Skanda movie : ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಸ್ಕಂದ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದು, ಚಿತ್ರತಂಡ ಸಿನಿಮಾ ಪ್ರಮೋಷನ್ ಶುರು ಮಾಡಿದೆ. ನಟ ರಾಮ್ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಅವರ ಬಯೋಪಿಕ್ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮಾಸ್ ಡೈರೆಕ್ಟರ್ ಬೋಯಪಾಟಿ ಶ್ರೀನು-ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಕಾಂಬಿನೇಷನ್ ಚಿತ್ರ ಸ್ಕಂದ. ಈ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ ಮತ್ತು ಸಾಯಿ ಮಂಜ್ರೇಕರ್ ನಾಯಕಿಯರಾಗಿ ನಟಿಸಿದ್ದಾರೆ. ಹೈ-ವೋಲ್ಟೇಜ್ ಆಕ್ಷನ್ ಮತ್ತು ಮಾಸ್ ಎಂಟರ್‌ಟೈನರ್ ಚಿತ್ರ ಇದೆ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


ಇದನ್ನೂ ಓದಿ:  ‘ಭಕ್ತ ಕಣ್ಣಪ್ಪ’ ಚಿತ್ರದಿಂದ ಹೊರ ನಡೆದ ಖ್ಯಾತ ಬಾಲಿವುಡ್‌ ನಟಿ ನೂಪುರ್ ಸನೋನ್..! ಕಾರಣವೇನು?


ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣದಲಿದೆ. 'ಅಖಂಡ'ದಂತಹ ಬಹುದೊಡ್ಡ ಬ್ಲಾಕ್ ಬಸ್ಟರ್ ಹಿಟ್ ನಂತರ ಬೋಯಪಾಟಿ ನಿರ್ದೇಶನದ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು, ಟೀಸರ್ ಮತ್ತು ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. 


ಇತ್ತೀಚಿಗೆ ಪ್ರಸಿದ್ಧ ಧ್ವನಿ ಕಲಾವಿದ ಸಂಕೇತ್ ಮ್ಹಾತ್ರೆ ಅವರು ರಾಮ್ ಅವರನ್ನು ಸಂದರ್ಶನ ನಡೆಸಿದರು. ಈ ವೇಳೆ ಸಂಕೇತ್‌ "ನೀವು ವಿರಾಟ್ ಕೊಹ್ಲಿಯಂತೆ ಕಾಣುತ್ತೀರಿ ಎಂದು ಅನೇಕ ನೆಟಿಜನ್‌ಗಳು ಹೇಳುತ್ತಾರೆ, ಅವರ ಜೀವನಚರಿತ್ರೆಯಲ್ಲಿ ನಟಿಸಲು ನಿಮಗೆ ಅವಕಾಶ ಸಿಕ್ಕರೆ ಮಾಡುತ್ತೀರಾ?" ಎಂದು ಪ್ರಶ್ನೆ ಮಾಡಿದರು. ಇದಕ್ಕೆ ರಾಮ್‌ 'ಕೊಹ್ಲಿ ಬಯೋಪಿಕ್‌ನಲ್ಲಿ ಅವಕಾಶ ಸಿಕ್ಕರೆ ಖಂಡಿತಾ ಮಾಡುತ್ತೇನೆ. ಅದಕ್ಕಾಗಿ ಕ್ರಿಕೆಟ್ ಕೂಡ ಕಲಿಯುತ್ತೇನೆ'' ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.