ಕ್ಯಾನ್ಸರ್ ನಿಂದ ಸಹಜ ಸ್ಥಿತಿಗೆ ಸೊನಾಲಿ ಬೇಂದ್ರೆ - ನಮ್ರತಾ ಶಿರೋಡ್ಕರ್
ಮಾಜಿ ಮಿಸ್ ಇಂಡಿಯಾ ಹಾಗೂ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ಸೊನಾಲಿ ಬೇಂದ್ರೆ ಈಗ ಕಾನ್ಸರ್ ನಿಂದ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನವದೆಹಲಿ: ಮಾಜಿ ಮಿಸ್ ಇಂಡಿಯಾ ಹಾಗೂ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ಸೊನಾಲಿ ಬೇಂದ್ರೆ ಈಗ ಕಾನ್ಸರ್ ನಿಂದ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪತಿಯ ಜೊತೆ ಮಹರ್ಷಿ ಚಿತ್ರದ ಚಿತ್ರಿಕರಣಕ್ಕೆ ನ್ಯೂಯಾರ್ಕ್ ಗೆ ತೆರಳಿದ ಸಂದರ್ಭದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಸೊನಾಲಿ ಬೇಂದ್ರೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಈಗ ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನಮ್ರತಾ ಅವರು ಈಗ ಫಿಟ್ ಆಗಿದ್ದಾರೆ ಸಹಜ ಜೀವನ ಸ್ಥಿತಿಗೆ ಮರಳುತ್ತಿದ್ದಾರೆ ಎಂದರು. ಅವಳು ತುಂಬಾ ಗಟ್ಟಿಯಾದ ಮಹಿಳೆ,ಅವರ ಜೊತೆ ಅದ್ಬುತ ಸಮಯವನ್ನು ಕಳೆದೆ,ನಾವು ಈ ಸಂದರ್ಭದಲ್ಲಿ ಹಲವಾರು ಸಂಗತಿಗಳ ಬಗ್ಗೆ ಚರ್ಚೆ ಮಾಡಿದೆವು. ಅವರು ತನ್ನ ಆರೋಗ್ಯದ ಎಲ್ಲ ಕತೆಯನ್ನು ವಿವರಿಸಿದರು.ನಾನು ಆಕೆಯ ಆರೋಗ್ಯದ ಕ್ಷೇಮಕ್ಕೆ ಪ್ರಾರ್ಥಿಸಿದ್ದೇನೆ" ನಮ್ರತಾ ತಿಳಿಸಿದ್ದಾರೆ.
ಸೊನಾಲಿ ಬೇಂದ್ರೆ ಜುಲೈ ತಿಂಗಳಲ್ಲಿ ತಮಗೆ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ್ದರು ಅಂದಿನಿಂದ ಅವರು ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.