Attack on Sonu Nigam : ಸೋಮವಾರ ರಾತ್ರಿ ಮುಂಬೈನ ಚೆಂಬೂರ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಶಿವಸೇನಾ ಉದ್ಧವ್ ಠಾಕ್ರೆ ಬಣದ ಶಾಸಕರೊಬ್ಬರ ಪುತ್ರ ಖ್ಯಾತ ಗಾಯಕ ಸೋನು ನಿಗಮ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಈ ಕುರಿತು ಸೋನು ದೂರು ಕೂಡಾ ನೀಡಿದ್ದಾರೆ. ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷರಾದ ಸೋನು ನಿಗಮ್ ಎಲ್ಲವೂ ಸರಿಯಾಗಿದೆ ಅಂತ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಿನ್ನೆ ಚೆಂಬೂರ್ ಜಿಮ್ಖಾನಾದಲ್ಲಿ ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೋನು ನಿಗಮ್‌ ಸಹ ಭಾಗವಹಿಸಿ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡಿದ್ದರು. ತಮ್ಮ ಕಾರ್ಯಕ್ರಮ ಪೂರ್ಣಗೊಳಿಸಿ ವೇದಿಕೆಯ ಮೇಲಿಂದ ಕೆಳಗೆ ಇಳಿಯುವ ವೇಳೆ, ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರ ಪುತ್ರ ಸ್ವಪ್ನಿಲ್ ಫಾಟರ್‌ಪೇಕರ್ ಸೆಲ್ಫಿಗಾಗಿ ಬಂದು ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಈ ಇಬ್ಬರಿಗೆ ಅರ್ಪಣೆ ಎಂದ ರಿಷಬ್ ಶೆಟ್ಟಿ


ನಿಗಮ್ ನೀಡಿದ ದೂರಿನ ಆಧಾರದ ಮೇಲೆ, ಚೆಂಬೂರ್ ಪೊಲೀಸರು ಸ್ಥಳೀಯ ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರ ಪುತ್ರ ಸ್ವಪ್ನಿಲ್ ಫಾಟರ್‌ಪೇಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 (ತಪ್ಪು ಸಂಯಮ) ಮತ್ತು 337 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.