ಮುಂಬೈ: ಶ್ರೇಯಾ ಘೋಷಾಲ್ ತನ್ನ ಬಾಲ್ಯದ ಸ್ನೇಹಿತ ಮತ್ತು ಎಂಜಿನಿಯರ್ ಶಿಲಾದಿತ್ಯ ಮುಖೋಪಾಧ್ಯಾಯ ಅವರನ್ನು ಸುಮಾರು 10 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2015 ರಲ್ಲಿ ವಿವಾಹವಾದರು. ಸಂದರ್ಶನವೊಂದರಲ್ಲಿ ಶ್ರೇಯಾ ಘೋಷಾಲ್ ತಮ್ಮ ಲವ್‌ ಲೈಫ್‌ ಬಗ್ಗೆ ಮಾತನಾಡಿದ್ದರು. ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಶಿಲಾದಿತ್ಯ ಒಟ್ಟಿಗೆ ಗೋವಾಕ್ಕೆ ಹೋಗಿದ್ದರಂತೆ. ಆಗ ಶಿಲಾದಿತ್ಯ ಪ್ರಪೋಸ್ ಮಾಡಿದರಂತೆ.  


COMMERCIAL BREAK
SCROLL TO CONTINUE READING

ರಿಂಗ್ ಬಾಕ್ಸ್ ಅನ್ನು ತೆಗೆದು ಉಂಗುರ ಮುಂದಿಟ್ಟು ರೊಮ್ಯಾಂಟಿಕ್‌ ಪ್ರಪೋಸ್‌ ಮಾಡಿದ್ದರಂತೆ ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ. ಶ್ರೇಯಾ ಘೋಷಾಲ್ ಅವರ ಪತಿ ಶಿಲಾದಿತ್ಯ ಮುಖ್ಯೋಪಾಧ್ಯಾಯ. ಶಿಲಾದಿತ್ಯ ಅವರು ಪ್ರಮುಖ ಕಾಲರ್ ಐಡಿ ಮತ್ತು ಸ್ಪ್ಯಾಮ್-ನಿರ್ಬಂಧಿಸುವ ಅಪ್ಲಿಕೇಶನ್ ಟ್ರೂಕಾಲರ್‌ನಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಾರೆ. ಏಪ್ರಿಲ್ 2022 ರಿಂದ ಟ್ರೂಕಾಲರ್‌ ಗ್ಲೋಬಲ್ ಹೆಡ್ ಆಗಿ ಶಿಲಾದಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. 


ಇದನ್ನೂ ಓದಿ: ದರ್ಶನ್ ಪತ್ನಿ ಇರುವ ಅಪಾರ್ಟ್ಮೆಂಟ್ ನಲ್ಲಿ ದಿನಕ್ಕೊಂದು ಸಮಸ್ಯೆ ಎದುರಾಗುತ್ತೆ : ಪ್ರಶಾಂತ ಸಂಬರಗಿ 


ವ್ಯಾಪಾರ ಅಭಿವೃದ್ಧಿ, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್‌ನಲ್ಲಿ ಶಿಲಾದಿತ್ಯ ಮುಖ್ಯೋಪಾಧ್ಯಾಯ ಸಾಕಷ್ಟು ಪರಿಣತಿಯನ್ನು ಹೊಂದಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಬ್ಯಾಚುಲರ್ ಪದವಿ ಪಡೆದ ಶಿಲಾದಿತ್ಯ ಟ್ರೂಕಾಲರ್‌ಗಿಂತ ಮೊದಲು ಕ್ಯಾಲಿಫೋರ್ನಿಯಾ ಮೂಲದ ಪ್ರಮುಖ ಸಾಸ್ ಕಂಪನಿ ಕ್ಲೆವರ್‌ಟ್ಯಾಪ್‌ನಲ್ಲಿ ಹಿರಿಯ ಹುದ್ದೆಯನ್ನು ಅಲಂಕರಿಸಿದ್ದರು. 


ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಮುಖ್ಯೋಪಾಧ್ಯಾಯ ಇಬ್ಬರು ಬಾಲ್ಯದ ಸ್ನೇಹಿತರಾಗಿದ್ದರು. ಬಹುಕಾಲ ಪ್ರೀತಿಸಿದ ಈ ಜೋಡಿ ಈಗ ಜೀವನ ಸಂಗಾತಿಗಳಾಗಿದ್ದಾರೆ. 9 ವರ್ಷ ಡೇಟಿಂಗ್ ಮಾಡಿ, 2015 ರಲ್ಲಿ ವಿವಾಹವಾದರು. 


ಇದನ್ನೂ ಓದಿ: ಗ್ರಾಮೀಣ ಸೊಗಡಿನ ಕಮರ್ಷಿಯಲ್ ಥ್ರಿಲ್ಲರ್ ಚಿತ್ರ ‘ಸಂಭವಾಮಿ ಯುಗೇ ಯುಗೇ’: ರಿಲೀಸ್ ಡೇಟ್ ಫಿಕ್ಸ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.