BBK OTT: ಬಿಗ್ ಬಾಸ್ ಮನೆಯಲ್ಲಿ ಸ್ಫೂರ್ತಿ ಗೌಡ - ಸೋನು ಗೌಡ ಜಗಳಕ್ಕೆ ಕಾರಣವಾದ `ಡವ್‌ರಾಣಿ`
Bigg Boss Kannada OTT : ಬಿಗ್ ಬಾಸ್ ನಲ್ಲಿ ಜಗಳ, ಕಿತ್ತಾಟಗಳೇನು ಹೊಸದಲ್ಲ. ಇದೀಗ ಬಿಗ್‌ಬಾಸ್ ಕನ್ನಡ ಓಟಿಟಿ ಸೀಸನ್ 1 ಆರಂಭವಾಗಿ 3 ದಿನಗಳು ಕಳೆದಿವೆ. ಇದೀಗ ನಿಧಾನವಾಗಿ ಮನೆಯಲ್ಲಿ ಜಗಳಗಳು ಶುರುವಾಗುತ್ತಿವೆ. ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ಸ್ಫೂರ್ತಿ ಹಾಗೂ ಸೋನು ಗೌಡ ನಡುವೆ ಮನಸ್ತಾಪ ಜಾಸ್ತಿ ಆಗಿದೆ.
Bigg Boss Kannada OTT : ಬಿಗ್ ಬಾಸ್ ನಲ್ಲಿ ಜಗಳ, ಕಿತ್ತಾಟಗಳೇನು ಹೊಸದಲ್ಲ. ಇದೀಗ ಬಿಗ್‌ಬಾಸ್ ಕನ್ನಡ ಓಟಿಟಿ ಸೀಸನ್ 1 ಆರಂಭವಾಗಿ 3 ದಿನಗಳು ಕಳೆದಿವೆ. ಇದೀಗ ನಿಧಾನವಾಗಿ ಮನೆಯಲ್ಲಿ ಜಗಳಗಳು ಶುರುವಾಗುತ್ತಿವೆ. ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ಸ್ಫೂರ್ತಿ ಹಾಗೂ ಸೋನು ಗೌಡ ನಡುವೆ ಮನಸ್ತಾಪ ಜಾಸ್ತಿ ಆಗಿದೆ. ಸ್ಫೂರ್ತಿಗೆ ಎಲ್ಲ ಗೊತ್ತಾದರೂ ಗೊತ್ತಿಲ್ಲದ ಹಾಗೆ ಸುಮ್ಮನೆ ನಗುತ್ತಾಳೆ, ಡವ್‌ರಾಣಿ ಅಂತ ಸೋನು ಶ್ರೀನಿವಾಸ ಅವರು ಮಾಡಿದ ಕಾಮೆಂಟ್ ಈಗ ಈ ಜಡೆ ಜಗಳಕ್ಕೆ ಕಾರಣವಾಗಿದೆ. ಸೋನು ಅವರ ಈ ಮಾತು ಸ್ಫೂರ್ತಿ ಅವರ ಕೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ : BBK OTT : ರಾಕೇಶ್ - ರೂಪೇಶ್ ನಡುವೆ ನಿಜವಾಗ್ಲೂ ನಡೀತಾ ಕಿರಿಕ್!?
ಸೋನು ಗೌಡ, ರಾಕೇಶ್ ಮಾತನಾಡುವ ವೇಳೆ ಅಲ್ಲಿ ಯಾವುದೇ ರೀತಿ ಜೋಕ್, ಕಾಮಿಡಿ ಇಲ್ಲದಿದ್ದರೂ ಸಹ ಸ್ಫೂರ್ತಿ ನಗುತ್ತಾರೆ. ಇದು ಸೋನು ಗೌಡ ಅವರ ಬೇಸರಕ್ಕೆ ಕಾರಣವಾಗಿದೆ. ಸ್ಫೂರ್ತಿ ನನ್ನ ಬಗ್ಗೆ ಅಕ್ಷತಾ, ರಾಕೇಶ್ ಬಳಿ ಮಾತನಾಡುತ್ತಾಳೆ ಎನ್ನುವ ವಿಷಯ ಇಟ್ಟುಕೊಂಡು ಸೋನು ಜಗಳ ಆರಂಭಿಸಿದರು. ನನ್ನ ಬಗ್ಗೆ ಏನೇ ಇದ್ದರೂ ನೇರವಾಗಿ ಮಾತನಾಡು, ಬೇರೆಯವರ ಹತ್ತಿರ ಯಾಕೆ ನನ್ನ ವಿಷಯವನ್ನು ಮಾತನಾಡಿದೆ ಎಂದು ಸ್ಫೂರ್ತಿ ಗೌಡ ಜೊತೆ ಸೋನು ಗೌಡ ವಾದಕ್ಕಿಳಿಯುತ್ತಾರೆ. ಆಗ, ನಾನು ಇರೋದೇ ಹೀಗೆ ಗುರು, ಹಿಂಗೆ ಇರೋದು ಗುರು ಎಂದು ಸ್ಫೂರ್ತಿ ವಾದ ಮಾಡುತ್ತಾರೆ.
ಇವರಿಬ್ಬರ ಜಡೆ ಜಗಳದ ಮಧ್ಯೆ, ರಾಕೇಶ್ ಅವರು ಬರುತ್ತಾರೆ. ಸ್ಫೂರ್ತಿ ನನ್ನ ನೋಡಿ ನಕ್ಕಿದ್ದು, ನಾವಾಡಿದ ಮಾತಿಗಲ್ಲ ಎಂದು ಸೋನು ಗೌಡ ಹೇಳುತ್ತಾರೆ. ಆದರೂ ಇವರಿಬ್ಬರ ಜಗಳ ಮಾತ್ರ ಮುಗಿಯಲ್ಲ. ಯಾರೂ ಇಲ್ಲಿ ನನ್ನ ಫೀಲಿಂಗ್ಸ್ ಅರ್ಥ ಮಾಡಿಕೊಳ್ಳೋದಿಲ್ಲ ಅಂದ್ರೆ ಹೇಗೆ? ಯಾರಿಗಾದರೂ ಏನಾದರೂ ಹೇಳಿದರೆ ಅದನ್ನು ತಗೊಬೇಕು, ಆದರೆ ತಗೊಳ್ಳೋದೇ ಇಲ್ಲ ಎನ್ನುತ್ತಾ ಸೋನು ಗೌಡ ಬೇಸರ ವ್ಯಕ್ತಪಡಿಸುತ್ತಾರೆ. ಸೋನು ಗೌಡ ಈಗಾಗಲೇ ಆರ್ಯವರ್ಧನ್ ಗುರೂಜಿ, ಅರ್ಜುನ್ ರಮೇಶ್ ಬಳಿ ಜಗಳ ಮಾಡಿಕೊಂಡಿದ್ದಾರೆ. ಉದಯ್ ಸೂರ್ಯಗೆ ಕೂಡ ಸೋನು ಮಾತು ಕಿರಿಕಿರಿ ಉಂಟು ಮಾಡುತ್ತಿದೆ.
ಇದನ್ನೂ ಓದಿ : Bigg Boss Kannada OTT : ಸ್ಫೂರ್ತಿ ಗೌಡ ಮೇಲೆ ರಾಕೇಶ್ಗೆ ಲವ್ ಆಗೋಯ್ತಾ?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.