Sarojini Naidu Biopic: "ಭಾರತದ ಕೋಗಿಲೆ' (Nightingale Of India) ಎಂದೇ ಜನಪ್ರಿಯರಾದ ಸರೋಜಿನಿ ನಾಯ್ಡು (Sarojini Naidu) ಕುರಿತ ಬಯೋಪಿಕ್ (Biopic)​ ಕುರಿತಾದ ಸಿನಿಮಾ (Entertainment News) ಬರುತ್ತಿದೆ. ವಿನಯ್​ ಚಂದ್ರ ನಿರ್ದೇಶನದ ಈ ಚಿತ್ರವು ಇನ್ನಷ್ಟೇ ಶುರುವಾಗಬೇಕಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಚರಣ್​ ಸುವರ್ಣ, ಹನಿ ಚೌಧರಿ ಮತ್ತು ಸಿ.ಬಿ. ಕುಲಕರ್ಣಿ ಜತೆಯಾಗಿ ಈ ಚಿತ್ರವನ್ನು ವಿಸ್ತಾ ಫಿಲಂಸ್ ಮೂಲಕ ನಿರ್ಮಿಸುತ್ತಿದ್ದಾರೆ. ಸರೋಜಿನಿ ನಾಯ್ಡು ಅವರ ಚಿಕ್ಕ ವಯಸ್ಸಿನ  ಪಾತ್ರದಲ್ಲಿ ಸೋನಲ್ (Sonal Mantero)​ ಮಾಂಟೆರೊ ನಟಿಸಿದರೆ, ಹಿರಿವಯಸ್ಸಿನ ಪಾತ್ರವನ್ನು ಶಾಂತಿಪ್ರಿಯ (Shanti Priya) ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಜನಪ್ರಿಯ ನಾಯಕಿಯಾಗಿದ್ದ ಶಾಂತಿಪ್ರಿಯ, ಈ ಚಿತ್ರದ ಮೂಲಕ 28 ವರ್ಷಗಳ ನಂತರ ಅಭಿನಯಕ್ಕೆ ವಾಪಸ್ಸಾಗುತ್ತಿದ್ದಾರೆ. 28 ವರ್ಷಗಳ ನಂತರ ನಟನೆಗೆ ವಾಪಸ್ಸಾಗಿದ್ದೇನೆ. ಇಂಥದ್ದೊಂದು ಅವಕಾಶಕ್ಕೆ ಧನ್ಯವಾದಗಳು. ಇಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದು, ಪಾತ್ರಕ್ಕೆ ಶಕ್ತಿಮೀರಿ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಹಿರಿಯ ನಟಿ ಶಾಂತಿಪ್ರಿಯ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಬಿಗ್‌ ಬಿ​? ಸಿದ್ಧವಾಗುತ್ತಿದೆ ಅಮಿತಾಬ್‌ ಬಚ್ಚನ್ ನಟನೆಯ ಮಿನಿ ಸಿನಿ ಸೀರಿಸ್!​

ಹಿತೇನ್​ ತೇಜ್ವಾನಿ (ಮುಂಬೈ ನಟ) ಮಾತನಾಡುತ್ತಾ,  ಸರೋಜಿನಿ ನಾಯ್ಡು ಅವರ ಜೀವನದಲ್ಲಿ ನಡೆದ ಹಲವು ಪ್ರಮುಖ ವಿಷಯಗಳನ್ನು ಈ ಚಿತ್ರದಲ್ಲಿ ತೆರೆದಿಡಲಾಗುತ್ತಿದೆ. ನಾನು ಸರೋಜಿನಿ ಅವರ ಪತಿ ಗೋವಿಂದರಾಜುಲು ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದೇನೆ. ಸರೋಜಿನಿ ಅವರ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ನಿಜ ಹೇಳಬೇಕೆಂದರೆ, ಅವರಿಗೆ ಗೋವಿಂದ್​ ರಾಜುಲುಬೆನ್ನೆಲುಬಾಗಿದ್ದರು. ಕೊನೆಯವರೆಗೂ ಸಹಕಾರ, ಪ್ರೋತ್ಸಾಹ ನೀಡಿದರು. ಕುಟುಂಬ ಮತ್ತು ಮಕ್ಕಳ ಬಗ್ಗೆ ಯೋಚನೆ ಬೇಡ ಎಂದು ಆಕೆಯನ್ನು ಹುರಿದುಂಬಿಸಿದರು. ಆಕೆಗೆ ಏನು ಇಷ್ಟವಿತ್ತೋ, ಅದೆಲ್ಲವನ್ನೂ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು ಎಂದು ತಮ್ಮ ಪಾತ್ರ ವಿವರಣೆ ನೀಡಿದರು. ನನಗೆ ಮೊದಲಿನಿಂದಲೂ ಒಂದು ಬಯೋಪಿಕ್​ನಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಅದು ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಚರಣ್​ ಸುವರ್ಣ ಮತ್ತು ಹನಿ ಚೌಧರಿ ನನಗೆ ಸುಮಾರು ಏಳು ವರ್ಷಗಳಿಂದ ಪರಿಚಿತರು. ನನ್ನ ಬ್ಯುಸಿನೆಸ್​ ಪಾರ್ಟನರ್​ಗಳು ಸಹ. ಕಥೆ ಹೇಳಿದಾಗ ಬಹಳ ಖುಷಿ ಆಯಿತು. ಸರೋಜಿನಿ ಅವರ ಚಿಕ್ಕವಯಸ್ಸಿನ ಪಾತ್ರ ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕಿಂತ ಮುಂಚಿನ ಪಾತ್ರ ಮಾಡುತ್ತಿರುವುದಾಗಿ ಸೋನಾಲ್ ಮಾಂಟೆರೊ ತಿಳಿಸಿದರು.


ಇದನ್ನೂ ಓದಿ-KGF Chapter 2: ಕೆಜಿಎಫ್‌2 ಸಿನಿಮಾಗೆ ಯಶ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ?

 ಕಳೆದ ಎಂಟು ವರ್ಷಗಳಿಂದ ಸರೋಜಿನಿ ಅವರ ಬಗ್ಗೆ ರೀಸರ್ಚ್​ ಮಾಡುತ್ತಿದ್ದೇನೆ. ಅವರು ಆಗಿನ ಕಾಲಕ್ಕೆ ಸ್ಕಾಲರ್​ಸಿಪ್​ ಪಡೆದು, ಲಂಡನ್​ನಲ್ಲಿ ಓದಿದವರು. ಅವರಿಗೆ ಹಲವು ಭಾಷೆಗಳು ಗೊತ್ತಿತ್ತು. ಭಾರತದ ಪ್ರತಿನಿಧಿಯಾಗಿ ಅವರು ಹಲವು ದೇಶಗಳಿಗೆ ಹೋಗಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 50 ಡಿಗ್ರಿ ಬಿಸಿಲಿನಲ್ಲೂ ಮೂರು ದಿನಗಳ ಕಾಲ ನೀರು ಕುಡಿಯದೇ ಹೋರಾಟ ಮಾಡಿದರು. ಅವರ ಈ ಹೋರಾಟ ಎಲ್ಲರಿಗೂ ಗೊತ್ತಾಗಬೇಕು ಎಂದು ಈ ಚಿತ್ರ ಮಾಡುತ್ತಿದ್ದೇವೆ ಎಂದು ಕಥೆಗಾರ ಧೀರಜ್ ಮಿಶ್ರ ಹೇಳಿದರು.


ಇದನ್ನೂ ನೋಡಿ-Puneet Rajkumar: 102 ಕವಿಗಳು ಬರೆದರು ಅಪ್ಪು ಮೇಲೆ ಕವನ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.