Singer Suchitra Actor Karthik Kumar : ಖ್ಯಾತ ಗಾಯಕಿ ಸುಚಿತ್ರಾ ಇತ್ತೀಚೆಗೆ ತಮ್ಮ ಶಾಕಿಂಗ್‌ ಹೇಳಿಕೆಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. ಸುಚಿ ಲೀಕ್ ಆದ ನಂತರ ಸೈಲೆಂಟ್ ಆಗಿದ್ದ ಸುಚಿತ್ರಾ ಕೆಲ ದಿನಗಳ ಹಿಂದೆ ಮತ್ತೆ ಆ್ಯಕ್ಟಿವ್ ಆದರು. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಈ ಹಿಂದೆಯೂ ಸುಚಿಲೀಕ್ಸ್ ಹೆಸರಿನಲ್ಲಿ ಚಿತ್ರರಂಗದ ನಟರ ವೈಯಕ್ತಿಕ ವಿಷಯಗಳ ಬಗ್ಗೆ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದರು. ಇತ್ತೀಚೆಗೆ, ಕೆಲವು ದಿನಗಳ ಹಿಂದೆ, ಅವರು ತಮ್ಮ ಮಾಜಿ ಪತಿ, ನಟ ಮತ್ತು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕಾರ್ತಿಕ್ ಕುಮಾರ್ ಜೊತೆಗೆ ಅನೇಕ ಸ್ಟಾರ್‌ ನಟರ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ಅಲ್ಲದೆ, ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ಕಾರ್ತಿಕ್ ಸುಚಿತ್ರಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 


ಇದನ್ನೂ ಓದಿ:ಸಹೋದರಿಯ ಪತಿಯೊಂದಿಗೆ ರೊಮ್ಯಾನ್ಸ್..‌ ರಾಷ್ಟ್ರ ಪ್ರಶಸ್ತಿ ವಿಜೇತೆ.. ಈ ಖ್ಯಾತ ನಟಿಯ ಬಾಳಲ್ಲಿ ನಡೆದಿತ್ತು ʼಆʼ ಘೋರ ದುರಂತ!


ಇದೀಗ ಗಾಯಕಿ ಸುಚಿತ್ರಾ ತನ್ನ ಮಾಜಿ ಪತಿಗೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅವರನ್ನು ಗೇ ಎಂದು ಕರೆದಿದ್ದಕ್ಕೆ ಕ್ಷಮಿಸಿ.. ಅವರ ವೃತ್ತಿಯನ್ನು ಹಾಳು ಮಾಡುವ ಉದ್ದೇಶ ನನಗಿಲ್ಲ. ಅದಕ್ಕೇ ನಾನು ಕ್ಷಮೆ ಕೇಳುತ್ತಿದ್ದೇನೆ.. ಕಾರ್ತಿಕ್ ದೂರಿನಿಂದಾಗಿ ಪೊಲೀಸರಿಂದ ನನಗೆ ಆಗಾಗ ಕರೆಗಳು ಬರುತ್ತಿವೆ. ಹೀಗಾಗಿ ತನ್ನ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 


ಅಲ್ಲದೆ, ತನ್ನ ಮಾಜಿ ಪತಿ ಕಾರ್ತಿಕ್‌ಗೆ ಕ್ಷಮೆಯಾಚಿಸಿದ ವಿಡಿಯೋ ಇಮೇಲ್ ಮಾಡುವುದಾಗಿ ಹೇಳಿದ್ದಾರೆ ಸುಚಿತ್ರಾ. ಅಲ್ಲದೆ, ಇನ್ನು ಮುಂದೆ ಆತನ ವೃತ್ತಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದಿದ್ದಾರೆ, ಎಲ್ಲವನ್ನು ಬಿಟ್ಟು ಮಾನಸಿಕವಾಗಿ ಶಾಂತವಾಗಿರಲು ಬಯಸುತ್ತೇನೆ ಎಂದಿದ್ದು, ಸದ್ಯ ಸುಚಿತ್ರಾ ಕಾಮೆಂಟ್‌ಗಳು ವೈರಲ್ ಆಗುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.