Rahat Fateh Ali khan : ತಮ್ಮ ಸಹಾಯಕನಿಗೆ ಶೂನಿಂದ ಹೊಡೆದಕ್ಕಾಗಿ ಗಾಯಕ ರಹೇ ಫತೇಹ್ ಅಲಿ ಖಾನ್ ಕ್ಷಮೆ ಕೇಳಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಅಲ್ಲದೆ, ನೆಟ್ಟಿಗರು ಸೇರಿದಂತೆ ಕೆಲವರು ಈ ಕೃತ್ಯವನ್ನು ಖಂಡಿಸಿದ್ದರು. ಇದೀಗ ತಮ್ಮ ತಪ್ಪಿಗಾಗಿ ಸಿಂಗರ್‌ ಕ್ಷಮೆಯಾಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಲೆಜೆಂಡರಿ ಕವ್ವಾಲಿ ಗಾಯಕ ಫತೇಹ್ ಅಲಿ ಖಾನ್ ಅವರ ಮೊಮ್ಮಗ, ಖ್ಯಾತ ಪಾಕಿಸ್ತಾನಿ ಗಾಯಕ ರಾಹತ್ ಫತೇ ಅಲಿ ಖಾನ್ ಹಿಂದಿಯಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ರಾಹತ್ ಹಿಂದಿ ಹಾಡುಗಳಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಕಳೆದ ಕೆಲವು ದಿನಗಳ ಹಿಂದೆ ರಾಹತ್ ತನ್ನ ಸಹಾಯಕರೊಬ್ಬರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದ ವಿಡಿಯೋ ಒಂದು ವೈರಲ್‌ ಆಗಿತ್ತು. 


ಇದನ್ನೂ ಓದಿ:ಪೂನಂ ಪಾಂಡೆ ಸೇರಿದಂತೆ ಅತೀ ಚಿಕ್ಕ ವಯಸ್ಸಿನಲ್ಲೇ ಅಗಲಿದ ನಟಿಯರು ಇವರೇ.!


ರಾಹತ್ ತನ್ನ ಸಹಾಯಕರಲ್ಲಿ ಒಬ್ಬನಾದ ನವೀದ್‌ನನ್ನು ತಮ್ಮ ಶೂನಿಂದ ಹೊಡೆದಿದ್ದರು. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆದ ಬೆನ್ನಲ್ಲೆ ಹಲವರು ಖಂಡಿಸಿದ್ದರು. ಸಹಾಯಕನೊಂದಿಗೆ ಕಠೋರವಾಗಿ ವರ್ತಿಸಿದ ನಂತರ ರಾಹತ್ ಫತೇಹ್ ಅಲಿ ಖಾನ್ ಅವರನ್ನು ಕಿಂಗ್ ಚಾರ್ಲ್ಸ್ನ ಬ್ರಿಟಿಷ್ ಏಷ್ಯಾ ಫೌಂಡೇಶನ್ನ ರಾಯಭಾರಿಯಾಗಿ ವಜಾಗೊಳಿಸಲಾಯಿತು. ಅಲ್ಲದೆ, ಫೌಂಡೇಶನ್ ಆಡಳಿತ ಮಂಡಳಿ ರಾಹತ್ ಫತೇ ಅಲಿ ಖಾನ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ತಿಳಿಸಿತ್ತು. 


ಈ ಹಿನ್ನೆಲೆಯಲ್ಲಿ ರಾಹತ್ ಫತೇಹ್ ಅಲಿ ಖಾನ್ ಘಟನೆ ಕುರಿತು ಕ್ಷಮೆ ಯಾಚಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ನನ್ನ ಕೃತ್ಯಗಳಿಗಾಗಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ದೇವರಲ್ಲಿ ಕ್ಷಮೆಯಾಚಿಸುತ್ತೇನೆ. ಒಬ್ಬ ಮನುಷ್ಯನಾಗಿ ಮತ್ತು ಕಲಾವಿದನಾಗಿ ನಾನು ಈ ರೀತಿ ಮಾಡಬಾರದಿತ್ತು ಅಂತ ಹೇಳಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.