ನವದೆಹಲಿ: ಸೂಪರ್ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ಈಗ ತಮ್ಮ ಎರಡನೇ ಮದುವೆಗೆ ಸಿದ್ದತೆ ನಡೆಸಿದ್ದಾರೆ. ಈಗ ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮದುವೆ ಫೆಬ್ರವರಿ 11, 2019 ರಂದು ನಟ-ಉದ್ಯಮಿ ವಿಷಗನ್ ವನಂಗಮುಡಿಯೊಂದಿಗೆ ಚೆನ್ನೈನಲ್ಲಿ ನಡೆಯಲಿದೆ. ಈಗ ಟ್ವಿಟ್ಟರ್ ನಲ್ಲಿ ಮದುವೆಗೆ ಒಂದು ವಾರವಷ್ಟೇ ಬಾಕಿ ಎಂದು ಅವರು ಬರೆದುಕೊಂಡಿದ್ದಾರೆ



COMMERCIAL BREAK
SCROLL TO CONTINUE READING

ಈ ಮೊದಲು ಕೈಗಾರಿಕೋದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದ ಸೌಂದರ್ಯ, ಏಳು ವರ್ಷಗಳ ನಂತರ ಈ ಜೋಡಿಯು 2016ರಲ್ಲಿ ವಿಚ್ಛೇದನ ಪಡೆಯಿತು. ಈಗ ಆರು ವರ್ಷದ ಮಗನಾದ ವೇಡ್ ಕೃಷ್ಣ ಸೌಂದರ್ಯ ಜೊತೆಗೆ ವಾಸಿಸುತ್ತಿದ್ದಾನೆ.


ಸೌಂದರ್ಯ ತಮ್ಮ 'ಕೊಚಡೈಯಾನ್' ಮತ್ತು 'ವಿಐಪಿ 2'  ಸಿನಿಮಾಗಳಿಂದ ಖ್ಯಾತಿ ಪಡೆದಿದ್ದಾರೆ.ಮೊದಲು ಸಿನಿಮಾ ರಂಗಕ್ಕೆ ಗ್ರಾಫಿಕ್ ಡಿಸೈನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಸೌಂದರ್ಯ 'ಬಾಬಾ','ಮಾಜಾ', 'ಸ್ಯಾಂಡೋಕೋಜಿ' ಮತ್ತು 'ಸಿವಾಜಿ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2018ರಲ್ಲಿ ತಮಿಳ್ ಥ್ರಿಲ್ಲರ್ ಸಿನಿಮಾ 'ವಂಜಗರ್ ಉಲಗಂ' ಚಿತ್ರದಲ್ಲಿ ನಟನೆಯನ್ನು ಮಾಡಿದ್ದರು.ಈಗ ಈ ವಿವಾಹ ಸಮಾರಂಭದಲ್ಲಿ ಕೇವಲ ನಿಕಟ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.