಲಿವುಡ್ ನಲ್ಲಿ ಬಹಳ ಬೇಡಿಕೆಯಿರುವ ನಟಿಯಾದ್ದಾರೆ , ಸಿದ್ದಾರ್ಥ ಕೂಡ ಬಾಲಿವುಡ್ ನ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ. ಈ ಜೋಡಿ ತೆರೆ ಮೇಲೆ ಬಂದಾಗಿನಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಟಾಪ್ ಜೋಡಿಯಲ್ಲಿ ಈ ಜೋಡಿಯು ಕೂಡ ಇರಲಿದೆ ಎಂದು ಹೇಳಲಾಗುತ್ತಿದೆ. ಕಿಯಾರಾ ಬಾಲಿವುಡ್ ನ ಸಾಕಷ್ಟು ನಟರ ಜೊತೆ ನಟಿಸಿದ್ದಾರೆ ಆದರೆ ಸಿದ್ದಾರ್ಥ ಜೊತೆ ನಟಿಸಿರುವ ಸಿನಿಮಾಗೆ ಹೆಚ್ಚು ರೆಸ್ಪಾನ್ಸ ದೊರೆತಿದೆ. ಇದರ ಅರ್ಥ ಈ ಜೋಡಿ ಒಂದಾಗಬೇಕು ಅನ್ನೋದು ಎಷ್ಟೋ ಅಭಿಮಾನಿಗಳ ಆಸೆ ಈಡೇರಿದೆ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.