Sobhita Dhulipala : ಬಹಳ ದಿನಗಳಿಂದ ನಟಿ ಶೋಭಿತಾ ಧೂಳಿಪಾಲ ಹಾಗೂ ತೆಲುಗು ನಟ ನಾಗ ಚೈತನ್ಯ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದೆ. ಅಲ್ಲದೆ, ಇವರಿಬ್ಬರ ಫೋಟೋಗಳು ಸಹ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೆಟ್‌ ಮಾಡಿದ್ದವು. ಇದೀಗ ಈ ವಿಚಾರ ಕುರಿತು ಶೋಭಿತಾ ನೇರವಾಗಿ ಮಾತನಾಡಿದ್ದು, ನಾನು ಯಾವುದೇ ತಪ್ಪು ಮಾಡುತ್ತಿಲ್ಲವಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಸಧ್ಯ ಶೋಭಿತಾ ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಫಿಲ್ಮ್‌ಬಿಬೀಟ್‌ ವರದಿ ಪ್ರಕಾರ ಕಾರ್ಯಕ್ರಮವೊಂದರಲ್ಲಿ ಶೋಬಿತಾ ನಾಗ ಚೈತನ್ಯ ಅವರೊಂದಿಗೆ ನಡೆಯುತ್ತಿರುವ ಡೇಟಿಂಗ್ ವದಂತಿಗಳ ಬಗ್ಗೆ ಮಾತನಾಡಿದರು ಎಂದು ಹೇಳಲಾಗಿದೆ. ಈ ವೇಳೆ ನಟಿ, ಜ್ಞಾನವಿಲ್ಲದೆ ಮಾತನಾಡುವ ಜನರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಯಾವುದೇ ತಪ್ಪು ಮಾಡದ್ದಿದ್ದಾಗ, ಅದು ನನಗೆ ಸಂಬಂಧಿಸದ ವ್ಯವಹಾರ, ಈ ವಿಷಯವನ್ನು ಸ್ಪಷ್ಟಪಡಿಸುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ನೀವು ಮುಸ್ಲಿಂ ಆಗಿರದೆ ಹಿಂದೂ ಆಗಿರುತ್ತಿದ್ದರೆ ಎನ್ನುವ ಪ್ರಶ್ನೆಗೆ ಶಾರುಖ್ ಖಾನ್ ನೀಡಿದ ಉತ್ತರ ಹೇಗಿತ್ತು ನೋಡಿ !


ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಚೈತನ್ಯ ಮತ್ತು ಶೋಭಿತಾ ಒಟ್ಟಿಗೆ ಇರುವ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಈ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿತ್ತು. ಅಲ್ಲದೆ ಲಂಡನ್‌ನಲ್ಲಿ ಇಬ್ಬರು ಒಟ್ಟಿಗೆ ಊಟಕ್ಕೆ ಹೋಗುತ್ತಿದ್ದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಶೋಭಿತಾ ಸಮಂತಾ ಅಭಿಮಾನಿಗಳು ʼಮನೆ ಮುರಿಕಿʼ ಅಂತ ಕೆಂಡ ಕಾರಿದ್ದರು.


ಸಿನಿಮಾ ವಿಚಾರವಾಗಿ ಹೇಳುವುದಾದ್ರೆ, ಶೋಭಿತಾ ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ಗಳಿಸಿದೆ. ಅಲ್ಲದೆ, ಅನಿಲ್ ಕಪೂರ್, ಆದಿತ್ಯ ರಾಯ್‌ ಕಪೂರ್‌ ನಟನೆಯ ದಿ ನೈಟ್ ಮ್ಯಾನೇಜರ್ ಭಾಗ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ