ಮುಂಬೈ: ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮುಂಬೈಗೆ ಮರಳಿದ್ದಾರೆ. ಕಳೆದ ಜುಲೈನಿಂದ ನಿರಂತರವಾಗಿ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಗುಣಮುಖರಾಗಿ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. 


COMMERCIAL BREAK
SCROLL TO CONTINUE READING

ಮುದ್ದಿನ ಮಗನ ಜನ್ಮದಿನಕ್ಕೆ ನಟಿ ಸೋನಾಲಿ ಬೇಂದ್ರೆಯ ಭಾವನಾತ್ಮಕ ಬರಹ


ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಉಪೇಂದ್ರರ ಪ್ರೀತ್ಸೆ ಚಿತ್ರದಲ್ಲಿ ಅಭಿನಯಿಸಿದ್ದ ಸೋನಾಲಿ ಬೇಂದ್ರೆ ಒಂದಾನೊಂದು ಕಾಲದಲ್ಲಿ ಬಾಲಿವುಡ್ ಜಗತ್ತನ್ನೇ ಆಳಿದವರು. ತೀವ್ರ ಕ್ಯಾನ್ಸರ್'ನಿಂದ ಬಳಲುತ್ತಿದ್ದ ಸೋನಾಲಿ ಬೇಂದ್ರೆ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಾವು ಕ್ಯಾನ್ಸರ್'ಗೆ ತುತ್ತಾಗಿದ್ದು, ಈ ಹಾದಿಯಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನೂ ಎದುರಿಸಲು ದೃಢ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದರು. 


"ಅನಿರೀಕ್ಷಿತ ಸಂದರ್ಭಗಳು ನಮ್ಮನ್ನು ಕೆಲವೊಮ್ಮೆ ಸಂಕಷ್ಟಕ್ಕೆ ನೂಕುತ್ತವೆ. ಇತ್ತೀಚೆಗೆ ನನಗೆ ಅಪಾಯಕಾರಿ ಕ್ಯಾನ್ಸರ್ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ನನಗೆ ಕ್ಯಾನ್ಸರ್ ಇರುವುದು ಗೊತ್ತೇ ಇರಲಿಲ್ಲ. ಸಣ್ಣ ನೋವಿನ ಕಾರಣದಿಂದ ಕೆಲವು ಪರೀಕ್ಷೆಗೆ ಒಳಗಾಗಬೇಕಾಯಿತು. ಹೀಗಾಗಿ ಈ ಕಾಯಿಲೆ ಇರುವ ಬಗ್ಗೆ ಪತ್ತೆಯಾಗಿದೆ. ನನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರು ನನ್ನ ಸುತ್ತಲೂ ಇದ್ದಾರೆ. ಏನೇ ಕೇಳಿದರೂ ಒದಗಿಸುವ ಬೆಂಬಲ ನೀಡುತ್ತಿದ್ದಾರೆ. ನಾನು ನಿಜಕ್ಕೂ ಅದೃಷ್ಟವಂತೆ. ಎಲ್ಲರಿಗೂ ನಾನು ನಾನು ಋಣಿಯಾಗಿರುತ್ತೇನೆ" ಎಂದು ಸೋನಾಲಿ ಬೇಂದ್ರೆ ತಮ್ಮ ಮನಸಿನ ದುಗುಡವನ್ನು ಹಂಚಿಕೊಂಡಿದ್ದರು.