sonali bendre: ಸಿನಿ ಇಂಡಸ್ಟ್ರಿಯಲ್ಲಿ ಹೀರೋ, ಹೀರೋಯಿನ್‌ಗಳ ಬಗ್ಗೆ ವದಂತಿಗಳು ಸಾಮಾನ್ಯ. ಅದು ಹೇಗೆ ಹುಟ್ಟುತ್ತದೆ ಎಂದು ಯಾರಿಗೂ ಸಾಮಾನ್ಯವಾಗಿ ತಿಳಿಯುವುದಿಲ್ಲ. ಆದರೆ ನಿರ್ಮಾಪಕರು ತಮ್ಮ ಸಿನಿಮಾಗಳಿಗೆ ಹೈಪ್ ಕ್ರಿಯೇಟ್ ಮಾಡಲು ನಾಯಕ-ನಾಯಕಿಯರ ಬಗ್ಗೆ ಈ ರೀತಿಯ ರೂಮರ್ ಕ್ರಿಯೇಟ್ ಮಾಡುತ್ತಾರೆ ಎಂದು ನಟಿ ಸೋನಾಲಿ ಬೇಂದ್ರೆ ಹೇಳಿದ್ದಾರೆ. ನಟಿ ಸೋನಾಲಿ ಬೇಂದ್ರೆ ಅವರ ಈ ಸೆನ್ಸೇಷನಲ್‌ ಕಾಮೆಂಟ್ ಇದೀಗ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.


COMMERCIAL BREAK
SCROLL TO CONTINUE READING

ಸೋನಾಲಿ ಬೇಂದ್ರೆ 1994 ರಲ್ಲಿ, ಅವರು 'ಆಗ್' ಚಿತ್ರದ ಮೂಲಕ ಹಿಂದಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಅದಕ್ಕೂ ಮೊದಲು ಮಾಡೆಲಿಂಗ್ ಮಾಡುತ್ತಿದ್ದರು. ಆ ನಂತರ ಆಕೆಗೆ ಸಿನಿಮಾಗಳಲ್ಲಿ ಅವಕಾಶಗಳು ಬಂದವು. ಹಿಂದಿಯಲ್ಲಿ ಬಹುತೇಕ ಎಲ್ಲ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ.  


ಒಂದು ಕಾಲದಲ್ಲಿ ಯುವಕರ ಮನಕದ್ದಿದ್ದ ನಟಿ ಸೋನಾಲಿ ಬೇಂದ್ರೆ  ಮದುವೆಯಾದ ಬಳಿಕ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿದ್ದರು. ಆ ಬಳಿಕ ಹಲವಾರು ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿದ ನಟಿ ಸೋನಾಲಿ ಬೇಂದ್ರೆ ಮತ್ತೆ ಸಾಮಾನ್ಯ ವ್ಯಕ್ತಿಯಾದರು. ಇದೀಗ ನಟಿ ಸೋನಾಲಿ ಬೇಂದ್ರೆ ಹಿಂದಿಯ ಅನೇಕ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 


ಇದನ್ನೂ ಓದಿ: Komal Kumar : ಕೋಮಲ್‌ ಪತ್ನಿ ಖ್ಯಾತ ನಿರ್ಮಾಪಕಿ.. ಪತಿಗಾಗಿ ವಿದೇಶದಲ್ಲಿನ ಕೆಲಸ ತೊರೆದು ಬಂದ ಇವರು ಯಾರು ಗೊತ್ತೇ!? 


ಇತ್ತೀಚಿಗೆ ನಟಿ ಸೋನಾಲಿ ಬೇಂದ್ರೆ ತಾವು ಸಿನಿಮಾದಲ್ಲಿ ನಟಿಸುವ ಸಮಯದಲ್ಲಿ ನಡೆದ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಆ ವೇಳೆ ನಾಯಕ-ನಾಯಕಿ ನಡುವೆ ಸಂಬಂಧದ ವದಂತಿ ಹೇಗೆ ಹಬ್ಬುತ್ತದೆ ಎಂಬ ಬಗ್ಗೆ ಪ್ರಸ್ತಾಪಿಸಿದ್ದಾರೆ. 


ನಾಯಕಿಯಾಗಿ ಎಂಟ್ರಿ ಕೊಟ್ಟ ನಂತರ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳ ಪ್ರಚಾರಕ್ಕಾಗಿ ಈ ರೀತಿ ಸುದ್ದಿಗಳನ್ನು ಹುಟ್ಟು ಹಾಕುತ್ತಾರೆ. ನಿರ್ಮಾಪಕರಾಗಲು ಬಯಸುವ ನಾಯಕ ಮತ್ತು ನಾಯಕಿಯರ ನಡುವೆ ಏನೂ ಇಲ್ಲದಿದ್ದರೂ, ಅವರು ವದಂತಿಗಳನ್ನು ಹರಡಲು ಪ್ರೇರೆಪಿಸುತ್ತಾರೆ. ತಮ್ಮ ಚಿತ್ರಗಳತ್ತ ಗಮನ ಸೆಳೆಯುವುದರ ಸಲುವಾಗಿ ಹೀಗೆ ಮಾಡುತ್ತಾರೆ ಎಂದು ಸೋನಾಲಿ ಹೇಳಿದ್ದಾರೆ. ಬಾಲಿವುಡ್‌ ಖ್ಯಾತ ನಟಿ ಸೋನಾಲಿ ಬೇಂದ್ರೆ ಅವರ ಈ ಮಾತುಗಳು ಸಿನಿವಲಯದಲ್ಲಿ ಸಂಚಲನ ಮೂಡಿಸಿದೆ.


ಇದನ್ನೂ ಓದಿ: ಐಶ್ವರ್ಯಾ, ಕತ್ರಿನಾ ಅಲ್ಲ... ನಟ ಸಲ್ಮಾನ್​ ಖಾನ್ ಈ ನಟಿಯ ಬಳಿ ಹೋಗಿ ನನ್ನನ್ನು ಮದುವೆ ಆಗ್ತೀಯಾ ಎಂದು ಕೇಳಿದ್ರಂತೆ! ಖ್ಯಾತ ನಿರ್ದೇಶಕನ ಸೊಸೆ ಈಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.