ಬೆಂಗಳೂರು: 2018ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭ ಸೆಪ್ಟೆಂಬರ್ 14 ಮತ್ತು 15, 2018 ರಂದು ದುಬೈನಲ್ಲಿ ಆದ್ಧೂರಿಯಾಗಿ ನೆರವೇರಿದೆ. 7 ನೇ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್(ಸೈಮಾ ಅವಾರ್ಡ್) ಪ್ರಧಾನ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟ ನಟಿಯರು ಪಾಲ್ಗೊಂಡಿದ್ದರು.


COMMERCIAL BREAK
SCROLL TO CONTINUE READING

SIIMA 2018 ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕಳೆದ ವರ್ಷದ ಅತ್ಯುತ್ತಮ ಚಲನಚಿತ್ರಗಳು ಗುರುತಿಸುತ್ತದೆ. ಜೊತೆಗೆ ಜೀವಿತಾವಧಿ ಕೊಡುಗೆಗಳಿಗಾಗಿ ವಿಶೇಷ ಗೌರವಗಳು ಮತ್ತು ಕೆಲವು ವಿಶೇಷ ಪ್ರಶಸ್ತಿಗಳನ್ನು ಇಲ್ಲಿ ನೀಡಲಾಗುತ್ತದೆ.


ಸೈಮಾ 2018ರ ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ 'ರಾಜಕುಮಾರ' ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಜೊತೆಗೆ ಐದು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ರಾಜಕುಮಾರ ಚಿತ್ರದ ಅಭಿನಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದರೆ, ಅತ್ಯುತ್ತಮ ಸಂಗೀತ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಗೀತೆ ರಚನೆಕಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.