ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಕೆಲ ತಿಂಗಳುಗಳಿಂದ ರೈತರ ಪ್ರತಿಭಟನೆ (Farmer protest) ನಡೆಯುತ್ತಿದೆ. ರಾಜಕಾರಣಿಗಳು, ನಟ ನಟಿಯರು ಈ ಬಗ್ಗೆ  ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ರೈತರ ಪ್ರತಿಭಟನೆಯನ್ನು ಬೆಂಬಲಿಸಿದರೆ, ಇನ್ನು ಕೆಲವರು ಪಿತೂರಿ ಎಂದೂ ಕರೆದಿದ್ದಾರೆ.  ಈ ಮಧ್ಯೆ, ನಟಿ ಸೋನಾಕ್ಷಿ ಸಿನ್ಹಾ ರೈತರಿಗಾಗಿ ಒಂದು ಕವಿತೆಯನ್ನು ಓದಿದ್ದಾರೆ. ಈ ಕವಿತೆ ಇದೀಗ ಸಾಮಾಜಿಕ  ಮಾಧ್ಯಮಗಳಲ್ಲಿ (Social Media) ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಸೋನಾಕ್ಷಿ ಸಿನ್ಹಾ ಅವರ ಭಾವನಾತ್ಮಕ ಪೋಸ್ಟ್ : 
ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕವಿತೆಯನ್ನು ಹಂಚಿಕೊಂಡಿದ್ದಾರೆ. ಕೃಷಿಕರಿಗಾಗಿ ವರದ್ ಭಟ್ನಾಗರ್ ಬರೆದಿರುವ ಈ ಭಾವನಾತ್ಮಕ ಕವನವನ್ನು ಓದುವ ವಿಡಿಯೋವನ್ನು ನಟಿ ಇನ್ಸ್ಟಾಗ್ರಾಮ್ ನಲ್ಲಿ (Instagram) ಹಂಚಿಕೊಂಡಿದ್ದಾರೆ. ಅಲ್ಲದೆ, ದಿನ ನಿತ್ಯ ನಾವು ಬೊಜನ ಮಾಡಲು ಯಾರು ಕಾರಣವೋ ಅವರೆಲ್ಲರಿಗೂ ಈ ಕವಿತೆ ಅರ್ಪಣೆ ಎಂದು ಬರೆದಿದ್ದಾರೆ.


 

 

 

 



 

 

 

 

 

 

 

 

 

 

 

A post shared by Sonakshi Sinha (@aslisona)


 


ಇದನ್ನೂ ಓದಿ : ಬ್ರಹ್ಮಾಂಡದ ಅತ್ಯುತ್ತಮ ನಟಿ ಎಂದು ತನ್ನನ್ನು ತಾನೇ ಹೊಗಳಿ ಟ್ರೋಲ್‌ಗೆ ಸಿಲುಕಿದ Kangana Ranaut


ಸೋನಾಕ್ಷಿ ಸಿನ್ಹಾ ಸೋಷಿಯಲ್ ಮೀಡಿಯಾದಲ್ಲಿ (Social media) ಬಹಳ ಸಕ್ರಿಯರಾಗಿದ್ದಾರೆ. ಟ್ವಿಟರ್ ಗೆ (twitter) ವಿದಾಯ ಹೇಳಿದ ನಂತರ, ನಟಿ ಈಗ ಇನ್ಸ್ಟಾಗ್ರಾಮ್ ಮೂಲಕ ತನ್ನ ವಿಚಾರಗಳನ್ನು ಅಭಿಮಾನಿಗಳ ಮುಂದಿಡುತ್ತಿದ್ದಾರೆ.  ಸೋನಾಕ್ಷಿ ಓದಿರುವ ಕವಿತೆಗೆ ಅಭಿಮನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಸೆಲೆಬ್ರಿಟಿಗಳು ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ರೈತರ ವಿಷಯದಲ್ಲಿ ಸೋನಾಕ್ಷಿ ನಿರಂತರವಾಗಿ ತಮ್ಮ ವಿಚಾರಗಳನ್ನು ಹೇಳುತ್ತಾ ಬಂದಿದ್ದಾರೆ. ಜನವರಿ 26 ರಂದು ನಡೆದ ಹಿಂಸಾಚಾರದ ನಂತರ, ದೆಹಲಿ ಎನ್‌ಸಿಆರ್‌ನಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿರುವ ಕ್ರಮದ ಬಗ್ಗೆಯೂ ಸೋನಾಕ್ಷಿ ತಮ್ಮ ಹೇಳಿಕೆ ನೀಡಿದ್ದರು.


ಇದನ್ನೂ ಓದಿ : ವಿಡಿಯೋ ಶೇರ್ ಮಾಡಿ 3ನೇ ಬಾರಿಗೆ ತಾಯಿಯಾಗುತ್ತಿರುವ ಮಾಹಿತಿ ಹಂಚಿಕೊಂಡ Bollywood ನಟಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.