Queen Of Melody - ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ (Voice Of India) ವಿಧಿವಶರಾಗಿದ್ದಾರೆ. ಇದನ್ನು ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಪ್ರತೀಕ್ ಸಮದಾನಿ ಖಚಿತಪಡಿಸಿದ್ದಾರೆ. ಈ ದುಃಖಕರ ಸುದ್ದಿ ಪ್ರಕಟಗೊಳ್ಳುತ್ತಲೇ ಇಡೀ ದೇಶದಲ್ಲಿಯೇ ಶೋಕ ಮಡುಗಟ್ಟಿದೆ. ಬಾಲಿವುಡ್ ನಿಂದ ರಾಜಕೀಯ ಕ್ಷೇತ್ರದವರೆಗೆ ಮತ್ತು ಅಭಿಮಾನಿಗಳಲ್ಲಿ ಭಾರಿ ನಿರಾಶೆಯ ವಾತಾವರಣ ಮನೆ ಮಾಡಿದೆ. ಸ್ವರ ಕೋಗಿಲೆ ಎಂದ ಖ್ಯಾತ ಲತಾ ದಿದಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ 92ನೇ ವಯಸ್ಸಿನಲ್ಲಿ ತನ್ನ ಜೀವನಗಾನ ಮುಗಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಲತಾ ಮಂಗೇಶ್ಕರ್ ಜೀವನದ ಕೇಳರಿಯದ ಕಥೆ ಇದು
ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಮಹಾರಾಷ್ಟ್ರದ ಎಲ್ಲಾ ಮುಖಂಡರು ಲತಾ ಅವರ ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ. ಲತಾ (Lata Mangeshkar) ಅಭಿಮಾನಿಗಳು ಅವರ ಜೀವನಕ್ಕೆ ಸಂಬಂಧಿಸಿದ ಕಥೆಗಳು ಮತ್ತು ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಜೀವನಕ್ಕೆ ಸಂಬಂಧಿಸದಂತೆ ಕೇಳರಿಯದ ಒಂದು ಕಥೆಯನ್ನು ನಾವು ನಿಮಗೆ ಹೇಳುತ್ತೇವೆ.


ಜನನದ ವೇಳೆ ಲತಾ ಮಂಗೇಶ್ಕರ್ ಅವರ ಹೆಸರು ಬೇರೆಯ ಆಗಿತ್ತು
28 ಸೆಪ್ಟೆಂಬರ್ 1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್ ಅಸಲಿ ಹೆಸರು ಲತಾ ಆಗಿರಲಿಲ್ಲ. ಲತಾ ಹುಟ್ಟಿದಾಗ ಅವರ ತಂದೆ ಮತ್ತು ಮಹಾರಾಷ್ಟ್ರದ ಖ್ಯಾತ ನಾಟಕಕಾರ ಪಂ. ದಿನಾನಾಥ್ ಮಂಗೇಶ್ಕರ್ ಅವರು ಲತಾಗೆ 'ಹೇಮಾ' ಎಂದು ಹೆಸರಿಟ್ಟಿದ್ದರು. ಇದಾದ ಬಳಿಕ ಅವರ ತಂದೆಯ ಖ್ಯಾತ ನಾಟಕ 'ಭಾವ್ ಬಂಧನ್ ' ಖ್ಯಾತಿಯ ನಟಿ ಲತಿಕಾಗೆ ಕಾರಣ ಅವರ ಹೆಸರನ್ನು ಲತಾ ಎಂದಿಡಲಾಯಿತು. ಲತಾ ಮಂಗೇಶ್ಕರ್ ತನ್ನ ತನ್ನ ತಂದೆ-ತಾಯಿಯರ ಮೊದಲ ಮಗುವಾಗಿದ್ದರು. ಲತಾ ಬಳಿಕ ಅವರ ಕುಟುಂಬಕ್ಕೆ ಮೀನಾ ಮಂಗೇಶ್ಕರ್, ಆಶಾ ಭೊಂಸಲೆ, ಉಷಾ ಮಂಗೇಶ್ಕರ್ ಹಾಗೂ ಖ್ಯಾತ ಸಂಗೀತಕಾರ ಮತ್ತು ಏಕೈಕ ಕಿರಿಯ ಸಹೋದರ ಹೃದಯನಾಥ್ ಮಂಗೇಶ್ಕರ್ ಸೇರಿದ್ದಾರೆ. 


ಕಲಾ ಪ್ರೇಮಿ ಕುಟುಂಬ
ಸ್ವರಗಳ ದೇವಿ ಲತಾ ಮಂಗೇಶ್ಕರ್ ಖ್ಯಾತ ರಂಗಭೂಮಿ ಕಲಾವಿದ ಪಂಡಿತ್ ದಿನಾನಾಥ್ ಮಂಗೇಶ್ಕರ್ ಹಾಗೂ ಶಾಸ್ತ್ರೀಯ ಗಾಯಕಿ ಶೇವಂತಿ (ಶುದಾಮತಿ) ಅವರ ಪುತ್ರಿಯಾಗಿದ್ದಾರೆ. ಲತಾ ತಾಯಿ ಶೇವಂತಿ ಅವರ ತಂದೆಗೆ ಎರಡನೇ ಪತ್ನಿಯಾಗಿದ್ದರು. ದಿನಾನಾಥ್ ಅವರ ಮೊದಲ ಪತ್ನಿ ನರ್ಮದಾ ಲತಾ ಮಂಗೇಶ್ಕರ್ ಅವರ ಮಾಮಿಯಾಗಿದ್ದರು ಮತ್ತು ತುಂಬಾ ಕಡಿಮೆ ವಯಸ್ಸಿನಲ್ಲಿ ಅವರ ವಿವಾಹ ನೆರವೇರಿತ್ತು. ನರ್ಮದಾ ಅವರ ನಿಧನದ ಬಳಿಕ ಪಂಡಿತ್. ದಿನಾನಾಥ್ ಮಂಗೇಶ್ಕರ್ 1927ರಲ್ಲಿ ಶೇವಂತಾ ಅವರನ್ನು ವಿವಾಹವಾಗಿದ್ದರು.


ತಂದೆಯ ಮುಂದೆ ಹಾಡು ಹೇಳುವುದರಿಂದ ಲತಾ ತಪ್ಪಿಸಿಕೊಳ್ಳುತ್ತಿದ್ದರಂತೆ
ಲತಾ ಮಂಗೇಶ್ಕರ್ ಹಾಗೂ ಅವರ ಕುಟುಂಬಕ್ಕೆ ಹತ್ತಿರದಲ್ಲಿರುವ ಮೂಲಗಳ ಪ್ರಕಾರ ಲತಾ ತನ್ನ ವಯಸ್ಸಿನ 5ನೇ ವರ್ಷದವರೆಗೆ ತಂದೆಯ ಎದುರು ಹಾಡು ಹೇಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ನಂತರ ಒಂದು ದಿನ ಆಕಸ್ಮಿಕವಾಗಿ ಒಮ್ಮೆ ಲತಾ ಹಾಡು ಹೇಳುತ್ತಿರುವುದನ್ನು ಗಮನಿಸಿದ ಪಂಡಿತ್ ದಿನಾನಾಥ್ ಆಶ್ಚರ್ಯಚಕಿತರಾಗುವುದರ ಜೊತೆಗೆ ಮಗಳ ಹಾಡಿಗೆ ಮಂತ್ರ ಮುಗ್ಧರಾದರು ಎನ್ನಲಾಗುತ್ತದೆ. ಆ ಬಳಿಕ ಅವರು ತಮ್ಮ ಪುತ್ರಿಗೆ ಸಂಗೀತದ ಅಭ್ಯಾಸ ಮಾಡಿಸಲು ನಿರ್ಧರಿಸಿದರು.


ಕೇವಲ ಎರಡೇ ದಿನ ಲತಾ ಶಾಲೆಗೆ ಹೋಗಿದ್ದಾರಂತೆ
ಲತಾ ಮಂಗೇಶ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಮತ್ತೊಂದು ರೋಚಕ ಸಂಗತಿ ಎಂದರೆ, ಅವರು ತಮ್ಮ ಜೀವನದಲ್ಲಿ ಕೇವಲ ಎರಡೇ ದಿನ ಶಾಲೆಯ ಮೆಟ್ಟಿಲೇರಿದ್ದಾರೆ. ಸಂಗೀತದ ಶಿಕ್ಷಣದ ಜೊತೆಗೆ ಇತರೆ ಭಾಷೆಗಳ ಶಿಕ್ಷಣವನ್ನು ಅವರ ತಂದೆ ಮನೆಯಲ್ಲಿಯೇ ಮಾಡಿಸಿದ್ದಾರೆ ಎನ್ನಲಾಗುತ್ತದೆ.


ಲತಾ ಮೊದಲ ಗಳಿಕೆ ಎಷ್ಟು ಗೊತ್ತಾ?
ಲತಾ ಮಂಗೇಶ್ಕರ್ ಅವರು ತಮ್ಮ 5 ನೇ ವಯಸ್ಸಿನಿಂದ ತಮ್ಮ ತಂದೆಯೊಂದಿಗೆ ರಂಗಭೂಮಿಯಲ್ಲಿ ನಟನೆ ಪ್ರಾರಂಭಿಸಿದ್ದರು. ಆದರೆ ಬಾಲ್ಯದಿಂದಲೂ ಗಾಯಕಿಯಾಗಬೇಕೆಂದು ಕನಸು ಲತಾಳದಾಗಿತ್ತು. ಲತಾ ಮಂಗೇಶ್ಕರ್ 12 ವರ್ಷದವಳಿದ್ದಾಗ, ಅವರ ತಂದೆ ನಿಧನರಾಗುತ್ತಾರೆ ಮತ್ತು ಚಿಕ್ಕ ವಯಸ್ಸಿನಲ್ಲೇ ಇಡೀ ಕುಟುಂಬದ ಜವಾಬ್ದಾರಿ ಲತಾ ಹೆಗಲ ಮೇಲೆ ಬೀಳುತ್ತದೆ. ಹಣ ಗಳಿಕೆಗಾಗಿ ಲತಾ ಮಂಗೇಶ್ಕರ್ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ. ಅವರಿಗೆ ಮೊದಲ ಬಾರಿಗೆ ಸ್ಟೇಜ್ ಮೇಲೆ ಹಾಡು ಹೇಳಲು ರೂ.25 ಸಂಭಾವನೆ ದೊರೆತಿತ್ತು. ಬಳಿಕ 1942ರಲ್ಲಿ ಲತಾ ಮರಾಠಿ ಚಿತ್ರ 'ಕಿತೀ ಹಸಾಲ್'ಗೆ ಹಾಡು ಹಾಡುತ್ತಾರೆ. ಅದಾದ ಬಳಿಕ ಲತಾ ಗಾಯನವನ್ನೇ ತನ್ನ ವೃತ್ತಿಯನ್ನಾಗಿಸಿಕೊಳ್ಳುತ್ತಾರೆ.


Lata Mangeshkar: ಗಾಯನ ನಿಲ್ಲಿಸಿದ ಭಾರತ ರತ್ನ ಲತಾ ಮಂಗೇಶ್ಕರ್


ಲತಾ ಮದುವೆ ಏಕೆ ಮಾಡಿಕೊಳ್ಳಲಿಲ್ಲ ನಿಮಗೆ ಗೊತ್ತೇ?
ಲತಾ ಮಂಗೇಶ್ಕರ್ ತನ್ನ ಜೀವನಪೂರ್ತಿ ಮದುವೆ ಏಕೆ ಮಾಡಿಕೊಂಡಿಲ್ಲ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಮಾಧ್ಯಮ ವರದಿಗಳ ಪ್ರಕಾರ ಲತಾ ಮಂಗೇಶ್ಕರ್ ತನ್ನ ಚಿಕ್ಕ ವಯಸ್ಸಿನಲ್ಲಿ ಕುಂದನ್ ಲಾಲ್ ಸೆಹಗಲ್ ಅಭಿನಯದ 'ಚಂಡಿದಾಸ್' ಚಿತ್ರ ವಿಕ್ಷೀಸಿದ್ದರು. ಬಳಿಕ ಅವರು ತಾನು ದೊಡ್ಡವಳಾದ ಮೇಲೆ ಕುಂದನ್ ಲಾಲ್ ಸೆಹಗಲ್ ಅವರನ್ನು ವರಿಸುವುದಾಗಿ ಹೇಳುತ್ತಿದ್ದಳು ಎನ್ನಲಾಗುತ್ತದೆ. ಆದರೆ, ಲತಾ ಮಂಗೇಶ್ಕರ್ ಹೇಳುವ ಪ್ರಕಾರ, ಚಿಕ್ಕ ವಯಸ್ಸಿನಲ್ಲಿಯೇ ಇಡೀ ಕುಟುಂಬದ ಜವಾಬ್ದಾರಿ ತಮ್ಮ ಮೇಲೆ ಇದ್ದ ಕಾರಣ, ಮದುವೆಯ ವಿಚಾರ ಮನಸ್ಸಿನಲ್ಲಿ ಬಂದರೂ ಕೂಡ ಅದರ ಮೇಲೆ ಅವರಿಗೆ ಗಮನ ಹರಿಸಲು ಸಾಧ್ಯವಿರಲ್ಲಿಲ್ಲ ಎನ್ನುತ್ತಿದ್ದರು.


ಇದನ್ನೂ ಓದಿ-ಧೋನಿಯ ಈ ಒಂದು ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಲತಾ ಮಂಗೇಶ್ಕರ್


ಶ್ರದ್ಧಾಂಜಲಿ ನೀಡುವ ಕಾರ್ಯ ಮುಂದುವರೆದಿದೆ 
ಗಾನ ಕೋಗಿಲೆಯ ನಿಧನದ ಸುದ್ದಿ ಪ್ರಕಟಗೊಳ್ಳುತ್ತಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಲೋಕಸಭೆಯ ಸಭಾಪತಿ ಓಂ ಬಿರ್ಲಾ ಸೇರಿದಂತೆ ಕೇಂದ್ರ ಮಂತ್ರಿಗಳು ಲತಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಲತಾ ನಿಧನಕ್ಕೆ ಟ್ವೀಟ್ ಮೂಲಕ ಶೋಕ ವ್ಯಕ್ತಪಡಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿ, 'ದೇಶದ ಹೆಮ್ಮೆ ಮತ್ತು ಸಂಗೀತ ಜಗತ್ತಿನ ಶಿರೋಮಣಿ ಸ್ವರ ಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್ ಅವರ ನಿಧನ ದುಃಖ ತಂದಿದೆ. ಅವರ ಪುಣ್ಯ ಆತ್ಮಕ್ಕೆ ನನ್ನ ಹೃತ್ಪೂರ್ವಕ ನಮನ ಮತ್ತು ಶ್ರದ್ದಾಂಜಲಿ.  ಅವರ ಈ ಅಗಲಿಕೆ ದೇಶಕ್ಕೆ (Indian Music) ತುಂಬಲಾರದ ನಷ್ಟ. ಅವರು ಎಲ್ಲಾ ಸಂಗೀತಾಸಕ್ತರ ಸ್ಪೂರ್ತಿಯಾಗಿದ್ದರು' ಎಂದು ಹೇಳಿದ್ದಾರೆ.


ಇದನ್ನೂ ಓದಿ-ಚಿತ್ರಗಳಲ್ಲಿ ನೋಡಿ: 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ ಲೋಕಾರ್ಪಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.