Vijay Devarakonda: ರಶ್ಮಿಕಾ ಮಂದಣ್ಣ ಅಲ್ಲ.. ಇವರೊಂದಿಗೆ ರಿಲೇಷನ್ಶಿಪ್ನಲ್ಲಿದ್ದಾರೆ ನಟ ವಿಜಯ್ ದೇವರಕೊಂಡ!!
Vijay Devarakonda About His Relationship: ಸೌತ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ `ದಿ ಫ್ಯಾಮಿಲಿ ಸ್ಟಾರ್`ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ನಟ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
Vijay Devarakonda Relationship: ಸೌತ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ 'ದಿ ಫ್ಯಾಮಿಲಿ ಸ್ಟಾರ್'ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು.. ವಿಜಯ್ ಈ ಚಿತ್ರದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ನಟ ತಮ್ಮ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಹೆಸರು ನಿರಂತರವಾಗಿ ಕೇಳಿಬರುತ್ತಿದೆ. ಅಲ್ಲದೇ ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೆಲ್ಲದರ ಮಧ್ಯ ನಟ ಇದೀಗ ತಮ್ಮ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ-Ranbir Kapoor Daughter: ಐಷಾರಾಮಿ ಬಂಗಲೆಯ ಒಡತಿಯಾದ ರಣಬೀರ್-ಆಲಿಯಾ ಪುತ್ರಿ: ಇದರ ಬೆಲೆಯೆಷ್ಟು ಗೊತ್ತೇ??
ಇತ್ತೀಚೆಗೆ ವಿಜಯ್ ದೇವರಕೊಂಡ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು.. ಆಗ ಆಂಕರ್ ನಟನಿಗೆ 'ವಿಜಯ್ ಸಂಬಂಧದಲ್ಲಿದ್ದಾರೆಯೇ?' ಎಂದು ಕೇಳಿದಾಗ ಆಗ ರೌಡಿಬಾಯ್ ಸ್ವಲ್ಪ ಹೊತ್ತು ಸುಮ್ಮನಾಗಿ ನಂತರ "ಹೌದು, ನಾನು ನನ್ನ ಹೆತ್ತವರೊಂದಿಗೆ, ಸಹೋದರನೊಂದಿಗೆ ಮತ್ತು ನಿಮ್ಮೊಂದಿಗೆ ಸಂಬಂಧದಲ್ಲಿದ್ದೇನೆ" ಎಂದು ಮಸ್ತ್ ಆಗಿ ಉತ್ತರ ನೀಡಿದ್ದಾರೆ..
ಇದನ್ನೂ ಓದಿ-Ramana Avatara: ಶೀಘ್ರದಲ್ಲೇ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ ʻರಾಮನ ಅವತಾರʼ: ರಿಲೀಸ್ ಡೇಟ್ ಫಿಕ್ಸ್!
ಆದರೆ ಇತ್ತೀಚೆಗೆ ರಶ್ಮಿಕಾ ವಿಜಯ್ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು.. ಅದರಲ್ಲಿ ವಿಜಯ್ ದೇವರಕೊಂಡ ಅವರಿಗೆ ಡಾರ್ಲಿಂಗ್ ಎಂದು ಕರೆದಿದ್ದರು.. ಇದಕ್ಕೆ ಪ್ರತಿಕ್ರಿಯೆಯಾಗಿ ವಿಜಯ್ ಕ್ಯೂಟೆಸ್ಟ್ ಎಂದಿದ್ದರು.. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿತ್ತು..
ಇನ್ನು ವಿಜಯ್ ದೇವರಕೊಂಡ ಜೊತೆಗೆ ನಟಿ ಮೃಣಾಲ್ ಠಾಕೂರ್ 'ದಿ ಫ್ಯಾಮಿಲಿ ಸ್ಟಾರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ನಿರ್ದೇಶಕ ಪರಶುರಾಮ್ ಪಟೇಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು.. ಮಾರ್ಚ್ 28 ರಂದು ಚಿತ್ರದ ಟ್ರೇಲರ್ ಬಿಡುಗಡೆಗೊಂಡು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.. ಈಗ ಅಭಿಮಾನಿಗಳು ಈ ಸಿನಿಮಾ ರಿಲೀಸ್‌ಗಾಗಿ ಕಾತುರದಿಂದ ಕಾಯುತ್ತಿದ್ದು.. ಚಿತ್ರ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಪ್ರಿಲ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.