Smriti Irani : ಸ್ಮೃತಿ ಇರಾನಿ 25 ವರ್ಷದ ಹಿಂದೆ ಹೇಗಿದ್ದರು ನೋಡಿ.. ಮಿಸ್ ಇಂಡಿಯಾ ಫೈನಲ್ ವಿಡಿಯೋ ವೈರಲ್
Smriti Irani Viral Video : 1998 ರಲ್ಲಿ ಮಾಜಿ ನಟಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವಿಡಿಯೋ ಆ ಕಾಲದ್ದು. ವಿಡಿಯೋದಲ್ಲಿ, ಸ್ಮೃತಿ ಇರಾನಿ ರ‍್ಯಾಂಪ್ ವಾಕ್ ಮಾಡುತ್ತಿರುವುದನ್ನು ಕಾಣಬಹುದು.
Smriti Irani Viral Video : ಮಾಜಿ ನಟಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ 47 ವರ್ಷ ವಯಸ್ಸು. ಇದೀಗ ಸ್ಮೃತಿ ಇರಾನಿ ಅವರ 25 ವರ್ಷದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. 1998 ರಲ್ಲಿ ಅವರು ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವಿಡಿಯೋ ಆ ಕಾಲದ್ದು. ವಿಡಿಯೋದಲ್ಲಿ, ಸ್ಮೃತಿ ಇರಾನಿ ರ‍್ಯಾಂಪ್ ವಾಕ್ ಮಾಡುತ್ತಿರುವುದನ್ನು ಕಾಣಬಹುದು. ಆದರೆ, ಆ ಸಮಯದಲ್ಲಿ ಸ್ಮೃತಿಗೆ ಮಿಸ್ ಇಂಡಿಯಾ ಆಗಲು ಸಾಧ್ಯವಾಗಲಿಲ್ಲ. ಈ ವೈರಲ್ ವಿಡಿಯೋಗೆ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ.
ಇದನ್ನೂ ಓದಿ : ವೀಕೆಂಡ್ ವಿಥ್ ರಮೇಶ್ ಸೀಸನ್ 5 ಮೊದಲ ಗೆಸ್ಟ್ ಮೋಹಕ ತಾರೆ ರಮ್ಯಾ.. ಫ್ಯಾನ್ಸ್ ಫುಲ್ ಹ್ಯಾಪಿ!
ಮಾಧ್ಯಮ ವರದಿಗಳ ಪ್ರಕಾರ, ಸ್ಮೃತಿ ಇರಾನಿ ತನ್ನ ಕುಟುಂಬಕ್ಕೆ ಸಹಾಯ ಮಾಡಲು ವರ್ಷಗಳ ಹಿಂದೆ ಮೆಕ್‌ಡೊನಾಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದರೊಂದಿಗೆ ಕೆಲವು ಸೌಂದರ್ಯ ಉತ್ಪನ್ನಗಳ ಮಾರ್ಕೆಟಿಂಗ್ ಕೂಡ ಮಾಡುತ್ತಿದ್ದರು. ಸ್ನೇಹಿತೆಯೊಬ್ಬರ ಸಲಹೆ ಮೇರೆಗೆ ಸ್ಮೃತಿ ಮುಂಬೈಗೆ ಬಂದು ಮಾಡೆಲಿಂಗ್‌ನಲ್ಲಿ ಪ್ರಯತ್ನಿಸಲು ನಿರ್ಧರಿಸಿದರು. ಮುಂಬೈಗೆ ಬಂದ ನಂತರ, ಅವರು ಮಿಸ್ ಇಂಡಿಯಾ ಸ್ಪರ್ಧೆಗೆ ಆಡಿಷನ್ ಮಾಡಿದರು, ಅದರಲ್ಲಿ ಅವರು ಆಯ್ಕೆಯಾದರು. ಆದರೆ, ಸ್ಮೃತಿಯ ತಂದೆಗೆ ಮಗಳು ಮಿಸ್ ಇಂಡಿಯಾದಲ್ಲಿ ಭಾಗವಹಿಸುವುದು ಇಷ್ಟವಿರಲಿಲ್ಲ. ಆದರೆ ಅವಳ ತಾಯಿ ಅವಳನ್ನು ಬೆಂಬಲಿಸಿದರು ಮತ್ತು ಮಿಸ್ ಇಂಡಿಯಾದಲ್ಲಿ ಭಾಗವಹಿಸಲು ಸ್ಮೃತಿಗೆ ಸ್ವಲ್ಪ ಹಣವನ್ನು ಕಳುಹಿಸಿದರು. ಈ ಸ್ಪರ್ಧೆಯಲ್ಲಿ, ಸ್ಮೃತಿ ಇರಾನಿ ಫೈನಲ್‌ಗೆ ತಲುಪಿದರು ಆದರೆ ಟಾಪ್ 8 ರಲ್ಲಿ ಸ್ಥಾನಪಡೆದರು.
ಆದರೆ, ಇದಾದ ಬಳಿಕವೂ ಸ್ಮೃತಿ ಇರಾನಿ ಪಟ್ಟು ಬಿಡಲಿಲ್ಲ. ಫ್ಲೈಟ್ ಅಟೆಂಡೆಂಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಅಲ್ಲಿಯೂ ತಿರಸ್ಕರಿಸಲ್ಪಟ್ಟರು. ಮಾಡೆಲಿಂಗ್‌ನಲ್ಲಿಯೂ ಆಕೆ ಹಲವು ಬಾರಿ ನಿರಾಕರಣೆ ಎದುರಿಸಿದ್ದರು. 2000 ರಲ್ಲಿ ಏಕ್ತಾ ಕಪೂರ್ ಅವರ ಟಿವಿ ಶೋ 'ಕ್ಯೂಕಿ ಸಾಸ್ ಭಿ ಕಭಿ ಬಹು ಥಿ'ಗೆ ಸ್ಮೃತಿ ಇರಾನಿ ಸಹಿ ಹಾಕಿದಾಗ ಅವರ ಅದೃಷ್ಟ ತಿರುಗಿತು. ಈ ಶೋನಲ್ಲಿ ತುಳಸಿ ಪಾತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದ್ದು ಇಂದಿಗೂ ತುಳಸಿ ಎಂಬ ಹೆಸರಿನಿಂದಲೇ ಅನೇಕರಿಗೆ ಪರಿಚಿತರು. ಸ್ಮೃತಿ ಗ್ಲಾಮರ್ ಲೋಕದಿಂದ ದೂರವಾಗಿ ವರ್ಷಗಳೇ ಕಳೆದಿವೆ. ಇಂದು ಯಶಸ್ವಿ ರಾಜಕಾರಣಿಯೂ ಆಗಿದ್ದಾರೆ.
ಇದನ್ನೂ ಓದಿ : 'ಪೆಂಟಗನ್' ಸಿನಿಮಾ ಟ್ರೀಲರ್ ಗೆ ರಿಷಬ್ ಶೆಟ್ಟಿ ಮೆಚ್ಚುಗೆ...!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.