Mallika Rajput Death: ವಿಜಯಲಕ್ಷ್ಮಿ ಎಂದೇ ಖ್ಯಾತಿ ಪಡೆದಿದ್ದ ಗಾಯಕಿ-ನಟಿ ಮಲ್ಲಿಕಾ ರಜಪೂತ್ ಕಳೆದ ದಿನ ಅಂದರೆ ಫೆಬ್ರವರಿ 13ರಂದು, ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. 35 ವರ್ಷದ ಗಾಯಕಿಯ ಶವ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಕುಂಡ್ ಪ್ರದೇಶದ ಮನೆಯ ಕೋಣೆಯಲ್ಲಿ ಫ್ಯಾನ್‌’ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಜಕೇಸರಿ ಯೋಗದಿಂದ ಈ ಜನ್ಮರಾಶಿಗೆ ರಾಜವೈಭೋಗ: ಇವರಿಗಿನ್ನಿಲ್ಲ ಸೋಲಿನ ಚಿಂತೆ, ಸಾಲು ಸಾಲು ಯಶಸ್ಸಿನದ್ದೇ ಆಟ!


ಮಲ್ಲಿಕಾ ರಜಪೂತ್ ಅವರು 2014 ರಲ್ಲಿ ಕಂಗನಾ ರನೌತ್ ಅಭಿನಯದ ಕ್ರೈಮ್ ಕಾಮಿಡಿ ಸಿನಿಮಾ ‘ರಿವಾಲ್ವರ್ ರಾಣಿ’ಯಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು. ಇದಲ್ಲದೆ, ದಿವಂಗತ ನಟಿ ಶಾನ್ ಅವರ ‘ಯಾರಾ ತುಜೆ’ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. 2016 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದ ಅವರು, ಎರಡು ವರ್ಷಗಳ ನಂತರ ರಾಜಕೀಯ ತೊರೆದರು.


ಮನರಂಜನಾ ಉದ್ಯಮ ಮತ್ತು ರಾಜಕೀಯದಲ್ಲಿ ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿದಿರಲಿಲ್ಲ. ಇದೇ ಕಾರಣದಿಂದ ಆಧ್ಯಾತ್ಮಿಕತೆಯತ್ತ ತೆರಳಿದರು. 2022 ರಲ್ಲಿ ಉತ್ತರ ಪ್ರದೇಶದ ಭಾರತೀಯ ಸವರ್ಣ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಅಂದಹಾಗೆ ಮಲ್ಲಿಕಾ ಕಥಕ್ ನರ್ತಕಿ ತರಬೇತುದಾರರಾಗಿದ್ದರು


ಮಲ್ಲಿಕಾ ಅವರ ತಾಯಿ ಸುಮಿತ್ರಾ ಸಿಂಗ್ ಹೇಳುವಂತೆ, “ನಾವೆಲ್ಲರು ಮಲಗಿದ್ದೆವು, ಆಕೆಯ ಸಾವು ಯಾವಾಗ ಸಂಭವಿಸಿತು ಎಂದು ನನಗೆ ತಿಳಿದಿಲ್ಲ, ಮೊದಲೇ ಬಾಗಿಲು ಮುಚ್ಚಿತ್ತು. ಆದ್ರೆ ಲೈಟ್ ಆನ್ ಆಗಿತ್ತು. ನಾವು ಅನೇಕ ಬಾರಿ ಆಕೆಯನ್ನು ಕರೆದರೂ ಬಾಗಿಲು ತೆಗೆಯಲಿಲ್ಲ. ಕೊನೆಗೆ ನಾನು ಕಿಟಕಿಯ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ನನ್ನ ಮಗಳನ್ನು ನೋಡಿದೆ” ಎಂದು ಕಣ್ಣೀರು ಹಾಕಿದ್ದಾರೆ.


ಇದನ್ನೂ ಓದಿ: ಕೃಪೆಯಿಂದ ಪಂಚ ಮಹಾಯೋಗಗಳ ರಚನೆ, ಈ ಜನರಿಗೆ ಅಷ್ಟೈಶ್ವರ್ಯ ಕರುಣಿಸುವಳು ತಾಯಿ ಲಕ್ಷ್ಮಿ!


ಪಿಟಿಐ ಪ್ರಕಾರ, ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಶ್ರೀರಾಮ್ ಪಾಂಡೆ ಅವರು ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಎಂದು ತೋರುತ್ತದೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.