Sonakshi Sinha and Zaheer Iqbar marriage : ಬಾಲಿವುಡ್‌ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಮುದ್ದು ಮಗಳು ಸೋನಾಕ್ಷಿ ಸಿನ್ಹಾ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರು ನಟ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.. ಅಲ್ಲದೆ, ಜೂನ್ 23, 2024 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಅಂತ ಹೇಳಾಗುತ್ತಿದೆ.


COMMERCIAL BREAK
SCROLL TO CONTINUE READING

ಹಾಗಾದರೆ ಸೋನಾಕ್ಷಿ ಸಿನ್ಹಾ ಭಾವಿ ಪತಿ ಜಹೀರ್ ಇಕ್ಬಾಲ್ ಯಾರು, ಅವರು ಏನು ಮಾಡುತ್ತಾರೆ, ಸಲ್ಮಾನ್ ಖಾನ್ ಅವರೊಂದಿಗಿನ ಸಂಪರ್ಕವೇನು ಮತ್ತು ಅವರ ನಿವ್ವಳ ಮೌಲ್ಯ ಎಷ್ಟು ಎಂಬುವುದರ ಕುರಿತಾಗಿ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ..


ಇದನ್ನೂ ಓದಿ:ನಯನತಾರಾ ಅಲ್ಲ.. 15 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿದ್ದ ಈಕೆ ಇಂದು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್!


ಜಹೀರ್ ಇಕ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ತಮ್ಮ ಸಂಬಂಧವನ್ನು ಅಭಿಮಾನಿಗಳಿಂದ ಮುಚ್ಚಿಟ್ಟ ಜೋಡಿ. ಆದರೆ 2022 ರಲ್ಲಿ, ಇಬ್ಬರೂ ತಮ್ಮ ರಿಲೆಷನ್‌ಶಿಪ್‌ ಅನ್ನು ಪ್ರಪಂಚದ ಮುಂದಿಟ್ಟಿದ್ದಾರೆ. ಅಲ್ಲದೆ, ಜಹೀರ್ ನಾನು ನಿನ್ನನ್ನು ಪ್ರೀತಿಸುತ್ತಿದ್ದೇವೆ ಅಂತ ನಟಿಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. 


ಜಹೀರ್ ಇಕ್ಬಾಲ್ ಮತ್ತು ಸಲ್ಮಾನ್ ಖಾನ್ ಹೇಗೆ ಸ್ನೇಹಿತರು. ಜಹೀರ್ ಇಕ್ಬಾಲ್ ಅವರ ತಂದೆ ಹೆಸರು ಇಕ್ಬಾಲ್ ರತ್ನಾಸಿ, ಇವರು ಖ್ಯಾತ ಆಭರಣ ವ್ಯಾಪಾರಿ. ಸಲ್ಮಾನ್ ಖಾನ್ ಅವರೊಂದಿಗೆ ಬಹಳ ಹಳೆಯ ಸ್ನೇಹವನ್ನು ಹೊಂದಿದ್ದಾರೆ. ಈಗಾಗಿ ಸಲ್ಲುಗೆ ಜಹೀರ್‌ ತುಂಬಾ ಕ್ಲೋಸ್‌ ಆಗಿದ್ದಾರೆ..


ಇದನ್ನೂ ಓದಿ:ವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾ


ಈ ವಿಷಯವನ್ನು ಸ್ವತಃ ಸಲ್ಮಾನ್ ಖಾನ್ ಹೇಳಿದ್ದು 2018ರಲ್ಲಿ. ಜಹೀರ್ ಇಕ್ಬಾಲ್ ಹಾಗೂ ಆತನ ತಂದೆ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ಈ ಹಿಂದೆ ಜಹೀರ್ ತಂದೆಯಿಂದ 2011 ರೂಪಾಯಿ ಸಾಲ ಪಡೆದಿರುವುದಾಗಿ ಸಲ್ಲು ತಿಳಿಸಿದ್ದರು.


ಸೋನಾಕ್ಷಿ ಸಿನ್ಹಾ ಅವರಂತೆ ಜಹೀರ್ ಇಕ್ಬಾಲ್ ಕೂಡ ಸಲ್ಮಾನ್ ಖಾನ್ ಅವರಿಂದ ಲಾಂಚ್ ಆಗಿದ್ದರು. 2019 ರಲ್ಲಿ, ಜಹೀರ್ ʼನೋಟ್‌ಬುಕ್ʼ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದು ಹಾಲಿವುಡ್ ಚಲನಚಿತ್ರ ಟೀಚರ್ಸ್ ಡೈರಿಯ ರಿಮೇಕ್‌ ಆಗಿದೆ. ಈ ಚಿತ್ರವನ್ನು ಸಲ್ಮಾನ್ ಖಾನ್ ನಿರ್ಮಿಸಿದ್ದಾರೆ, ಆದರೆ, ಈ ಚಿತ್ರ ಫ್ಲಾಪ್ ಆಗಿತ್ತು. 


ಇದನ್ನೂ ಓದಿ:ಅಕ್ಷಯ್‌ ಕುಮಾರ್‌ ಅಲ್ಲ.. ಈ ನಟನಿಗಾಗಿ ಪ್ರಾಣ ಕೊಡಲೂ ಸಿದ್ಧಳಂತೆ ಸ್ಟಾರ್‌ ಬ್ಯೂಟಿ ರವೀನಾ ಟಂಡನ್!


ಜಹೀರ್ ಇಕ್ಬಾಲ್ ಅವರ ಆಸ್ತಿ 2 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಕುಟುಂಬ ವ್ಯವಹಾರದ ಗಳಿಕೆಯನ್ನು ಸೇರಿಸಲಾಗಿಲ್ಲ. ನಟನೆಯ ಹೊರತಾಗಿ, ಅವರು ಕುಟುಂಬ ವ್ಯವಹಾರ ಮತ್ತು ಕೆಲವೊಂದಿಷ್ಟು ಬ್ರಾಂಡ್ ವಸ್ತುಗಳ ಪ್ರಚಾರದಿಂದ ಹಣ ಗಳಿಸುತ್ತಾರೆ ಎನ್ನಲಾಗಿದೆ.


ಮಾಧ್ಯಮ ವರದಿಗಳ ಪ್ರಕಾರ, ಸೋನಾಕ್ಷಿ ಸಿನ್ಹಾ ಅವರ ನಿವ್ವಳ ಮೌಲ್ಯ 102 ಕೋಟಿ ರೂ. ಇದು ಅವರ ಭಾವಿ ಪತಿಗಿಂತ 4900% ಹೆಚ್ಚು. ಆದರೆ, ಸೋನಾಕ್ಷಿ ಮತ್ತು ಜಹೀರ್ ಜೋಡಿ ನಡುವೆ ಹಣ ಅಥವಾ ಧರ್ಮದ ಬರುವುದಿಲ್ಲ ಅಂತ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.