Slippers throw on Darshan case : ಇದೇ ತಿಂಗಳ 18 ರಂದು ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಲಾಗಿತ್ತು. ಈ ಘಟನೆ ಸ್ಯಾಂಡಲ್ ವುಡ್ ನಟ, ನಟಿಯರ ಕೋಪಕ್ಕೂ ಗುರಿಯಾಗಿತ್ತು. ಅಲ್ಲದೆ ದಚ್ಚು ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು. ಇದೀಗ ಘಟನೆಗೆ ಸಂಬಂಧಿಸಿ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ನಟ ದರ್ಶನ್ ಅಭಿನಯದ ಕ್ರಾಂತಿ ಚಲನಚಿತ್ರದ ಎರಡನೇಯ  ಹಾಡಿನ ಬಿಡುಗಡೆ ಕಾರ್ಯಕ್ರಮ ಹೊಸಪೇಟೆ ನಗರದಲ್ಲಿ ನಡೆಯಿತು. ಅಂದು ಪುನೀತ್ ರಾಜಕುಮಾರ್ ಅಭಿಮಾನಿಗಳು ದರ್ಶನ ಕ್ರಾಂತಿ ಸಿನಿಮಾದ ಪೋಸ್ಟರ್ ಹರಿದ ಘಟನೆಯೂ ಸಹ ನಡೆದಿತ್ತು. ಅಲ್ಲದೆ, ವೇದಿಕೆಯ ಮೇಲಿದ್ದ ದರ್ಶನ್ ಮೇಲೆ ಯಾರೋ ಕಿಡಿಗೇಡಿಗಳು ಚಪ್ಪಲಿ ಎಸೆದು ಅವಮಾನ ಮಾಡಿದ್ದರು. ಈ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. 


ಇದನ್ನೂ ಓದಿ : Challenging Star Darshan : ಉರ್ಸೊಣ.. ಒಂದು ಹೆಜ್ಜೆ ಮುಂದೆ ಹೋಗಿ ಜಾಸ್ತಿ ಉರ್ಸೊಣ : ವಿರೋಧಿಗಳಿಗೆ DBoss ಟಾಂಗ್


ಘಟನೆಯ ನಂತರ ಕಾರ್ಯಕ್ರಮದ ಆಯೋಜಕರು ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರನ್ನು ಇಂದು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಖಾಕಿ ಬಲೆ ಬೀಸಿದೆ.


ವಿಜಯನಗರ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಹೊಸಪೇಟೆ  ನೇತೃತ್ವದಲ್ಲಿ, ಬಾಳನಗೌಡ ವಿಜಯನಗರ ಜಿಲ್ಲೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ, ಮುನಿರತ್ನಂ ಪಿ.ಎಸ್‌.ಐ ಹಾಗೂ ಸಿಬ್ಬಂದಿಯವರಾದ ರಾಘವೇಂದ್ರ, ಪ್ರಕಾಶ್ ಕಳಕರೆಡ್ಡಿ, ಶ್ರೀನಿವಾಸ, ಜಾವೇದ್ ಹಾಗೂ ಪರಶುರಾಮ ನಾಯ್ಕ ರವರ ತಂಡವು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ : ಪ್ರಭುದೇವ ಅಭಿನಯದ "wolf" ಚಿತ್ರದ ಚಿತ್ರೀಕರಣ ಮುಕ್ತಾಯ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.