Mangli Shiva Ratri Song : ಖ್ಯಾತ ಗಾಯಕಿ ಸತ್ಯವತಿ ಮಂಗ್ಲಿ ಶಿವರಾತ್ರಿ 2023 ಹಾಡು ವಿವಾದದ ಕೇಂದ್ರ ಬಿಂದುವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಂಗ್ಲಿ ಮಹಾಶಿವರಾತ್ರಿಗೆ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ಈ ಹಾಡನ್ನು ಪ್ರಸಿದ್ಧ ಕಾಳಹಸ್ತಿ ಕಾಲಭೈರವ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೀಗ ನೆಟ್ಟಿಗರು ಛಾಯಾಗ್ರಹಣಕ್ಕೆ ನಿರ್ಬಂಧವಿರುದ ದೇಗುಲದಲ್ಲಿ ಶೂಟಿಂಗ್‌ಗೆ ಹೇಗೆ ಅನುಮತಿ ಸಿಕ್ಕಿತು ಎಂದು ಪ್ರಶ್ನೆ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮಹಾ ಶಿವರಾತ್ರಿ ಪ್ರಯುಕ್ತ ಮಂಗ್ಲಿ ʼಭಂ ಭಂ ಭೋಲೆʼ ಎಂಬ ಹಾಡನ್ನು ಬಿಡುಗಡೆಮಾಡಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಸಖತ್‌ ವೈರಲ್ ಆಗುತ್ತಿದೆ. ಸುದ್ದಲ ಅಶೋಕ್ ತೇಜ್ ಈ ಹಾಡನ್ನು ಬರೆದಿದ್ದಾರೆ. ಈ ಹಾಡಿನಲ್ಲಿ, ಶ್ರೀಕಾಳಹಸ್ತೀಶ್ವರಾಲಯದಲ್ಲಿರುವ ಕಾಲಭೈರವಸ್ವಾಮಿ ವಿಗ್ರಹದಲ್ಲಿ ನೃತ್ಯ ಮಾಡುವ ದೃಶ್ಯಗಳಿವೆ. ಮುಕ್ಕಂಟಿ ದೇವಸ್ಥಾನದಲ್ಲಿಯೂ ಸಹ ಮಂಗ್ಲಿ ನೃತ್ಯವನ್ನು ಮಾಡಿದ್ದಾರೆ. ಆದ್ರೆ, ಚಿತ್ರೀಕರಣಕ್ಕೆ ನಿರ್ಬಂಧವಿರುವ ಈ ಪವಿತ್ರ ದೇಗುಲದಲ್ಲಿ ಮಂಗ್ಲಿ ಹೇಗೆ ಶೂಟಿಂಗ್‌ ಮಾಡಿದ್ರು...? ಅನುಮತಿ ಹೇಗೆ ಸಿಕ್ಕಿತು..? ಅಂತ ನೆಟಿಜನ್ಸ್‌ ಪ್ರಶ್ನೆ ಮಾಡುತ್ತಿದ್ದಾರೆ.


ಇದನ್ನೂ ಓದಿ: ಗಾಯಕ ಸೋನು ನಿಗಮ್‌ ಮೇಲೆ ʼಶಿವಸೇನಾ ಶಾಸಕನ ಪುತ್ರʼನಿಂದ ಹಲ್ಲೆ..! ಇದೇ ಕಾರಣ..


ದಕ್ಷಿಣ ಕೈಲಾಸ ಎಂದು ಕರೆಯಲ್ಪಡುವ ಶ್ರೀಕಾಳಹಸ್ತೀಶ್ವರಾಲಯದಲ್ಲಿ ಈ ಶಿವನ ಹಾಡನ್ನು ಚಿತ್ರಿಕರಿಸಲಾಗಿದೆ. ಎರಡು ದಶಕಗಳಿಂದ ಈ ದೇವಸ್ಥಾನದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಆದರೆ ಮಂಗ್ಲಿ ಈ ಹಾಡನ್ನು ಹೇಗೆ ಚಿತ್ರೀಕರಣ ಮಾಡಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ದೇವಸ್ಥಾನದೊಳಗೆ ಹಾಡನ್ನು ಚಿತ್ರೀಕರಿಸಿ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದಾಗ ಶ್ರೀಕಾಳಹಸ್ತಿಯ ಜನತೆ ಶಾಕ್‌ ಆಗಿದ್ದಾರೆ.


ಸ್ವಾಮಿಯ ಭಕ್ತರು ಏಳೆಯುತ್ತಿದ್ದ ಊಂಜಾಲ ಸೇವಾ ಮಂಟಪದಲ್ಲಿ ತಂಡದ ಜೊತೆ ಮಂಗ್ಲಿ ಡಾನ್ಸ್‌ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು. ವಿಚಿತ್ರ ಅಂದ್ರೆ, ಪ್ರತಿದಿನ ಸಂಜೆ 6 ಗಂಟೆಗೆ ರಾಹುಕೇತು ಪೂಜೆ ಮುಗಿದ ನಂತರ ಮಂಟಪ ಮುಚ್ಚಲಾಗುತ್ತದೆ. ಅದ್ರೆ, ಪ್ರತ್ಯೇಕವಾಗಿ ಮಂಗ್ಲಿ ನೃತ್ಯದ ಚಿತ್ರೀಕರಣಕ್ಕಾಗಿಯೇ ವಿಶೇಷವಾಗಿ ಮಂಟಪವನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.