ನವದೆಹಲಿ: ಖ್ಯಾತ ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರಿಗಾಗಿ ಶ್ರಮಿಸಿ ದೇಶದ ನಾಗರಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ, ಅವರ ಈ ಉದಾತ್ತ ಮನೋಭಾವದ ಕಾರಣ ಸೋನು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಶಂಸೆ ಪಡೆಯುತ್ತಿದ್ದಾರೆ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸೋನು ಭಾರಿ ಸಕ್ರೀಯರಾಗಿದ್ದು, ನಿರಂತರವಾಗಿ ಅಪ್ಡೇಟ್ ಗಳನ್ನೂ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಅವರು ಅಭಿಮಾನಿಗಳ ಜೊತೆಗೆ ಸಂಪರ್ಕ ಕೂಡ ಸಾಧಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮದಲ್ಲಿ ಹಲವರು ತಮ್ಮ ಕುಟುಂಬ ಸೇರಲು ಕಾತರರಾಗಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸೋನು, ತನ್ನ ಎಲ್ಲ ಬಾಂಧವರನ್ನು ಅವರ ಕುಟುಂಬ ಸದಸ್ಯರಿಗೆ ಸೇರಿಸುವಲ್ಲಿ ಭಾರಿ ಶ್ರಮಿಸುತ್ತಿದ್ದಾರೆ. ಈ ಕುರಿತು ಟ್ವೀಟ್ ಗಳಿಗೆ ಉತ್ತರಿಸುತ್ತಿರುವ ಸೋನು, ನಾನು ನಿಮ್ಮೆಲ್ಲರಿಗೆ ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಭೇಟಿ ಮಾಡಿಸುವೆ ಎಂದು ಪ್ರಮಾಣ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಲಾಕ್ ಡೌನ್ ನಲ್ಲಿ ಸಿಲುಕಿಕೊಂಡ ಪ್ರವಾಸಿ ಕಾರ್ಮಿಕರಿಗೆ ಅವರ ಕುಟುಂಬ ಸದಸ್ಯರ ಜೊತೆಗೆ ಸೇರಿಸಲು ಸೋನು ಸಿದ್ಧತೆ ನಡೆಸುತ್ತಿದ್ದಾರೆ.



ಸೋನು ತಮ್ಮ ಈ ಕಾರ್ಯದಲ್ಲಿ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಸದ್ಯ ಅವರು ಪ್ರವಾಸಿ ಕಾರ್ಮಿಕರಿಗಾಗಿ ತಮ್ಮ ಪುಟದಲ್ಲಿ ತಮ್ಮ ಕಾಂಟಾಕ್ಟ್ ನಂಬರ್ ಕೂಡ ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಸೋನು, "ನನ್ನ ನೆಚ್ಚಿನ ವಲಸೆ ಕಾರ್ಮಿಕರೆ ಹಾಗೂ ಸಹೋದರಿಯರೇ, ಒಂದು ವೇಳೆ ನೀವೂ ಕೂಡ ಮುಂಬೈನಲ್ಲಿದ್ದು, ನಿಮ್ಮ ನಿಮ್ಮ ಮನೆಗಳಿಗೆ ಹೋಗ ಬಯಸುತ್ತಿದ್ದರೆ ದಯವಿಟ್ಟು 180012133711 ನಂಬರ್ ಗೆ ಕರೆ ಮಾಡಿ ಅಥವಾ 9321472118 ಈ ವಾಟ್ಸ್ ಆಪ್ ನಂಬರ್ ಮೇಲೆ ನಿಮ್ಮ ಹೆಸರು ಹಾಗೂ ವಿಳಾಸ ಕಳುಹಿಸಿ. ಅಷ್ಟೇ ಅಲ್ಲ ನೀವು ಎಷ್ಟು ಜನರಿದ್ದೀರಿ ಹಾಗೂ ಎಲ್ಲಿಗೆ ಹೋಗಬಯಸುತ್ತಿದ್ದೀರಿ ಎಂಬುದನ್ನು ನಮಗೆ ತಿಳಿ. ನಮ್ಮ ತಂಡ ಆದಷ್ಟು ಶೀಘ್ರದಲ್ಲಿ ನಿಮ್ಮನ್ನು ಸಂಪರ್ಕಿಸಲಿದೆ.. ಧನ್ಯವಾದಗಳು" ಎಂದು ಹೇಳಿದ್ದಾರೆ.



ಸೋನು ಸೂದ್ ಅವರ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಬಳಕೆದಾರರೊಬ್ಬರು, " ಸೋನು ಸೂದ್ ಸರ್..ಉತ್ತರ ಪ್ರದೇಶ ಮೂಲದ ನನ ಸಹೋದರ ಶಹಜೇಬ್ ಕಳೆದ ಆರು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಹಿಂದಿರುಗಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ಆದರೆ ಅವರಿಗೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಉತ್ತರ ಪ್ರದೇಶದ ಯಾವುದೇ ನಗರಕ್ಕೆ ತಲುಪಲು ಅವರಿಗೆ ಸಹಾಯ ಮಾಡಿ. ಇದರಿಂದ ನಾನು ಮತ್ತೆ ಅವರನ್ನು ಭೇಟಿ ಮಾಡಬಹುದು"



ಇದೇ ರೀತಿ ಹಲವು ಜನರು ಸೋನು ಅವರ ಬಳಿ ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿದ್ದಾರೆ ಹಾಗೂ ಸೋನು ಸೂದ್ ಕೂಡ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಸೋನು ಸೂದ್ ತಮ್ಮ ಸ್ವಂತ ಹಣದಿಂದ ಬಸ್ಸುಗಳನ್ನು ಕಾಯ್ದಿರಿಸುವ ಮೂಲಕ ವಲಸೆ ಕಾರ್ಮಿಕರಿಗೆ ಅವರ ಮನೆ ತಲುಪಲು ಸಹಾಯ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸೋನು, " ಪ್ರತಿಯೊಬ್ಬ ವಲಸೆ ಕಾರ್ಮಿಕ ತನ್ನ ಮನೆಗೆ ತಲುಪುವವರೆಗೆ ನಾನು ನನ್ನ ಅಭಿಯಾನವನ್ನು ಮುಂದುವರೆಸುತ್ತೇನೆ ಇದಕ್ಕಾಗಿ ಎಷ್ಟು ಶ್ರಮ ಮತ್ತು ಕಠಿಣ ಪರಿಶ್ರಮ ಪಡಬೇಕಾದರು ನಾನು ಅದಕ್ಕೆ ಸಿದ್ಧ. ಕೊನೆಯ ಕಾರ್ಮಿಕ ತನ್ನ ಮನೆಗೆ ತಲುಪುವವರೆಗೆ ನಾನು ಶಾಂತಿಯುತವಾಗಿ ಬದುಕಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.